Monday, August 25, 2014

ಆವೊಂದು ವಸ್ತುವಂ ಪೂರ್ಣದಿಂ ತಿಳಿದಿರಲು (653)

ಆವೊಂದು ವಸ್ತುವಂ ಪೂರ್ಣದಿಂ ತಿಳಿದಿರಲು |
ಜೀವಿತದ ಮಿಕ್ಕೆಲ್ಲಮಂ ತಿಳಿಯಲಹುದೋ ||
ಆ ವಿದ್ಯೆಯಂ ಗಳಿಸು ಮೊದಲೆಲ್ಲಕಿಂತಲದು |
ದೀವಿಗೆಯೊ ಬಾಳಿರುಳ್ಗೆ - ಮರುಳ ಮುನಿಯ || (೬೫೩)

(ತಿಳಿಯಲ್+ಅಹುದೋ)(ಮೊದಲ್+ಎಲ್ಲಕಿಂತಲ್+ಅದು)(ಬಾಳ್+ಇರುಳ್ಗೆ)

ನೀನು ಯಾವ ಒಂದು ವಸ್ತುವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿರುವೆಯಾದರೆ, ಜೀವನದಲ್ಲಿರುವ ಮಿಕ್ಕೆಲ್ಲ ವಸ್ತುಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆಯೋ, ಬೇರೆ ಏನನ್ನಾದರೂ ಕಲಿಯುವುದಕ್ಕಿಂತ ಮೊದಲು, ಆ ವಿದ್ಯೆಯನ್ನು ಸಂಪಾದಿಸು. ಅದು ನಿನ್ನ ಜೀವನದ ರಾತ್ರಿಗೆ(ಇರುಳ್) ದೀಪ(ದೀವಿಗೆ)ವಾಗಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

There is one thing by knowing which in full,
One can know all other things of life.
Acquire that knowledge as it is more important than all else,
It is light for the night of life - Marula Muniya (653)
(Translation from "Thus Sang Marula Muniya" by Sri. Narasimha Bhat)

No comments:

Post a Comment