Friday, August 22, 2014

ನೆಲವರ್ಧ ಜಲವರ್ಧ ಸೇರಲೀ ಭೂಗೋಳ (652)

ನೆಲವರ್ಧ ಜಲವರ್ಧ ಸೇರಲೀ ಭೂಗೋಳ |
ತಲೆಯರ್ಧವೆದೆಯರ್ಧ ಮನುಜ ಸಂಸಾರ ||
ನಲಿವರ್ಧವಳಲರ್ಧ ಮನುಜ ಜೀವಿತಸಾರ |
ಕಲಿತಿದನು ಬಾಳೆಲವೊ - ಮರುಳ ಮುನಿಯ || (೬೫೨)

(ತಲೆ+ಅರ್ಧ+ಎದೆ+ಅರ್ಧ)(ನಲಿವು+ಅರ್ಧ+ಅಳಲು+ಅರ್ಧ)

ನಾವು ವಾಸಿಸುತ್ತಿರುವ ಪ್ರಪಂಚವು ಅರ್ಧ ನೆಲ ಮತ್ತು ಅರ್ಧ ನೀರಿನಿಂದ ಕೂಡಿಕೊಂಡಿದೆ. ಮನುಷ್ಯನ ಸಂಸಾರವಾದರೋ ಅರ್ಧ ಬುದ್ಧಿಶಕ್ತಿ ಮತ್ತು ಅರ್ಧ ಹೃದಯವನ್ನವಲಂಬಿಸಿ ಸಾಗುತ್ತದೆ. ಮನುಷ್ಯನ ಬಾಳುವೆಯ ತಿರುಳು ಅರ್ಧ ಸಂತೋಷ ಮತ್ತು ಅರ್ಧ ದುಃಖಗಳನ್ನೊಳಗೊಂಡಿದೆ. ನೀನು ಇದನ್ನು ಅರಿತುಕೊಂಡು ನಿನ್ನ ಜೀವನವನ್ನು ಸಾಗಿಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Half of this world is earth and the other half is water,
Half of humanity is strong in head and the other half is strong in heart,
Half of human life-substance is happiness and the other half is sorrow,
Learn this and live well – Marula Muniya (652)
(Translation from "Thus Sang Marula Muniya" by Sri. Narasimha Bhat)

No comments:

Post a Comment