Showing posts with label ಸದ್ಯಸ್ಕಲೌಕಿಕಕೆ ಸರಿ ಭೌತವಿಜ್ಞಾನ. Show all posts
Showing posts with label ಸದ್ಯಸ್ಕಲೌಕಿಕಕೆ ಸರಿ ಭೌತವಿಜ್ಞಾನ. Show all posts

Wednesday, April 25, 2012

ಸದ್ಯಸ್ಕಲೌಕಿಕಕೆ ಸರಿ ಭೌತವಿಜ್ಞಾನ (198)

ಸದ್ಯಸ್ಕಲೌಕಿಕಕೆ ಸರಿ ಭೌತವಿಜ್ಞಾನ |
ಭೇದ್ಯವದರಿಂದೆಂತು ಪರತತ್ತ್ವಸೀಮೆ ? ||
ಖಾದ್ಯರಸಗಳನರಿವ ನಾಲಗೆಗೆ ಗಾನರಸ |
ವೇದ್ಯವಹುದೆಂತಯ್ಯ - ಮರುಳ ಮುನಿಯ || (೧೯೮)

(ಭೇದ್ಯ+ಅದರಿಂದ+ಎಂತು)(ಖಾದ್ಯರಸಗಳನ್+ಅರಿವ)(ವೇದ್ಯ+ಅಹುದು+ಎಂತಯ್ಯ)

ಈಗಿನ ಕಾಲದ (ಸದ್ಯಸ್ಕ) ಲೋಕವ್ಯವಹಾರಕ್ಕೆ ಭೌತವಿಜ್ಞಾನದಿಂದ ಪ್ರಯೋಜನವುಂಟು. ಆದರೆ ಈ ವಿಜ್ಞಾನದಿಂದ ಪರಮಾತ್ಮನನ್ನು ಅರಿಯುವ ಸಿದ್ಧಾಂತದ ಗಡಿಯನ್ನು ಸೀಳಿ ಪ್ರವೇಶಿಸಲು ಸಾಧ್ಯವೇನು ? ಆಹಾರ ಪದಾರ್ಥ(ಖಾದ್ಯವಸ್ತು)ಗಳ ರುಚಿಯನ್ನು ತಿಳಿಯುವ ನಾಲಿಗೆ, ಸಂಗೀತದ ಸ್ವಾದವನ್ನು ಹೇಗೆ ತಿಳಿಯಲು ಸಾಧ್ಯ (ವೇದ್ಯ)?