Friday, July 19, 2013

ಧೀಯ ಸೆಣಸಲಿಕಿರ‍್ಪುದಾತ್ಮನಿಶ್ಚಯಕಿರದು (468)

ಧೀಯ ಸೆಣಸಲಿಕಿರ‍್ಪುದಾತ್ಮನಿಶ್ಚಯಕಿರದು |
ಮೇಯತೆಯ ಭಾಸವೀ ಜಗದ ತನುಗಳಲಿ ||
ಕಾಯದಾರ್ಢ್ಯವ ತೋರಿ ವಾಯುವನು ತಬ್ಬಿಪುದು |
ಮಾಯೆಯ ವಿಲಾಸವೆಲೊ - ಮರುಳ ಮುನಿಯ || (೪೬೮)

(ಸೆಣಸಲಿಕೆ+ಇರ‍್ಪುದು+ಆತ್ಮನಿಶ್ಚಯಕೆ+ಇರದು)

ಬುದ್ಧಿಶಕ್ತಿ ಹೋರಾಡಲಿಕ್ಕೆ ಇದೆಯೇ ಹೊರತು, ಅದು ಆತ್ಮ ನಿರ್ಧಾರಕ್ಕಾಗಿ ಇಲ್ಲ. ಸೃಷ್ಟಿಯ ಜೀವಿಗಳಲ್ಲಿ ನಮಗೆ ಪ್ರಕೃತಿಯ ಶಕ್ತಿ ಸಾಮರ್ಥ್ಯಗಳನ್ನು ಅಳೆಯಲಿಕ್ಕೆ ಸಾಧ್ಯ(ಮೇಯ)ವೆನ್ನುವ ತೋರಿಕೆ(ಭಾಸ)ಯನ್ನು ಈ ಜಗತ್ತಿನ ದೇಹ(ತನು)ಗಳಲ್ಲಿ ಪ್ರಕೃತಿಯು ಇಟ್ಟಿದೆ. ದೇಹದ ಕಸು(ದಾರ್ಢ್ಯ)ವನ್ನು ತೋರಿಸಿ ಗಾಳಿ(ವಾಯು)ಯನ್ನು ತಬ್ಬಿಕೊಳ್ಳುವಂತೆ ಮಾಡುವುದು ಮಾಯೆಯ ವಿನೋದವಾದ ಆಟ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The human ability sufficient for intellectual endeavours
Is insufficient for self-realization, Human beings are under illusion
That they know the truth, Maya makes us display our powers
And embrace air and all this is Her play – Marula Muniya
(Translation from "Thus Sang Marula Muniya" by Sri. Narasimha Bhat)

1 comment:

  1. ಕಾಯದಾರ್ಢ್ಯವ ತೋರಿ ವಾಯುವನು ತಬ್ಬಿಹುದು - ಈ ಸಾಲಿನಲ್ಲಿ ಪ್ರಾಯಶಃ ತರ್ಜುಮೆ(ಯೋಗಾರ್ಥ) ಎಡೆಗೆಟ್ಟಿದೆ ಅನಿಸುತ್ತಿದೆ. ಇಲ್ಲಿ ಮನುಷ್ಯನ ದೇಹ ಎಷ್ಟೇ ದಾರ್ಢ್ಯವಾಗಿದ್ದರೂ ಅದು ಪ್ರಾಣವಾಯುವಿನ ಹಿಡಿತದಲ್ಲಿದೆ(ಪ್ರಾಣವಿಲ್ಲದ ದೇಹದ ಸ್ಥಿತಿ ಹೇಗಿರುವುದೆಂದು ಬಣ್ಣಿಸುವುದು ಬೇಡದ ಸಂಗತಿ) ಎಂಬುದು ಇದರ ಸಾರಾಂಶವಿರಬಹುದೇನೊ!. ಅದರ ಹಿಂದಿನ ಸಾಲುಗಳಲ್ಲಿ ಪ್ರಕೃತಿಯಲ್ಲಿ ಮನುಷ್ಯನ ಭ್ರಮಾನಿರತ(ಮನುಷ್ಯನಿಗೆ ಅನಿಸುವ ಹಾಗೆ) ಮೇಯತೆ ಯನ್ನು ಸೂಚಿಸುತ್ತಿರುವುದು ಇದೇ ಕಾರಣಕ್ಕಾಗಿ.

    ReplyDelete