Monday, June 10, 2013

ಲೋಕಪತಿಯೇಂ ನಿರಂಕುಶರಾಜನವೊಲಿಹನೆ? (441)

ಲೋಕಪತಿಯೇಂ ನಿರಂಕುಶರಾಜನವೊಲಿಹನೆ? |
ಸ್ವೀಕರಿಸಿಹಂ ನ್ಯಾಯವಿಧಿಯೊಂದನವನು ||
ಪಾಕವಂ ಗೆಯ್ದುದಣುಣಲ್ ಸ್ವತಂತ್ರಂ ನರನು |
ವೈಕಲ್ಪವಿಲ್ಲದಕೆ - ಮರುಳ ಮುನಿಯ || (೪೪೧)

(ನಿರಂಕುಶರಾಜನವೊಲ್+ಇಹನೆ)(ನ್ಯಾಯವಿಧಿ+ಒಂದನ್+ಅವನು)(ಗೆಯ್ದುದಂ+ಉಣಲ್)(ವೈಕಲ್ಪ+ಇಲ್ಲ+ಅದಕೆ)

ಜಗತ್ತನ್ನು ಆಳುತ್ತಿರುವ ಪರಮಾತ್ಮನು ಯಾವ ಅಂಕೆಯೂ ಇಲ್ಲದ ರಾಜನಂತೆ ತನ್ನ ಅಧಿಪತ್ಯವನ್ನು ನಡೆಸುತ್ತಿರುವನೇನು? ಹಾಗೇನಿಲ್ಲ. ಅವನೂ ಸಹ ಒಂದು ರೀತಿ ನೀತಿ ಮತ್ತು ನಿಯಮವನ್ನು ಅಂಗೀಕರಿಸಿಕೊಂಡಿದ್ದಾನೆ. ತಾನು ಮಾಡಿದ ಅಡುಗೆಯನ್ನು ಸೇವಿಸಲು ಮನುಷ್ಯನು ಎಲ್ಲಾ ವಿಧದಲ್ಲೂ ಸ್ವತಂತ್ರನಾಗಿದ್ದಾನೆ. ಇದಕ್ಕೆ ಯಾವುದೇ ವಿಧವಾದ ಸಂಶಯ ಮತ್ತು ಅನುಮಾನಗಳಿಲ್ಲ (ವೈಕಲ್ಪ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Is the Lord of universe functioning as an Autocrat?
He strictly adheres to a code of justice
Every man is utterly free to eat what he has cooked
There’s no room for doubt in the administration of justice – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment