Wednesday, August 27, 2014

ದ್ರುತತೆಯುಂ ದೃಢತೆಯುಂ ಕೂಡೆ ರಥಪಯಣ ಸುಖ (655)

ದ್ರುತತೆಯುಂ ದೃಢತೆಯುಂ ಕೂಡೆ ರಥಪಯಣ ಸುಖ |
ಹಿತವಂತು ಜನಕೆ ಲೋಕವ್ಯವಸ್ಥೆಯಲಿ ||
ಜೊತೆಗೂಡೆ ಸಹಜ ವಿಕಸನೆ ಶಾಸನದ ನಿಯತಿ |
ಮಿತಮುಭಯಮಿರೆ ಧರ್ಮ - ಮರುಳ ಮುನಿಯ || (೬೫೫)

(ಹಿತ+ಅಂತು)(ಮಿತಂ+ಉಭಯಂ+ಇರೆ)

ವೇಗ (ದ್ರುತತೆ)ವಾಗಿರುವುದು ಮತ್ತು ನಿಶ್ಚಲತೆಯಿಂದಿರುವುದೆರಡೂ ಸೇರಿದರೆ ರಥದ ಪ್ರಯಾಣವು ಸುಖಕರವಾಗಿರುತ್ತದೆ. ಲೋಕದ ಆಡಳಿತ ನಡೆಸುವ ಏರ್ಪಾಟಿನಲ್ಲೂ ಸಹಜ ಪ್ರಗತಿಯ ಜತೆಗೆ, ಶಾಸನದ ಕಟ್ಟುಪಾಡುಗಳು ಸೇರಿಕೊಂಡರೆ ಜನಗಳಿಗೆ ಒಳ್ಳೆಯದಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Car ride becomes comfortable when speed and stability complement each other
This is good to all beings even in the management of worldly affairs.
Dharma it is when natural development and rule of law
Are balanced in moderate measures – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment