Monday, June 3, 2013

ನರನಾರಿಯರ ತೊಡುಕು ಸಿರಿಯ ಕರುಬಿನ ಕುಟಿಕ (436)

ನರನಾರಿಯರ ತೊಡುಕು ಸಿರಿಯ ಕರುಬಿನ ಕುಟಿಕ |
ಹಿರಿಮೆ ಕಿರಿಮೆಯ ಕಿರಕು ಜಗದೊಳಿರದಂದು ||
ಪರಮೇಷ್ಠಿಯಶವೆಲ್ಲಿ? ಪ್ರಕೃತಿಸಂತತಿಯೆಲ್ಲಿ? |
ಕರಗುವುದಲಾ ಸೃಷ್ಟಿ - ಮರುಳ ಮುನಿಯ || (೪೩೬)

(ಜಗದೊಳ್+ಇರದಂದು)(ಕರಗುವುದು+ಅಲಾ)

ಗಂಡು ಮತ್ತು ಹೆಣ್ಣುಗಳ ಸಿಕ್ಕು ಮತ್ತು ಗೋಜಲುಗಳು, ಬಡವನು ಶ್ರೀಮಂತಿಕೆಯನ್ನು ಕಂಡು ಹೊಟ್ಟೆಕಿಚ್ಚುಪಟ್ಟು ಕುಟುಕುವಂತಹ ಮನಸ್ಸು, ತಾನು ದೊಡ್ಡವನು ಮತ್ತು ಇನ್ನೊಬ್ಬನು ಚಿಕ್ಕವನೆನ್ನುವ ತಿಕ್ಕಾಟ(ಕಿರುಕು)ಗಳು ಈ ಜಗತ್ತಿನಲ್ಲಿ ಇರದಿದ್ದಲ್ಲಿ, ಬ್ರಹ್ಮನ(ಪರಮೇಷ್ಠಿ) ಗೆಲವು ಮತ್ತು ಕೀರ್ತಿಗಳೆಲ್ಲಿರುತ್ತವೆ? ಹಾಗೆಯೇ ಪ್ರಕೃತಿಯ ಸಂತತಿಯು ಸಹ ಎಲ್ಲಿರುತ್ತದೆ? ಈ ಸೃಷ್ಟಿಯೇ ಕರಗಿ ಮಾಯವಾಗಿಬಿಡುತ್ತದೆ, ಅಲ್ಲವೇ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

If the problems between man and woman, the stings of envy due to wealth
The cries of high and low are absent in the world
How can Brahma succeed and how can nature’s progeny live?
Then this creation is bound to dissolve – Marula Muniya (436)
(Translation from "Thus Sang Marula Muniya" by Sri. Narasimha Bhat)

No comments:

Post a Comment