Wednesday, August 20, 2014

ನರಕೃತ್ಯವೇಂ ನಶ್ಯ ಕಾಲವಶ್ಯವದೆಂಬ (650)

ನರಕೃತ್ಯವೇಂ ನಶ್ಯ ಕಾಲವಶ್ಯವದೆಂಬ |
ಕೊರಗಿಂದಲೆದೆ ಕುಗ್ಗಿ ಜೀವ ಕುಸಿವಂದು ||
ಸ್ಮರಿಸಾದಿಯಿಂ ಜಗದೊಳೆಡೆಬಿಡದೆ ಪರಿಯುತಿಹ |
ಪುರುಷತಾವಾಹಿನಿಯ - ಮರುಳ ಮುನಿಯ || (೬೫೦)

(ಕಾಲವಶ್ಯ+ಅದು+ಎಂಬ)(ಕೊರಗಿಂದಲ್+ಎದೆ)(ಸ್ಮರಿಸು+ಆದಿಯಿಂ)(ಜಗದ+ಒಳು+ಎಡೆಬಿಡದೆ)()

ಮನುಷ್ಯನ ಕೃತಿಗಳೆಲ್ಲವೂ ನಾಶವಾಗಿ ಹೋಗುವಂತಹುವು ಮತ್ತು ಅದು ಕಾಲನ ಅಧೀನದಲ್ಲಿರುವುದೆಂಬ ದುಃಖದಿಂದ ಹೃದಯ ಅಲುಗಾಡಿ ಕುಗ್ಗಿಹೋಗಿ ಜೀವವು ಕುಸಿದು ಬೀಳುವಂತಾದಾಗ, ಜಗತ್ತಿನಲ್ಲಿ ಮೊದಲಿನಿಂದಲೂ ನಿರಂತರವಾಗಿ ಹರಿಯುತ್ತಿರುವ ಪುರುಷತ್ವದ ಪ್ರವಾಹ(ವಾಹಿನಿ)ದ ಬಗ್ಗೆ ಚಿಂತಿಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When you become disheartened and when your soul sinks down
Bemoaning that human achievements are short-lived and subject to Time’s onslaught
Invoke the ceaseless torrent of heroism flowing in the world,
From time immemorial – Marula Muniya (650)
(Translation from "Thus Sang Marula Muniya" by Sri. Narasimha Bhat)

No comments:

Post a Comment