Tuesday, June 4, 2013

ಮರಣಮೇಂ ಜೀವನಾಟಕದ ಚರಮಾಂಕಮೇಂ? (437)

ಮರಣಮೇಂ ಜೀವನಾಟಕದ ಚರಮಾಂಕಮೇಂ? |
ಬರಿಯ ವಿಷ್ಕಂಭಮದು ಕತೆಯು ಮುಂಬರಿಗುಂ ||
ನರನೊ ಖರನೋ ಮರನೊ ತಾನಾಗಿ (ನಿತ್ಯನಟ) |
ಮರಳಿ ಬಾರನೆ ಭುವಿಗೆ - ಮರುಳ ಮುನಿಯ || (೪೩೭)

(ಮರಣಮ್ಂ+ಏಂ)(ಚರಮಾಂಕಂ+ಏಂ)(ವಿಷ್ಕಂಭಂ+ಅದು)

ಸಾವು ಎನ್ನುವುದು ನಮ್ಮ ಜೀವನ ನಾಟಕದ ಕೊನೆಯ (ಚರಮ) ವಿಭಾಗವೇನು? ಅಲ್ಲ. ಅದು ನಾಟಕದಲ್ಲಿ ಹಿಂದೆ ನಡೆದ ಮತ್ತು ಮುಂದೆ ನಡೆಯುವ ವಿಷಯವನ್ನು ಸೂಚಿಸುವ ಕಥಾಂಶ(ವಿಷ್ಕಂಭಂ)ವಷ್ಟೆ. ಕಥೆಯಂತೂ ಮುಂದುವರಿಯುತ್ತಲೇ ಇರುತ್ತದೆ. ಅವನು ಮನುಷ್ಯನೋ, ಕತ್ತೆ(ಖರ)ಯೋ, ಮರವೋ, ಅಥವಾ ಯಾವುದೋ ಒಂದು ಪಾತ್ರವನ್ನು ವಹಿಸಿ ಪುನಃ ಈ ಭೂಮಿಗೆ ಬರದಿರುತ್ತಾನೇನು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Is death last scene in the drama of human life?
It is just the interlinking episode, the drama would continue
Being an eternal Actor, He would certainly come back to earth
As man or animal or plant – Marula Muniya (437)
(Translation from "Thus Sang Marula Muniya" by Sri. Narasimha Bhat)

No comments:

Post a Comment