Showing posts with label ಪೌರುಷಪರೀಕ್ಷೆ ನಿತ್ಯದ ಕೃತ್ಯ ದೈವಕ್ಕೆ. Show all posts
Showing posts with label ಪೌರುಷಪರೀಕ್ಷೆ ನಿತ್ಯದ ಕೃತ್ಯ ದೈವಕ್ಕೆ. Show all posts

Thursday, August 21, 2014

ಪೌರುಷಪರೀಕ್ಷೆ ನಿತ್ಯದ ಕೃತ್ಯ ದೈವಕ್ಕೆ (651)

ಪೌರುಷಪರೀಕ್ಷೆ ನಿತ್ಯದ ಕೃತ್ಯ ದೈವಕ್ಕೆ- |
ದಾರನುಮದೆಂದುಮದು ಶೋಧಿಸದೆ ಬಿಡದು ||
ದಾರುಣದಿನೋ ವಾರುಣಿಯಿನೋ ಎಂತೊ ಅದು |
ಧೀರತೆಯ ಪರಿಕಿಪುದು - ಮರುಳ ಮುನಿಯ || (೬೫೧)

(ದೈವಕ್ಕೆ+ಅದು+ಆರನುಂ+ಅದು+ಎಂದುಂ+ಅದು)

ಮನುಷ್ಯನ ಪೌರುಷವನ್ನು ಪರೀಕ್ಷೆಗಳಿಗೊಳಪಡಿಸುವುದು ದೈವದ ಪ್ರತಿನಿತ್ಯದ ಕೆಲಸ. ಅದು ಎಂದೆಂದಿಗೂ ಮತ್ತು ಯಾರನ್ನೂ ಪರೀಕ್ಷೆಗೆ ಒಳಗಾಗಿಸದೆ ಬಿಡದು. ಕ್ರೌರ್ಯ(ದಾರುಣ)ದಿಂದಲೋ ಅಥವಾ ಮತ್ತೇರಿಸುವ ಪದಾರ್ಥಗಳಿಂದಲೋ(ವಾರುಣಿ) ಹೇಗಾದರೂ ಸರಿ ಅದು ಅವನ ಧೈರ್ಯ ಮತ್ತು ದಿಟ್ಟತವವನ್ನು ಪರೀಕ್ಷಿಸುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Testing human valour is a daily routine to Fate
He would never exempt anyone but would always test every one,
Torturing or intoxicating or somehow,
He would never rest till He tests human valour – Marula Muniya (651)
(Translation from "Thus Sang Marula Muniya" by Sri. Narasimha Bhat)