Tuesday, August 26, 2014

ಅಮನಸ್ಕನಾಗು ನೀಂ ಮಮತೆಯೆಲ್ಲವ ನೀಗು (654)

ಅಮನಸ್ಕನಾಗು ನೀಂ ಮಮತೆಯೆಲ್ಲವ ನೀಗು |
ಭ್ರಮಣೆಯ ಪುರದ್ವಂದ್ವವೀಥಿಯಲಿ ಸಾಗು ||
ಅಮಲ ಸತ್ತ್ವಾಂಬುಧಿಯ ವಿಮಲ ವೀಚೀತಲ- |
ಸ್ತಿಮಿತ ಜಲದೊಡಲಲಿರು - ಮರುಳ ಮುನಿಯ || (೬೫೪)

(ಅಮನಸ್ಕನ್+ಆಗು)(ಸತ್ತ್ವಾ+ಅಂಬುಧಿಯ)(ಜಲದ+ಒಡಲಲಿ+ಇರು)

ನೀನು ಮನೋವ್ಯಾಪಾರವಿಲ್ಲದವನ(ಅಮನಸ್ಕ)ಂತಾಗು. ಸ್ವಾರ್ಥ, ಮೋಹ ಮತ್ತು ಅಹಂಕಾರಗಳನ್ನು ಕಳೆದುಕೊ. ಮಂಕುಗೊಳಿಸುವ ಜಟಿಲತೆಯಿಂದ ಕೂಡಿರುವ ಪೇಟೆ ಹಾದಿಯಲ್ಲಿ ನಡೆ. ಸ್ವಚ್ಛ(ಅಮಲ)ವಾಗಿರುವ ಸಾರದ ಸಮುದ್ರ(ಅಂಬುಧಿ)ದ ಪವಿತ್ರವಾದ (ವಿಮಲ) ಅಲೆ(ವೀಚಿ)ಗಳ ತಳಭಾಗದ ನಿಶ್ಚಲ(ಸ್ತಿಮಿತ)ವಾಗಿರುವ ನೀರಿನ ಒಡಲಿನಲ್ಲಿರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Be waveless in mind and renounce all attachments,
Walk on the city streets of duality and complete your tour,
Rest in the calm bosom of the pure ocean of all virtuous qualities
Deep under the blemishlesss waves – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment