ಗಿಡದೊಳಿಹ ಹೂವ ಸತಿಮುಡಿಯಲೆಳಸುವನೊರ‍್ವ |
ಗುಡಿಗದನು ಕೊಯ್ದೊಯ್ಯಲೆಳಸುವವನೊರ‍್ವ ||
ಬಿಡುವನಿನ್ನೊರ‍್ವನದನಿರುವೆಡೆಯೆ ಕಂಡೊಲಿದು |
ಬಿಡಿಸಿ ನೀಂ ಮೂಸುವೆಯ? - ಮರುಳ ಮುನಿಯ || (೭೧೩)
(ಗಿಡದೊಳ್+ಇಹ)(ಸತಿಮುಡಿಯಲ್+ಎಳಸುವನ್+ಒರ‍್ವ)(ಕೊಯ್ದು+ಒಯ್ಯಲ್+ಎಳಸುವವನ್+ಒರ‍್ವ)(ಬಿಡುವನ್+ಇನ್ನೊರ‍್ವನ್+ಅದನ್+ಇರುವ+ಎಡೆಯೆ)(ಕಂಡು+ಒಲಿದು)
ಗಿಡದಲ್ಲಿ ಬಿಟ್ಟಿರುವ ಹೂವನ್ನು ನೋಡಿ, ಅದು ತನ್ನ ಮಡದಿಯ ತುರುಬಿನಲ್ಲಿ ಸೊಗಸಾಗಿ ಕಾಣುತ್ತದೆಂದು ಅಪೇಕ್ಷಿಸುವವನೊಬ್ಬ. ಇನ್ನೊಬ್ಬನಾದರೋ ಆ ಹೂವನ್ನು ಕೊಯ್ದು ದೇವಸ್ಥಾನದಲ್ಲಿರುವ ದೇವರಿಗೆ ಅರ್ಪಿಸಬೇಕೆಂದು ಬಯಸುತ್ತಾನೆ. ಮತ್ತೊಬ್ಬನು ಆ ಹೂವು ಅದೇ ಗಿಡದಲ್ಲಿ ನಗುತ್ತಿದ್ದರೆ ಚೆನ್ನೆಂದು ಯೋಚಿಸುತ್ತಾನೆ. ಅವರೆಲ್ಲರಿಗೆಂತ ಬೇರೆಯಾಗಿ ನೀನು ಆ ಹೂವನ್ನು ಗಿಡದಿಂದ ಬಿಡಿಸಿ ಮೂಸಿ ನೋಡುವೆಯೇನು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")
One wishes to decorate his wife’s braid with the flower in the plant
Another person desires to take and offer it to the deity in the temple
Someone else loves to see the flower smiling in the plant itself.
Would you pull out the petals and smell it? – Marula Muniya (713)
(Translation from "Thus Sang Marula Muniya" by Sri. Narasimha Bhat)