Showing posts with label ಹುಟ್ಟದಿರುವನು ನೀನು ಸಾಯದಿರುವನು ನೀನು. Show all posts
Showing posts with label ಹುಟ್ಟದಿರುವನು ನೀನು ಸಾಯದಿರುವನು ನೀನು. Show all posts

Tuesday, January 10, 2012

ಹುಟ್ಟದಿರುವನು ನೀನು ಸಾಯದಿರುವನು ನೀನು (139)

ಹುಟ್ಟದಿರುವನು ನೀನು ಸಾಯದಿರುವನು ನೀನು |
ಹುಟ್ಟುಸಾವುಗಳಾಟವಾಡುವನು ನೀನು ||
ಕೆಟ್ಟುದೊಳಿತುಗಳೆರಡುಮಂಟದಿರ‍್ಪನು ನೀನು |
ಒಟ್ಟು ವಿಶ್ವವೆ ನೀನು - ಮರುಳ ಮುನಿಯ || (೧೩೯)

(ಹುಟ್ಟುಸಾವುಗಳ+ಆಟ+ಆಡುವನು)(ಕೆಟ್ಟುದು+ಒಳಿತುಗಳ್+ಎರಡುಂ+ಅಂಟದೆ+ಇರ‍್ಪನು)

ನೀನು ಹುಟ್ಟದೆ ಇರುವವನು. ನೀನು ಸಾಯುವುದೂ ಇಲ್ಲ. ಹುಟ್ಟು ಮತ್ತು ಸಾವುಗಳ ಆಟವನ್ನು ಮಾತ್ರ ನೀನು ಆಡುತ್ತಿರುವೆ. ಕೆಟ್ಟದು ಮತ್ತು ಒಳ್ಳೆಯದು, ಇವೆರಡಕ್ಕೂ ಅಂಟಿಕೊಳ್ಳದವನು ನೀನು. ಸಕಲ ಜಗತ್ತೇ ನೀನು.