Showing posts with label ಕಡಲಿಂಗೆ ಧುಮ್ಮಿಕ್ಕಿ ಕಣ್ಮೂಗುಗಳ ಬಿಗಿದು. Show all posts
Showing posts with label ಕಡಲಿಂಗೆ ಧುಮ್ಮಿಕ್ಕಿ ಕಣ್ಮೂಗುಗಳ ಬಿಗಿದು. Show all posts

Thursday, June 2, 2011

ಕಡಲಿಂಗೆ ಧುಮ್ಮಿಕ್ಕಿ ಕಣ್ಮೂಗುಗಳ ಬಿಗಿದು (18)


ಕಡಲಿಂಗೆ ಧುಮ್ಮಿಕ್ಕಿ ಕಣ್ಮೂಗುಗಳ ಬಿಗಿದು |
ಮುಳುಗಿ ತಡಕಾಡಿ ಮೇಲ್ಬಂದು ದಡ ಸೇರ‍್ವ ||
ಕಡಲಾಡಿವೋಲ್ಬೊಮ್ಮಚೈತನ್ಯವಾಡುವುದು |
ಪೊಡವಿಯಾ ಮಡುವಿನಲಿ - ಮರುಳ ಮುನಿಯ || (೧೮)

(ಕಣ್+ಮೂಗುಗಳ) (ಕಡಲಾಡಿ+ವೋಲ್+ಬೊಮ್ಮ+ಚೈತನ್ಯವು+ಆಡುವುದು)

ಕಣ್ಣು ಮತ್ತು ಮೂಗುಗಳನ್ನು ಬಿಗಿದುಕೊಂಡು ಸಮುದ್ರ(ಕಡಲು)ದೊಳಕ್ಕೆ ಅದರಲ್ಲಿ ಮುಳುಗಿ ತಡಕಾಡಿ ನಂತರ ಮೇಲೆ ಬಂದು ದಡವನ್ನು ಸೇರುವ ಕಡಲಾನ್ವೇಷಕನಂತೆ (ಕಡಲಾಡಿ) ಪರಬ್ರಹ್ಮನ ಚೇತನದ ಶಕ್ತಿ ಈ ಪ್ರಪಂಚದ (ಪೊಡವಿ) ಮಡುವಿನಲ್ಲಿ ಆಡುತ್ತಿರುತ್ತದೆ.