Showing posts with label ಸುವಿಲಾಸ ಮೋಹಗಳ ಕುವಿಕಾರ ಭಾವಗಳ. Show all posts
Showing posts with label ಸುವಿಲಾಸ ಮೋಹಗಳ ಕುವಿಕಾರ ಭಾವಗಳ. Show all posts

Friday, November 18, 2011

ಸುವಿಲಾಸ ಮೋಹಗಳ ಕುವಿಕಾರ ಭಾವಗಳ (106)


ಸುವಿಲಾಸ ಮೋಹಗಳ ಕುವಿಕಾರ ಭಾವಗಳ |
ಕವಿತೆ ಸಂಗೀತಗಳ ಕೋಪತಾಪಗಳ ||
ಅವಿವೇಕ ಘೋಷಗಳ ಸುವಿಚಾರ ಮೌನಗಳ |
ಹವಣೆಲ್ಲ ಶಿವಲೀಲೆ - ಮರುಳ ಮುನಿಯ || (೧೦೬)

ಸೊಗಸೆನಿಸುವ ಸೆಳೆತಗಳ, ದುಷ್ಟಭಾವದ ವಿಚಾರಗಳ, ಸುಂದರ ಕವಿತೆಗಳ, ಸುಶ್ರಾವ್ಯ ಸಂಗೀತದ, ಉಗ್ರ ಕೋಪದ, ಅಸಹನೀಯ ತಾಪದ ಮತ್ತು ಮೂರ್ಖತನದ ಹೇಳಿಕೆಗಳ ಎಲ್ಲ ವಿದ್ಯಮಾನಗಳು ಭಗವಂತನ ಲೀಲಾ ವಿನೋದಗಳಾಗಿವೆ.