Tuesday, August 5, 2014

ಜೀವನದ ವಿಸ್ತರಕೆ ಹೆಣ್ಣುಗಂಡಾವಶ್ಯ (644)

ಜೀವನದ ವಿಸ್ತರಕೆ ಹೆಣ್ಣುಗಂಡಾವಶ್ಯ |
ಭೂವಿಲಾಸದೊಳಿರ‍್ವರಾತ್ಮ ತಾಂ ಬೆಳೆಗುಂ ||
ಭಾವದನ್ಯೋನ್ಯದಿಂ ಬೇಳುವುದಾತ್ಮದ ರಾಜ್ಯ |
ಪಾವನವೊ ಜೀವಕ್ಕೆ - ಮರುಳ ಮುನಿಯ || (೬೪೪)

(ಹೆಣ್ಣು+ಗಂಡು+ಅವಶ್ಯ)(ಭೂವಿಲಾಸದೊಳ್+ಇರ‍್ವರ್+ಆತ್ಮ)(ಭಾವದ+ಅನ್ಯೋನ್ಯದಿಂ)(ಬೇಳುವುದು+ಆತ್ಮದ)

ಬಾಳು ವಿಸ್ತಾರವಾಗಿ ಹರಡಿಕೊಳ್ಳುವುದಕ್ಕೆ ಹೆಣ್ಣು ಮತ್ತು ಗಂಡುಗಳ ಭೇದವು ಅಗತ್ಯವಾಗಿ ಇರಬೇಕು. ಭೂಮಿಯು ವಿಹಾರದಲ್ಲಿ ಇವರಿಬ್ಬರ ಆತ್ಮಗಳು ತಾವಾಗಿ ತಾವೇ ವೃದ್ಧಿಯಾಗುತ್ತವೆ. ಪರಸ್ಪರ ಪ್ರೀತಿಯ ಸಂವೇದನೆಗಳಿಂದ ಅವುಗಳ ಆತ್ಮದ ರಾಜ್ಯವು ಬೆಳೆಯುತ್ತದೆ. ಇದು ಜೀವವನ್ನು ಪವಿತ್ರ(ಪಾವನ)ಗೊಳಿಸುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Essential are man and woman for the growth of life,
The souls of both would ripen in the worldly play,
The kingdom of self would expand in their emotional cordiality
This is a process of purification for the soul – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment