Friday, June 7, 2013

ಹೊರಜಗದೊಳೆಂತೊ ನಿನ್ನೊಳಜಗದೊಳಗಮಂತು (440)

ಹೊರಜಗದೊಳೆಂತೊ ನಿನ್ನೊಳಜಗದೊಳಗಮಂತು |
ಇರುಳು ಹಗಲುಗಳುಂಟು ಶಶಿರವಿಗಳುಂಟು ||
ಕುರುಡು ಕತ್ತಲೆಯುಂಟು ಮುಗಿಲು ಸಿಡಿಲುಗಳುಂಟು |
ಅರುಣೋದಯವುಮುಂಟು - ಮರುಳ ಮುನಿಯ || (೪೪೦)

(ಹೊರಜಗದೊಳ್+ಎಂತೊ)(ನಿನ್ನೊಳ+ಜಗದೊಳಗಂ+ಅಂತು)(ಅರುಣೋದಯವುಂ+ಉಂಟು)

ಬಾಹ್ಯ ಪ್ರಪಂಚದಲ್ಲಿ ಹೇಗಿದೆಯೋ ಹಾಗೆಯೇ ನಿನ್ನಂತರಂಗದ ಜಗತ್ತಿನಲ್ಲೂ ಸಹ ರಾತ್ರಿ (ಇರುಳು) ಮತ್ತು ಹಗಲುಗಳಿವೆ, ಚಂದ್ರ(ಶಶಿ) ಮತ್ತು ಸೂರ್ಯ(ರವಿ)ರಿದ್ದಾರೆ, ಕಣ್ಣನ್ನು ಕುರುಡಾಗಿ ಮಾಡಿ ನಮಗೇನೂ ಕಾಣದಂತೆ ಮಾಡುವ ಕತ್ತಲೆ ಇದೆ. ಮೋಡ(ಮುಗಿಲು) ಮತ್ತು ಸಿಡಿಲುಗಳೂ ಸಹ ಇವೆ. ಇವುಗಳೆಲ್ಲದರ ಜೊತೆಯಲ್ಲಿ ನಮ್ಮ ಜೀವನಕ್ಕೆ ಒಂದು ನೆಮ್ಮದಿ ಮತ್ತು ಭರವಸೆಯನ್ನು ಕೊಡುವ ಸೂರ್ಯೋದಯವೂ (ಅರುಣೋದಯ) ಇದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

As in the outer world so in your inner world too
There are days and nights, the sun and the moon
There are gloom and darkness, clouds and thunder
The golden dawn is also there – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment