Monday, December 30, 2013

ಬಡವನಾರ್? ಮಡದಿಯೊಲವಿನ ಸವಿಯನರಿಯದವನು (554)

ಬಡವನಾರ್? ಮಡದಿಯೊಲವಿನ ಸವಿಯನರಿಯದವನು |
ಹುಡುಗರಾಟದಿ ಬೆರೆತು ನಗಲರಿಯದವನು ||
ಉಡುರಾಗನೋಲಗದಿ ಕುಳಿತು ಮೈಮರೆಯದವನು |
ಬಡಮನಸೆ ಬಡತನವೊ - ಮರುಳ ಮುನಿಯ || (೫೫೪)

(ಮಡದಿ+ಒಲವಿನ)(ಸವಿಯನ್+ಅರಿಯದವನು)(ಹುಡುಗರ+ಆಟದಿ)(ನಗಲ್+ಅರಿಯದವನು)(ಉಡುರಾಗನ+ಓಲಗದಿ)

ಪ್ರಪಂಚದಲ್ಲಿ ಜೀವಿಸುತ್ತಿರುವವರಲ್ಲಿ ಬಡವನು ಯಾರು? ಯಾವನು ತನ್ನ ಸತಿಯ ಪ್ರೀತಿಯ ರುಚಿಯನ್ನು ಕಾಣಲಾರದವನೋ, ಚಿಕ್ಕ ಮಕ್ಕಳ ಜೊತೆ ಆಟಗಳಲ್ಲಿ ಸೇರಿಕೊಂಡು ಸಂತೋಷಿಸಲು ಕಲಿತಿಲ್ಲವೋ, ಚಂದ್ರನ ತಂಪಾದ ಬೆಳಕಿನಲ್ಲಿ ಸಂತೋಷವಾಗಿ ಮೈಮರೆಯುವಂತೆ ವಿಹರಿಸಲಾರನೋ ಅವನೇ ಬಡವ. ಮನಸ್ಸನ್ನು ಶ್ರೀಮಂತಗೊಳಿಸಿಕೊಳ್ಳದೇ ಮತ್ತು ಸಂತೋಷಚಿತ್ತದಿಂಡ ಇಲ್ಲದಿರುವುದೇ ಬಡತನ, ಮತ್ತೇನೂ ಅಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Who is poor? One who hasn’t tasted his wife’s love
One who cannot join the children in their play and enjoy
One who cannot forget himself in the cool bliss of the moonlight night
A poor mind is poverty personified –Marula Muniya
(Translation from "Thus Sang Marula Muniya" by Sri. Narasimha Bhat)

Friday, December 27, 2013

ಸಿರಿಯೇಕೊ ಸೌಖ್ಯಕ್ಕೆ? ಅರುಣಂಗೆ ಬಾಡಿಗೆಯೆ? (553)

ಸಿರಿಯೇಕೊ ಸೌಖ್ಯಕ್ಕೆ? ಅರುಣಂಗೆ ಬಾಡಿಗೆಯೆ?
ಧರೆಯ ದಿನದಿನದ ಬಣ್ಣಗಳಿಗೇಂ ಬೆಲೆಯೆ ?||
ಹರುಷವಂಗಡಿ ಸರಕೆ? ಹೃದಯದೊಳಚಿಲುಮೆಯದು |
ಸರಸತೆಯೆ ಸಿರಿತನವೊ - ಮರುಳ ಮುನಿಯ || (೫೫೩)

(ಹರುಷ+ಅಂಗಡಿ)(ಹೃದಯದ+ಒಳಚಿಲುಮೆಯದು)

ಸಂತೋಷವಾಗಿರುವುದಕ್ಕೆ ಸಿರಿಸಂಪತ್ತುಗಳು ಇರಲೇಬೇಕೇನು? ಸೂರ್ಯನ(ಅರುಣ) ಬೆಳಕಿಗೆ ಬಾಡಿಗೆ ಕೊಡಬೇಕೇನು? ಭೂಮಿತಾಯಿಯ ಪ್ರತಿನಿತ್ಯದ ವಿಧವಿಧವಾದ ರಂಗುಗಳಿಗೆ ಏನು ಬೆಲೆ? ಸಂತೋಷವೆನ್ನುವುದು ಅಂಗಡಿಯಲ್ಲಿ ನಾವು ಕೊಂಡುಕೊಳ್ಳುವುದಕ್ಕೆ ಸಿಗುವ ಸಾಮಗ್ರಿ(ಸರಕು) ಏನು? ಸಂತೋಷವೆನ್ನುವುದು ಹೃದಯದೊಳಗಿರುವ ಬುಗ್ಗೆ. ಸೌಜನ್ಯ ಮತ್ತು ರಸಿಕತೆಯಿಂದಿರುವುದೇ ಸಿರಿವಂತಿಕೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Why riches for happiness? Have you to pay any rent to enjoy the dawn?
Has any price been fixed for the myriad hues that adorn the earth every day?
Is happiness available in shops? It is the fountain in your heart,
Sense of humour itself is wealth – Marula Muniya (533)
(Translation from "Thus Sang Marula Muniya" by Sri. Narasimha Bhat)

Tuesday, December 24, 2013

ಅಹಿಮುಖಸಹಸ್ರದೊಳಗೊಂದುಸಿರ‍್ವನ್ ಆ ಶೇಷ (552)

ಅಹಿಮುಖಸಹಸ್ರದೊಳಗೊಂದುಸಿರ‍್ವನ್ ಆ ಶೇಷ |
ಬಹುಜೀವದೊಳಗೊಂದೆ ಪರಮಾತ್ಮಸತ್ತ್ವ ||
ಸಿಹಿಯನೋ ಕಹಿಯನೋ ಮುಖ ಸವಿವುದಸುವಲ್ಲ |
ವಿಹರಿಸುವ ರೀತಿಯಿದು - ಮರುಳ ಮುನಿಯ || (೫೫೨)

(ಅಹಿಮುಖ+ಸಹಸ್ರದೊಳಗೆ+ಒಂದು+ಉಸಿರ‍್ವನ್)(ಬಹುಜೀವದೊಳಗೆ+ಒಂದೆ)(ಸವಿವುದು+ಅಸುವಲ್ಲ)

ಸಾವಿರ ಮುಖಗಳಿಂದ ಕೂಡಿದ ಶೇಷನೆಂಬ ಸರ್ಪ(ಅಹಿ)ದಲ್ಲಿ ಇರುವ ಶ್ವಾಸವು ಮಾತ್ರ ಒಂದೇ ಒಂದು. ಅದೇ ರೀತಿ ಸಮಸ್ತ ಜೀವಿಗಳೊಳಗಿರುವುದು ಪರಮಾತ್ಮನ ಒಂದೇ ಸಾರ ಮತ್ತು ತಿರುಳು. ಸಿಹಿ, ಕಹಿ, ಸುಖ ಮತ್ತು ದುಃಖಗಳನ್ನು ಸವಿಯುವುದು ದೇಹ ಮಾತ್ರವೇ ಹೊರತು ಜೀವವಲ್ಲ. ಪರಮಾತ್ಮನ ಸಾರವು ಜೀವಿಗಳಲ್ಲಿ ವಿಹಾರ ಮಾಡುವ ರೀತಿ ಇದು ಅಷ್ಟೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

One breath Mahashesha draws in through his thousand faces
One God substance lives in numberless beings
It is the face that experiences sweetness or bitterness and not the soul
This is how you should sport in life – Marula Muniya
(Translation from "Thus Sang Marula Muniya" by Sri. Narasimha Bhat)

Monday, December 23, 2013

ಕಷ್ಟಭಯತೋರ‍್ದಂದು, ನಷ್ಟನಿನಗಾದಂದು (551)

ಕಷ್ಟಭಯತೋರ‍್ದಂದು, ನಷ್ಟನಿನಗಾದಂದು |
ದೃಷ್ಟಿಯನು ತಿರುಗಿಸೊಳಗಡೆಗೆ ನೋಡಲ್ಲಿ ||
ಸೃಷ್ಟಿಯಮೃತದ್ರವಂ ಸ್ರವಿಸುವುದು ಗುಪ್ತಿಯಿಂ |
ಪುಷ್ಟಿಗೊಳ್ಳದರಿಂದೆ - ಮರುಳ ಮುನಿಯ || (೫೫೧)

(ಕಷ್ಟಭಯ+ತೋರ‍್ದ+ಅಂದು)(ತಿರುಗಿಸಿ+ಒಳಗಡೆಗೆ)(ಸೃಷ್ಟಿಯ+ಅಮೃತದ್ರವಂ)(ಪುಷ್ಟಿಗೊಳ್+ಅದರಿಂದೆ)

ತೊಂದರೆ ಮತ್ತು ಹೆದರಿಕೆಗಳು ನಿನ್ನನ್ನು ಕಾಡಿದಾಗ, ಕೆಡಕು ಮತ್ತು ಹಾನಿಗಳು ಉಂಟಾದಾಗ, ನಿನ್ನ ದೃಷ್ಟಿಯನ್ನು ನಿನ್ನೊಳಗಡೆಗೆ ತಿರುಗಿಸಿ ನೋಡು. ಸೃಷ್ಟಿಯ ಅಮೃತ ರಸವು ಗುಟ್ಟಾಗಿ(ಗುಪ್ತಿ) ಜಿನುಗು(ಸ್ರವಿಸು)ತ್ತಿರುವುದನ್ನು ಕಾಣುವೆ. ಆ ಅಮೃತ ರಸವನ್ನು ಸೇವಿಸಿ ಅದರಿಂದ ಗಟ್ಟಿಗನಾಗು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When the fear the suffering afflicts you,  when you suffer heavy loss
Turn your vision inward and see
The ambrosia of creation oozing secretly there,
Draw strength from that source – Marula Muniya
(Translation from "Thus Sang Marula Muniya" by Sri. Narasimha Bhat)

Friday, December 20, 2013

ಕಡುಹೇಡಿ ಯಾರಯ್ಯ? ಬಡತನಕೆ ಹೆದರುವನು (550)

ಕಡುಹೇಡಿ ಯಾರಯ್ಯ? ಬಡತನಕೆ ಹೆದರುವನು |
ಎಡರುಗಳನೆದುರಿಸಲಿಕೆದೆಯಿಲ್ಲದವನು ||
ನಡುಗುವನು ಸತ್ಯದುಲಿಯನು ಕೇಳಿ (ಜಗದೊಳಗೆ) |
ನಡೆಸನವ ಜೀವನವ - ಮರುಳ ಮುನಿಯ || (೫೫೦)

(ಎಡರುಗಳನು+ಎದುರಿಸಲಿಕೆ+ಎದೆಯಿಲ್ಲದವನು)(ಸತ್ಯದ+ಉಲಿಯನು)(ನಡೆಸನ್+ಅವ)

ಪ್ರಪಂಚದಲ್ಲಿ ಕಡುಹೇಡಿ ಎಂದು ಯಾರಿಗೆ ಹೇಳಬಹುದು ? ಯಾವನು ಬಡತನಕ್ಕೆ ಹೆದರುವನೊ ಅವನು ಹೇಡಿ. ಯಾವನು ಅಡಚಣೆ, ಅಡ್ಡಿ, ಆತಂಕಗಳನ್ನು ಧೈರ್ಯದಿಂದ ಎದುರಿಸಲು ಹೆದರುವವನೋ ಅವನು ಹೇಡಿ. ಅವನು ಈ ಜಗತ್ತಿನಲ್ಲಿ ನಿಜವನ್ನು ಕೇಳಿಸಿಕೊಂಡು ಹೆದರಿ ನಡುಗುತ್ತಾನೆ. ಅವನು ಜೀವನವನ್ನು ನಡೆಸಲಾರ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Who is a first rank coward? It’s he who fears poverty,
It’s he who is not bold enough to brave difficulties,
It’s he who trembles to hear the voice of truth
And fails to live like a man – Marula Muniya
(Translation from "Thus Sang Marula Muniya" by Sri. Narasimha Bhat)

Wednesday, December 18, 2013

ಕುಸಿದು ಬೀಳಲಿ ಧರಣಿ ಕಳಚಿ ಬೀಳಲಿ ಗಗನ (549)

ಕುಸಿದು ಬೀಳಲಿ ಧರಣಿ ಕಳಚಿ ಬೀಳಲಿ ಗಗನ |
ನಶಿಸಲೀ ನಿನ್ನೆಲ್ಲವೇನಾದೊಡೇನು ? ||
ಬಸವಳಿಯದಿರು ಜೀವ ವಸಿಸು ಶಿವಸತ್ತ್ವದಲಿ |
ಕುಶಲವೆದೆಗಟ್ಟಿಯಿರೆ - ಮರುಳ ಮುನಿಯ || (೫೪೯)

(ನಶಿಸಲ್+ಈ)(ನಿನ್ನ+ಎಲ್ಲ+ಏನ್+ಆದೊಡೆ+ಏನು)(ಬಸವಳಿಯದೆ+ಇರು)(ಕುಶಲ+ಎದೆಗಟ್ಟಿಯಿರೆ)

ಭೂಮಿಯು ಕುಸಿದು ಕೆಳಕ್ಕಿಳಿದು ಹೋಗಲಿ, ಆಕಾಶವು ಜಾರಿ ಕೆಳಕ್ಕೆ ಬಿದ್ದುಹೋಗಲಿ. ನಿನ್ನ ಸರ್ವಸ್ವವೆಲ್ಲವೂ ನಾಶವಾಗಿ ಹೋಗಲಿ. ಏನಾದರೇನು? ನೀನು ಮಾತ್ರ ಹೆದರಬೇಡ. ನಿನ್ನ ಜೀವವು ಆಯಾಸದಿಂದ ದಣಿದು ಶಕ್ತಿಗುಂದದಿರಲಿ (ಬಸವಳಿ). ಪರಮಾತ್ಮನ ಸತ್ತ್ವದಲ್ಲಿ ವಾಸಮಾಡು(ವಸಿಸು). ನಿನ್ನ ಅಂತರಂಗ ದೃಢವಾಗಿದ್ದಲ್ಲಿ, ಎಲ್ಲವೂ ಕ್ಷೇಮಕರ(ಕುಶಲ)ವಾಗಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Let the earth sink down and let the sky collapse
Let all your things be destroyed, what of that?
Don’t feel weary, let your soul dwell in Shiva-substance
All will be well of you don’t lose heart – Marula Muniya
(Translation from "Thus Sang Marula Muniya" by Sri. Narasimha Bhat)

Tuesday, December 17, 2013

ಮಳೆಯ ಹೊಡೆತಕೆ ಸಿಕ್ಕಿ ಹಳೆಯ ಮನೆ ಬೀಳ್ವುದೇ (548)

ಮಳೆಯ ಹೊಡೆತಕೆ ಸಿಕ್ಕಿ ಹಳೆಯ ಮನೆ ಬೀಳ್ವುದೇ-|
ನಿಳೆಗೆ ಬೇಸರ ತರುವ ದಿನದಿನದ ಮಾತು ||
ಅಳಿದ ಮನೆಯನು ಮತ್ತೆ ನಿಲಿಸಿ ಕಟ್ಟಿಸಿ ಬೆಳಕ-|
ಗಳಿಸುವವೊಲ್ ಯತ್ನಿಸೆಲೆ - ಮರುಳ ಮುನಿಯ || (೫೪೮)

(ಬೀಳ್ವುದು+ಏನ್+ಇಳೆಗೆ)(ಯತ್ನಿಸು+ಎಲೆ)

ಸತತವಾಗಿ ಬೀಳುತ್ತಿರುವ ಮಳೆಯ ಆರ್ಭಟಕ್ಕೆ ಸಿಕ್ಕಿ ಹಳೆಯ ಮನೆ ಬೀಳುವುದು, ಪ್ರಪಂಚಕ್ಕೆ ಬೇಜಾರು ತರುವ ಪ್ರತಿನಿತ್ಯದ ಮಾತು. ನಾಶವಾಗಿ ಹೋದ ಮನೆಯನ್ನು ಪುನಃ ಕಟ್ಟಿಸಿ ಎದ್ದು ನಿಲ್ಲಿಸಿ, ಅಲ್ಲಿ ವಾಸಿಸುತ್ತಿದ್ದ ಮಂದಿಯ ಜೀವನದಲ್ಲಿ ಬೆಳಕು ಬರುವಂತೆ ಪ್ರಯತ್ನಿಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

An old house collapsing smitten by heavy rains
Is an everyday phenomenon though a sad affair
Then build a new house in the place of the old
And light a new lamp – Marula Muniya
(Translation from "Thus Sang Marula Muniya" by Sri. Narasimha Bhat)

Monday, December 16, 2013

ಆದ್ಯಂತರಹಿತವಾ ಪೌರುಷ ಪ್ರಗತಿಕಥೆ (547)

ಆದ್ಯಂತರಹಿತವಾ ಪೌರುಷ ಪ್ರಗತಿಕಥೆ |
ಸಾಧ್ಯವಹುದೆಲ್ಲೊಳಿತ್ತೆನುವ ಸಾಸವದು ||
ಸದ್ಯಕಾಗದ ಸಿದ್ಧಿ ನಾಳೆಗಾದೀತೆನುವ |
ಉದ್ಯಮೋತ್ಸಾಹವದು - ಮರುಳ ಮುನಿಯ || (೫೪೭)

(ಆದಿ+ಅಂತರಹಿತ+ಆ)(ಸಾಧ್ಯ+ಅಹುದು+ಎಲ್ಲ+ಒಳಿತ್ತು+ಎನುವ)(ನಾಳೆಗೆ+ಆದೀತು+ಎನುವ)(ಉದ್ಯಮ+ಉತ್ಸಾಹ+ಅದು)

ಮನುಷ್ಯನ ಪುರುಷತ್ವದ ಮುನ್ನಡೆಯ ಕಥೆಗೆ ಮೊದಲು (ಆದಿ) ಮತ್ತು ಕೊನೆಗಳಿಲ್ಲ (ಆದ್ಯಂತರಹಿತ). ಸರ್ವರಿಗೂ ಒಳ್ಳೆಯದನ್ನು (ಒಳಿತು) ಮಾಡಲು ಸಾಧ್ಯವೆಂದೆನ್ನುವ ಶೌರ್ಯ ಪರಾಕ್ರಮ ಮತ್ತು ಸಾಹಸ(ಸಾಸ)ಗಳವು. ತಕ್ಷಣದಲ್ಲೇ ಗುರಿಯನ್ನು ಮುಟ್ಟದಿದ್ದರೂ ಸಹ, ಮುಂದೆ ಅದು ಆಗಬಹುದೆನ್ನುವ ಕಾಯಕ(ಉದ್ಯಮ)ದ ಹುಮ್ಮಸ್ಸು (ಉತ್ಸಾಹ) ಅದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Beginningless and endless is the saga of the onward march of manliness
It is an adventure with the firm belief that the welfare of tall is possible
The objective would be achieved tomorrow if not today
It is such a zeal for work – Marula Muniya
(Translation from "Thus Sang Marula Muniya" by Sri. Narasimha Bhat)

Thursday, December 12, 2013

ಸೊಗಸುಗಳನೆಸಗುತ್ತೆ ಲೋಕಸಾಮಗ್ರಿಯಲಿ (546)

ಸೊಗಸುಗಳನೆಸಗುತ್ತೆ ಲೋಕಸಾಮಗ್ರಿಯಲಿ |
ಸೊಗ ದುಗುಡಗಳ ನಡುವೆ ಮತಿಯನೆಡವಿಸದೆ ||
ಜಗದಾತ್ಮವನು ನೆನೆದು ಸರ್ವಹಿತದಲಿ ಬಾಳ್ವ |
ಪ್ರಗತಿ ಪೌರುಷ ವಿಜಯ - ಮರುಳ ಮುನಿಯ || (೫೪೬)

(ಸೊಗಸುಗಳನ್+ಎಸಗುತ್ತೆ)(ಮತಿಯನ್+ಎಡವಿಸದೆ)(ಜಗದ+ಆತ್ಮವನು)

ಪ್ರಪಂಚವು ಒದಗಿಸಿರುವ ಸಲಕರಣೆಗಳನ್ನುಪಯೋಗಿಸಿ ಸೌಂದರ್ಯವನ್ನುಂಟುಮಾಡುವ ಕೆಲಸಗಳನ್ನು ಮಾಡುತ್ತಾ, ಸುಖ ಮತ್ತು ದುಃಖಗಳ ಮಧ್ಯದಲ್ಲಿರುವಾಗ, ಬುದ್ಧಿಶಕ್ತಿಯು ಎಡವದಂತೆ ನೋಡಿಕೊಂಡು, ಜಗತ್ತೆಲ್ಲ ಏಕಾತ್ಮರೂಪಿ ಎಂದು ಜ್ಞಾಪಕದಲ್ಲಿರಿಸಿಕೊಂಡು, ಎಲ್ಲರಿಗೂ ಹಿತವಾಗುವ ರೀತಿಯಲ್ಲಿ ಜೀವನವನ್ನು ನಡೆಸುತ್ತಾ, ಹೊಂದುವ ಏಳಿಗೆಯೇ ಪೌರುಷತ್ವದ ಗೆಲುವು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

During good and pleasant deeds with the materials available here
Without allowing the mind to stumble amidst joys and sorrows
Living for the welfare of all, ever remembering the universal soul
Is progress and it is the victory of manliness – Marula Muniya (546)
(Translation from "Thus Sang Marula Muniya" by Sri. Narasimha Bhat)

Wednesday, December 11, 2013

ಕವಿ ತತ್ತ್ವದರ್ಶಕರು ವಿಜ್ಞಾನಯೋಜಕರು (545)

ಕವಿ ತತ್ತ್ವದರ್ಶಕರು ವಿಜ್ಞಾನಯೋಜಕರು |
ನವಧರ್ಮಬೋಧಕರು ರಾಷ್ಟ್ರಚೋದಕರು ||
ಅವತರಿಸಿ ಮರಮರಳಿ ತೋರಿಹರು ಪುರುಷತ್ವ - |
ದವಿನಶ್ಯತೆಯ ನೋಡು - ಮರುಳ ಮುನಿಯ || (೫೪೫)

(ಪುರುಷತ್ವದ+ಅವಿನಶ್ಯತೆಯ)

ಕವಿಗಳು, ದಾರ್ಶನಿಕರು, ವಿಜ್ಞಾನವನ್ನು ಉಪಯೋಗಕ್ಕೆ ತಂದವರು, ಹೊಸ ಹೊಸ ಧರ್ಮಬೋಧಕರು, ರಾಷ್ಟ್ರವನ್ನು ಪ್ರೇರಿಸುವ ನಾಯಕರುಗಳು ಪುನಃ ಪುನಃ ಇಳಿದು ಬಂದು ಪ್ರಪಂಚದಲ್ಲಿ ಪುರುಷತ್ವದ ಸ್ಥಿರತ್ವವನ್ನು (ಅವಿನಶ್ಯತೆ) ತೋರಿಸಿರುವುದನ್ನು ನೋಡು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Poets, philosopher-seers, master planners of science
New religious teachers, patriotic statesmen
Have incarnated again and again and have proved
The indestructibility of human valour – Marula Muniya
(Translation from "Thus Sang Marula Muniya" by Sri. Narasimha Bhat)

Tuesday, December 10, 2013

ದುಃಖದುದರದಿ ಕಡಲ ಬಾಡಬದವೊಲು ಸತ್ತ್ವ (544)

ದುಃಖದುದರದಿ ಕಡಲ ಬಾಡಬದವೊಲು ಸತ್ತ್ವ |
ಮಿಕ್ಕಿಹುದು ನಿನ್ನೊಳು ವಿಮೋಚನೇಚ್ಛೆಯಲಿ ||
ಪ್ರಾಕ್ಕೃತದ ನಿಗಳ ಕೈಗಳ ಬಿಗೆಯೆ ತೋಳಿಂದ |
ಕುಕ್ಕದನು ತಿಕ್ಕದನು - ಮರುಳ ಮುನಿಯ || (೫೪೪)

(ದುಃಖದ+ಉದರದಿ)(ವಿಮೋಚನೇ+ಇಚ್ಛೆಯಲಿ)(ಕುಕ್ಕು+ಅದನು)(ತಿಕ್ಕು+ಅದನು)

ಸಾಮರ್ಥ್ಯವೆನ್ನುವುದು ದುಃಖದ ಹೊಟ್ಟೆಯಲ್ಲಿ ಸಮುದ್ರದ ಬಡಬಾಗ್ನಿ(ಬಡಬ)ಯಂತಿರುತ್ತದೆ. ಬಿಡುಗಡೆಯ ಬಯಕೆಯಲ್ಲಿ ನಿನ್ನೊಳಗೆ ಅದು ಉಳಿದಿರುತ್ತದೆ. ನಿನ್ನ ಪೂರ್ವ ಕರ್ಮಗಳ(ಪ್ರಾಕೃತದ) ಸಂಕೋಲೆ(ನಿಗಳ)ಗಳು, ತನ್ನ ತೋಳುಗಳಿಂದ ನಿನ್ನ ಕೈಗಳನ್ನು ಬಿಗಿದಿರುವಾಗ, ಅದನ್ನು ನೀನು ಕುಕ್ಕಿ ಮತ್ತು ತಿಕ್ಕಿ ನಿನ್ನ ಶಕ್ತಿ ಸಾಮರ್ಥ್ಯಗಳನ್ನು ಹೊರಹೊಮ್ಮಿಸಿಕೊ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Just like the raging badaba fire blazes at the bottom of the sea
Your strong will power clamours for release amidst your sorrows
When the shackles of the past Karma bind and bite your hands
Smash them into pieces with your arms – Marula Muniya (544)
(Translation from "Thus Sang Marula Muniya" by Sri. Narasimha Bhat)

Monday, December 9, 2013

ಎದೆಗಟ್ಟಿ ಯೆದೆಗಟ್ಟಿ ಯೆದೆಗಟ್ಟಿ ಯೆನ್ನುತಿರು (543)

ಎದೆಗಟ್ಟಿ ಯೆದೆಗಟ್ಟಿ ಯೆದೆಗಟ್ಟಿ ಯೆನ್ನುತಿರು |
ಪದ ಜಾರಿ ಬಿದ್ದಂದು ತಲೆ ತಿರುಗಿದಂದು ||
ಬದುಕೇನು ಜಗವೇನು ದೈವವೇನೆನಿಪಂದು |
ಅದಿರದೆದೆಯೇ ಸಿರಿಯೋ - ಮರುಳ ಮುನಿಯ || (೫೪೩)

(ದೈವವು+ಏನ್+ಎನಿಪಂದು)(ಅದಿರದ+ಎದೆಯೇ)

ನಿನ್ನ ಕಾಲುಗಳು ಉಡುಗಿ ನೀನು ಜಾರಿ ಬಿದ್ದಾಗ ಮತ್ತು ನಿನ್ನ ತಲೆ ತಿರುಗಿದಂತಾದಾಗ, ಜೀವನದಲ್ಲಿ ಏನಿದೆ? ಪ್ರಪಂಚ ಏಕೆ ಬೇಕು? ಮತ್ತು ದೇವರು ಎಲ್ಲಿದ್ದಾನೆ? ಎಂದಿನ್ನಿಸಿದಾಗ, ನನ್ನ ಎದೆ (ಧೈರ್ಯ ಸ್ಥೈರ್ಯ) ಬಹಳ ಗಟ್ಟಿಯಾಗಿದೆ ಎಂದೆನ್ನುತಿರು. ಅಲುಗಾಡದೆ ಮತ್ತು ಹೆದರದೆ ಇರುವ ಎದೆಗಾರಿಕೆಯೇ ಸಂಪತ್ತು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

My heart is strong; my heart is strong, feel so always
When you slip and fall and when your head is reeling
When all life, whole world and the great God let you down
The unshakable heart is the only support – Marula Muniya
(Translation from "Thus Sang Marula Muniya" by Sri. Narasimha Bhat)

Friday, December 6, 2013

ಉರ್ವರೆಯಪೇಕ್ಷಿಸಿರೆ ನಿನ್ನ ಬಲ ಸಾಹಸವ (542)

ಉರ್ವರೆಯಪೇಕ್ಷಿಸಿರೆ ನಿನ್ನ ಬಲ ಸಾಹಸವ |
ನಿರ್ವಿಣ್ಣತೆಯಿನಡಗಿ ಮುಡುಗುವುದೆ ಸಾವು ||
ನಿರ್ವಹಿಸು ಲೌಕಿಕವ ಸಾತ್ತ್ವಿಕದ ಶೌರ್ಯದಿಂ |
ನಿರ್ವೀರ್ಯತನ ಬೇಡ - ಮರುಳ ಮುನಿಯ || (೫೪೨)

(ಉರ್ವರೆ+ಅಪೇಕ್ಷಿಸಿ+ಇರೆ)(ನಿರ್ವಿಣ್ಣತೆಯಿನ್+ಅಡಗಿ)

ಪ್ರಪಂಚ(ಉರ್ವರೆ)ವು ನಿನ್ನ ಶಕ್ತಿ ಮತ್ತು ಪರಾಕ್ರಮಗಳನ್ನು ಬಯಸುತ್ತಿರು(ಅಪೇಕ್ಷಿಸು)ವಾಗ, ದುಃಖ ಮತ್ತು ಬೇಸರ(ನಿರ್ವಿಣ್ಣತೆ)ತೆಯಿಂದ ಬಚ್ಚಿಟ್ಟುಕೊಂಡು ಮುರುಟುರುವುದೇ ಸಾವು. ಆದ ಕಾರಣ ಸತ್ತ್ವಗುಣದಿಂದ ಕೂಡಿದ ಪರಾಕ್ರಮದಿಂದ ಲೋಕವ್ಯವಹಾರವನ್ನು ನೆರವೇರಿಸು. ನಿಸ್ಸಾಮರ್ಥ್ಯ ಮತ್ತು ನಿಸ್ಸಾಹಸವನ್ನು ತೋರಿಸಬೇಡ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

It is death to hide and shrink with utter despondency
When the world demands your prowess and valour
Manage the affairs of the world with satvic valour
Shed your sense of weakness – Marula Muniya
(Translation from "Thus Sang Marula Muniya" by Sri. Narasimha Bhat)

Thursday, December 5, 2013

ಅಳುವರೊಡನಳುತಳುತೆ ನಗುವರೆಡೆ ನಗುನಗುತೆ (541)

ಅಳುವರೊಡನಳುತಳುತೆ ನಗುವರೆಡೆ ನಗುನಗುತೆ |
ಬಲುಹದೋರುವರೊಡನೆ ಬಲುಹನುಬ್ಬಿಸುತೆ ||
ಹುಲುಸುಬೆಳೆ ಬೇಕೆಂಬನಿಗೆ ಹುಲುಸುದೋರುತ್ತೆ |
ಸಲಿಸವರಿಗವರಿಚ್ಛೆ - ಮರುಳ ಮುನಿಯ || (೫೪೧)

(ಅಳುವರೊಡನೆ+ಅಳುತ+ಅಳುತೆ)(ನಗುವರ+ಎಡೆ)(ಬಲುಹ+ತೋರುವರ+ಒಡನೆ)(ಬಲುಹನ್+ಉಬ್ಬಿಸುತೆ)(ಬೇಕು+ಎಂಬನಿಗೆ)(ಹುಲುಸು+ತೋರುತ್ತೆ)(ಸಲಿಸು+ಅವರಿಗೆ+ಅವರ+ಇಚ್ಛೆ)

ದುಃಖಿಸುವರ ಜೊತೆ ಅವರ ದುಃಖದಲ್ಲಿ ಭಾಗಿಯಾಗುತ್ತಾ, ಸಂತೋಷವಾಗಿರುವವರ ಜೊತೆ ಸಂತೋಷವಾಗಿರುತ್ತಾ, ತಮ್ಮ ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಪ್ರದರ್ಶಿಸುವವರ ಜೊತೆ ಅವರ ಸಾಹಸಗಳನ್ನು ಹುರಿದುಂಬಿಸುತ್ತಾ, ಸಮೃದ್ಧಿಯಾದ ಫಸಲು ಬೇಕೆನ್ನುವವರಿಗೆ ಸಮೃದ್ಧಿಯ ದಾರಿಯನ್ನು ತೋರಿಸುತ್ತಾ, ಅವರವರಿಗೆ ಅವರವರ ಬಯಕೆಗಳನ್ನು ತಲುಪಿಸುತ್ತಿರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Weeping with those who weep and laughing with those who laugh
Displaying one’s prowess with those who wish to wrestle
Pointing at the plentiful harvest to those who desire for plenty
Strive to fulfil the desires of all – Marula Muniya
(Translation from "Thus Sang Marula Muniya" by Sri. Narasimha Bhat)

Wednesday, December 4, 2013

ಹೃದಯವರಸುವದೊಂದು ನೆಲೆಯ ತನ್ನಿನಿರಸಕೆ (540)

ಹೃದಯವರಸುವದೊಂದು ನೆಲೆಯ ತನ್ನಿನಿರಸಕೆ |
ನದಿ ಸಾಗರವನರಸಿ ಪರಿದೋಡುವಂತೆ ||
ಎದೆಹಾಲ ಶಿಶುಗೂಡದಿರೆ ತಾಯ್ಗೆ ನೋವಲ್ತೆ |
ಬದುಕೆಲ್ಲವೆದೆಮಿಡಿತ - ಮರುಳ ಮುನಿಯ || (೫೪೦)

(ಹೃದಯ+ಅರಸುವದು+ಒಂದು)(ತನ್ನ+ಇನಿರಸಕೆ)(ಸಾಗರವನ್+ಅರಸಿ)(ಪರಿದು+ಓಡುವಂತೆ)(ಶಿಶುಗೆ+ಊಡದಿರೆ)(ನೋವ್+ಅಲ್ತೆ)(ಬದುಕು+ಎಲ್ಲ+ಎದೆಮಿಡಿತ)

ನದಿಯು ಸಮುದ್ರವನ್ನು ಹುಡುಕಿಕೊಂಡು ಹರಿದುಹೋಗಿ ಅದನ್ನು ಸೇರುವಂತೆ ಹೃದಯವು ತನ್ನ ಸವಿಯಾದ ಭಾವನೆಗಳಿಗೋಸ್ಕರ ಒಂದು ಆಶ್ರಯವನ್ನು ಹುಡುಕಿಕೊಂಡು ಹೋಗುತ್ತದೆ. ಮಗು(ಶಿಶು)ವಿಗೆ ಎದೆಯ ಹಾಲನ್ನು ಉಣಿಸದಿದ್ದರೆ, ತಾಯಿಗೇ ನೋವುಂಟಾಗುವಂತೆ, ಬದುಕೆಲ್ಲವೂ ಈ ರೀತಿಯ ಅಂತಃಕರಣದ ಮಿಡಿತಗಳಿಂದ ಕೂಡಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Like the river runs seeking for the sea
Human heart seeks for a vessel for pouring its ambrosia
Won’t it be painful to the mother if she can’t feed her child with breast-milk?
All the life is the throbbing of the heart – Marula Muniya
(Translation from "Thus Sang Marula Muniya" by Sri. Narasimha Bhat)

Monday, December 2, 2013

ದೊರೆ ತನದು ಬಲಮೆಂದು ಜನ ತಮದು ನೆಲನೆಂದು (539)

ದೊರೆ ತನದು ಬಲಮೆಂದು ಜನ ತಮದು ನೆಲನೆಂದು |
ಪರಿಪಂಥದಲಿ ಪೊಣರೆ ರಾಜ್ಯ ವಿಷಮಿಸದೇಂ? ||
ದೊರೆಯವರ ಮನವರಿತು ಜನರವರ ಹೊರೆಯರಿತು |
ಇರುತನವಮೀರೆ ಸೊಗ - ಮರುಳ ಮುನಿಯ || (೫೩೯)

(ಬಲಮ್+ಎಂದು)(ನೆಲನ್+ಎಂದು)(ಇರುತನವ+ಮೀರೆ)

ರಾಜ್ಯವನ್ನು ನಡೆಸುವ ಭಾರವನ್ನು ಹೊತ್ತಿರುವ ರಾಜನು, ರಾಜ್ಯಾಧಿಕಾರ ತನ್ನದೆಂದೂ, ಆದರೆ ಜನರು ತಾವು ವಾಸಿಸುತ್ತಿರುವ ನಾಡು ತಮಗೇ ಸೇರಿದ್ದೆಂದು ಸ್ಪರ್ಧಾ ಮನೋಭಾವದಲ್ಲಿ(ಪರಿಪಂಥದಲಿ) ಹೋರಾಡಿದರೆ (ಪೊಣರೆ) ರಾಜ್ಯವು ಸಂಕಟ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳದಿರುತ್ತದೆಯೇ? ರಾಜನು ತನ್ನ ಜನರ ಮನಸ್ಸನ್ನು ಅರ್ಥ ಮಾಡಿಕೊಂಡು, ಹಾಗೆಯೇ ಜನರೂ ಸಹ ದೊರೆಗಿರುವ ರಾಜ್ಯ ನಡೆಸುವ ಭಾರಗಳನ್ನು ತಿಳಿದುಕೊಂಡು, ಅವರಿಬ್ಬರೂ ಬೇರೆ ಬೇರೆ ಬೇರೆಯೆಂಬ ಭಾವನೆಯನ್ನು ಮೀರಿದರೆ ರಾಜ್ಯದಲ್ಲಿ ಸುಖ, ಶಾಂತಿಗಳು ನೆಲಸುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The king asserts that all the power is his and the people claim that all land is theirs
Wouldn't the country be in difficulty if they fight like this?
Happiness ensues when the King understands their mind and
The people realize his burden and both overcome duality – Marula Muniya
(Translation from "Thus Sang Marula Muniya" by Sri. Narasimha Bhat)

Friday, November 29, 2013

ಪತಿ ಮನೆಯು ತನದೆಂದು ಸತಿ ಸಿರಿಯು ತನದೆಂದು (538)

ಪತಿ ಮನೆಯು ತನದೆಂದು ಸತಿ ಸಿರಿಯು ತನದೆಂದು |
ಪ್ರತಿಪಕ್ಷಗಳ ಹೂಡೆ ದಾಂಪತ್ಯಸುಖವೇಂ? ||
ದ್ವಿತಯ ಭಾವವ ಮೀರ‍್ದ ಜೀವನೈಕ್ಯದಿನಲ್ತೆ |
ಹಿತವಹುದು ಸಂಸಾರ - ಮರುಳ ಮುನಿಯ || (೫೩೮)

(ಜೀವನ+ಐಕ್ಯದಿನ್+ಅಲ್ತೆ)

ಪತಿಯು ಮನೆ ನನಗೆ ಸೇರಿದ್ದು ಎಂದೂ, ಪತ್ನಿಯು ಸಿರಿಸಂಪತ್ತುಗಳು ನನಗೆ ಸೇರಿದ್ದು ಎಂದೂ, ವಾದ ಪ್ರತಿವಾದಗಳನ್ನು ಹೂಡಿದರೆ, ದಾಂಪತ್ಯದಲ್ಲಿ ಸುಖವೇನಾದರೂ ಇರುತ್ತದೇನು? ಈ ರೀತಿಯ ಭಿನ್ನ ಭಿನ್ನ ಭಾವನೆಗಳನ್ನು ಮೀರಿದ ಒಂದುಗೂಡಿದ ಭಾವನೆಯ ಜೀವನದಿಂದ ಮಾತ್ರ ಸಂಸಾರವು ಹಿತಕರವಾಗಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

“This house is mine” says the husband; “this wealth is mine” asserts the wife
Where is conjugal happiness in such a life if they argue without end>
Family life blossoms with happiness in the unity of lives
That overcomes the sense of duality – Marula Muniya
(Translation from "Thus Sang Marula Muniya" by Sri. Narasimha Bhat)

Thursday, November 28, 2013

ಬಿಡಿ ಬಿಡಿಯ ಬಾಳೇನು ಗಿಡದಿ ಬಿದ್ದಿಹ ಕುಡಿಯು (537)

ಬಿಡಿ ಬಿಡಿಯ ಬಾಳೇನು ಗಿಡದಿ ಬಿದ್ದಿಹ ಕುಡಿಯು |
ಬೆಡಗಿಲ್ಲ ಬೆಳೆಯಿಲ್ಲ ಬಾಡುತಿಹ ಬಾಳು ||
ಸಡಗರಿಪ ತಳಿರ ನಡುವೆಸೊಗಸಿನಲಿ ಪಾಲುಂಟು |
ಬಡವಲ್ಲ ಕೂಡಬಾಳ್ - ಮರುಳ ಮುನಿಯ || (೫೩೭)

ಒಂಟಿ ಒಂಟಿಯಾಗಿ ನಡೆಸುವ ಜೀವನ, ಒಂದು ಗಿಡದಿಂದ ಕೆಳಕ್ಕೆ ಬಿದ್ದಿರುವ ಚಿಗುರಿ(ಕುಡಿ)ನಂತೆ ಇರುತ್ತದೆ. ಸೊಗಸು, ವಿಲಾಸ ಮತ್ತು ವೃದ್ಧಿಗಳಿಲ್ಲದೆ ಸೊರಗುತ್ತಿರುವ ಜೀವನವದು. ಸಂಭ್ರಮದಿಂದ ಮತ್ತು ಉತ್ಸಾಹದಿಂದಿರುವ ಚಿಗುರು(ತಳಿರ)ಗಳ ಮಧ್ಯದಲ್ಲಿ ಚೆಲುವಿನ ಭಾಗವಿದೆ. ಕೂಡಿ ಸೇರಿ ನಡೆಸುವ ಜೀವನ ಬಡವಾಗುವುದಿಲ್ಲ. ಅದು ಸಿರಿತನದಿಂದ ಕೂಡಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Isolated life is like a tender shoot fallen from the plant
It is a withering life with no attraction or growth
Sharing the life together in the midst of the exulting beauty of sprigs
Is not a life of poverty? – Marula Muniya
(Translation from "Thus Sang Marula Muniya" by Sri. Narasimha Bhat)

Wednesday, November 27, 2013

ಕ್ರಮದ ಗರ್ಭದೊಳತಿಕ್ರಮಕಿಣ್ವ ಸೃಷ್ಟಿಯಲಿ (536)

ಕ್ರಮದ ಗರ್ಭದೊಳತಿಕ್ರಮಕಿಣ್ವ ಸೃಷ್ಟಿಯಲಿ |
ಸುಮ ಮಧುವಿನಂತರದೊಳುನ್ಮಾದ ಬೀಜ ||
ಅಮರಾಂಶವೊಂದು ಮರ್ತ್ಯಾಕೃತಿಯ ಗಹ್ವರದಿ |
ರಮಣೀಯವಿಂತು ಜಗ - ಮರುಳ ಮುನಿಯ || (೫೩೬)

(ಗರ್ಭದೊಳ್+ಅತಿಕ್ರಮಕಿಣ್ವ)(ಮಧುವಿನ+ಅಂತರದೊಳು+ಉನ್ಮಾದ)(ಅಮರ+ಅಂಶ)(ಮರ್ತ್ಯ+ಆಕೃತಿಯ)(ರಮಣೀಯ+ಇಂತು)

ಈ ನಿಯಮಗಳ ಗರ್ಭದಲ್ಲಿ ನಿಯಮಗಳನ್ನು ಮೀರಿದ ಹುದುಗು(ಮದ್ಯವನ್ನು ತಯಾರಿಸಲು ಉಪಯೋಗಿಸುವ ಮಷ್ಟು)ಗಳಿವೆ. ಹೂವು(ಸುಮ) ಮತ್ತು ಜೇನು(ಮಧು)ಗಳ ಮಧ್ಯದಲ್ಲಿ ಹುಚ್ಚು ಬರಿಸುವ ಬೀಜಗಳಿವೆ. ಮೃತಿ ಹೊಂದುವ (ಮರ್ತ್ಯಾಕೃತಿಯ) ಮನುಷ್ಯನ ಶರೀರವೆಂಬ ಗುಹೆ(ಗಹ್ವರ)ಯಲ್ಲಿ, ಅಮೃತದ(ಅಮರ) ಭಾಗಗಳಿವೆ. ಪ್ರಪಂಚವು ಈ ಕಾರಣದಿಂದ ಸುಂದರ ಮತ್ತು ಮನೋಹರವಾಗಿ ಕಾಣುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The seed of lawlessness lies in the womb of creation
The seed of intoxication is between the flower and its nectar
An immortal embryo in the cave of mortal human body
This world this is quite enchanting – Marula Muniya (536)
(Translation from "Thus Sang Marula Muniya" by Sri. Narasimha Bhat)

Tuesday, November 26, 2013

ನಿಯಮಂಗಳೆನಿತೆನಿತೊ ಸೃಷ್ಟಿಚರ್ಯೆಯೊಳಿಹುವು (535)

ನಿಯಮಂಗಳೆನಿತೆನಿತೊ ಸೃಷ್ಟಿಚರ್ಯೆಯೊಳಿಹುವು |
ಆಯಮಂಗಳುಂ ನಿಯಮಗಳ ಮೀರ‍್ದುವಂತು ||
ಸ್ವಯಮುತ್ಥ ನಿಯಮಾಯಮಪ್ರಚಯವೀಜಗವು |
ಸ್ಮಯಕಾರಿಯದರಿಂದೆ - ಮರುಳ ಮುನಿಯ || (೫೩೫)

(ನಿಯಮಂಗಳ್+ಎನಿತು+ಎನಿತೊ)(ಚರ್ಯೆಯೊಳ್+ಇಹುವು)(ಮೀರ‍್ದುವು+ಅಂತು)(ಸ್ವಯಂ+ಉತ್ಥ)(ನಿಯಮ+ಆಯಮ+ಪ್ರಚಯ+ಈ+ಜಗವು)(ಸ್ಮಯಕಾರಿ+ಅದರಿಂದೆ)

ಸೃಷ್ಟಿಯ ವರ್ತನೆಗಳಲ್ಲಿ ಬೇಕಾದಷ್ಟು ನಿಯಮಗಳಿವೆ. ಇವುಗಳಲ್ಲಿ ಹತೋಟಿಗೆ ಸಿಗಲಾರದವು (ಅಯಮ) ನಿಯಮಗಳನ್ನು ಮೀರಿ ಇವೆ. ತಾನಾಗಿ ತಾನೇ ಉದ್ಭವಿಸಿದ (ಸ್ವಯಮುತ್ಥ) ಕಟ್ಟಲೆಗೊಳಗಾದ ಮತ್ತು ಹತೋಟಿಗಳನ್ನು ಮೀರಿದ ಸಮೂಹ(ಪ್ರಚಯ)ಗಳಿಂದ ಕೂಡಿದ ಪ್ರಪಂಚವಿದು. ಆದಕಾರಣ ಈ ಜಗತ್ತು ಆಶ್ಚರ್ಯಕರವಾಗಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Rules governing the functioning of Nature are numerous
Equally numerous are the transgressions of such rules
This world is spontaneous combination of such rules and their violations
This world therefore is a wonder of wonders – Marula Muniya
(Translation from "Thus Sang Marula Muniya" by Sri. Narasimha Bhat)

Monday, November 25, 2013

ಸೌಂದರ್ಯಮೂಲವೇಂ ದೃಷ್ಟವಸ್ತುವಿನೊಳಗೊ (534)

ಸೌಂದರ್ಯಮೂಲವೇಂ ದೃಷ್ಟವಸ್ತುವಿನೊಳಗೊ |
ಸಂದರ್ಶಕೇಂದ್ರಿಯದ ರುಚಿಶಕ್ತಿಯೊಳಗೋ ||
ಸಂಧಿಯೋ ದೃಷ್ಟದರ್ಶಕರುಭಯಗುಣದೊಳದು |
ಸಂಧಾನಬಿಂದುವಲ - ಮರುಳ ಮುನಿಯ || (೫೩೪)

(ವಸ್ತುವಿನ+ಒಳಗೊ)(ಶಕ್ತಿ+ಒಳಗೋ)(ಸಂದರ್ಶಕ+ಇಂದ್ರಿಯದ)(ದರ್ಶಕರ+ಉಭಯಗುಣದೊಳ್+ಅದು)

ಸೌಂದರ್ಯದ ಮೂಲ ನಾವು ನೋಡುತ್ತಿರುವ ವಸ್ತುವಿನೊಳಗಡೆ ಇದೆಯೋ? ಅಥವಾ ಅದು ನೋಡುತ್ತಿರುವವ ಇಂದ್ರಿಯಗಳ ರುಚಿ ಮತ್ತು ಶಕ್ತಿಯಲ್ಲಿ ಅಡಗಿದೆಯೋ? ಅಥವಾ ಇವೆರಡರ ಸಂಯೋಗವೋ? ಅದು ಕಾಣದ ವಸ್ತು ಮತ್ತು ನೋಡುವವರು ಇವೆರಡರಲ್ಲಿ ಇರುವ ಗುಣಗಳನ್ನು ಸೇರಿಸುವ ಸೇತುವೆ ಸ್ಥಾನವಾಗಿದೆ ಅಲ್ಲವೇ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Does the source of the beauty lie in the thing that is seen?
Is it in the aesthetic ability of the beholder’s eye?
Is it in the coordination of the qualities of the seen and seer?
Is it not the point of agreement between the two? – Marula Muniya
(Translation from "Thus Sang Marula Muniya" by Sri. Narasimha Bhat)

Friday, November 22, 2013

ಸೂರ್ಯಚಂದ್ರಕ್ಷೋಣಿ ತಾರಕಾಗೋಲಗಳು (533)

ಸೂರ್ಯಚಂದ್ರಕ್ಷೋಣಿ ತಾರಕಾಗೋಲಗಳು |
ಪರ್ಯಯಣದಿಂ ಸವೆದು ಸಡಿಲಲದರಿಂದೇಂ? ||
ಪರ್ಯಾಪ್ತವಾಗಿಪಳು ಜಗದಿ ಸತ್ತ್ವವ ಪ್ರಕೃತಿ |
ಮರ್ಯಾದೆ ಬೇರೆನಿಸಿ - ಮರುಳ ಮುನಿಯ || (೫೩೩)

(ಸಡಿಲಲ್+ಅದರಿಂದ+ಏಂ)(ಪರ್ಯಾಪ್ತ+ಆಗಿಪಳು)(ಬೇರೆ+ಎನಿಸಿ)

ಸೂರ್ಯ, ಚಂದ್ರ, ಭೂಮಿ (ಕ್ಷೋಣಿ) ಮತ್ತು ನಕ್ಷತ್ರ (ತಾರಕ) ಗೋಲಗಳು, ಅವುಗಳ ಸುತ್ತುವಿಕೆ(ಪರ್ಯಾಯಣ)ಯಿಂದ ಕ್ಷಯಿಸಿ ಶಿಥಿಲವಾಗುವುದಿಲ್ಲವೇನು? ಪ್ರಕೃತಿಯು ಜಗತ್ತಿನಲ್ಲಿರುವ ಸಾರವನ್ನು ಅದರ ವರ್ತನೆಯೇ ಬೇರೆ ಎಂದು ಎನ್ನಿಸುವಂತೆ ಸಾಮರ್ಥ್ಯಗೊಳಿಸುತ್ತಾಳೆ(ಪರ್ಯಾಪ್ತ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The sun, the earth, stars and planets
May wear out and loosen due to ceaseless rotation
But nature, reimburses the spent energy
By some means or other – Marula Muniya
(Translation from "Thus Sang Marula Muniya" by Sri. Narasimha Bhat)

Thursday, November 21, 2013

ಎರಡನಂತಗಳಿಹುವು ಹಿಂದೊಂದು ಮುಂದೊಂದು (532)

ಎರಡನಂತಗಳಿಹುವು ಹಿಂದೊಂದು ಮುಂದೊಂದು |
ಎರಡಮೇಯಗಳು ಮೇಲೊಂದು ಕೆಳಗೊಂದು ||
ಪರಿಧಿಯಿಲ್ಲದನಂತ ವಿಸ್ತರದ ನಡುವ ಜಗ |
ನೊರೆಯಂತೆ ಹಾಲಿನಲಿ - ಮರುಳ ಮುನಿಯ || (೫೩೨)

(ಎರಡು+ಅನಂತಗಳು+ಇಹುವು)(ಎರಡು+ಅಮೇಯಗಳು)(ಪರಿಧಿಯಿಲ್ಲದ+ಅನಂತ)

ಕೊನೆಯಿಲ್ಲದಿರುವ ಎರಡು ವಸ್ತುಗಳಿವೆ. ಹಿಂದೆ ಒಂದು ಮತ್ತು ಮುಂದೆ ಒಂದು. ಅದೇ ರೀತಿ ನಾವು ಅಳೆಯಲಿಕ್ಕೆ ಅಸಾಧ್ಯವಾದ ವಸ್ತುಗಳು ಎರಡಿವೆ. ಒಂದು ಮೇಲೆ ಮತ್ತು ಇನ್ನೊಂದು ಕೆಳಗೆ ಇವೆ. ಗಡಿ, ಸೀಮೆ ಮತ್ತು ಕೊನೆಯಿಲ್ಲದ ವಿಸ್ತಾರದ ಮಧ್ಯೆ ಈ ಜಗತ್ತು ಹಾಲಿನಲ್ಲಿರುವ ನೊರೆಯಂತಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Two infinities there are, one in the past and the other in future
Two unknowable’s there are, one above and the other below
The world floats in the circumferenceless infinite expanse
Like foam in fresh milk – Marula Muniya
(Translation from "Thus Sang Marula Muniya" by Sri. Narasimha Bhat)

Wednesday, November 20, 2013

ರೂಪ್ಯಕದ ನಾಣ್ಯದಿಂ ಬಿಡಿಕಾಸಿಗೊಂದು ಬೆಲೆ (531)

ರೂಪ್ಯಕದ ನಾಣ್ಯದಿಂ ಬಿಡಿಕಾಸಿಗೊಂದು ಬೆಲೆ |
ಒಪ್ಪಹುದು ಕಾಸಬೆಲೆ ರೂಪ್ಯದಿಂದೆ ||
ಪ್ರಾಪ್ಯರಿಂತನ್ಯೋನ್ಯ ಜನದೊಟ್ಟು ಬಿಡಿಮಂದಿ |
ಸುಪ್ರೀತ ರಾಜ್ಯವದು - ಮರುಳ ಮುನಿಯ || (೫೩೧)

(ಬಿಡಿಕಾಸಿಗೆ+ಒಂದು)(ಒಪ್ಪು+ಅಹುದು)(ಪ್ರಾಪ್ಯರು+ಇಂತು+ಅನ್ಯೋನ್ಯ)(ಜನದ+ಒಟ್ಟು)

ಒಂದು ರೂಪಾಯಿಯ (ರೂಪ್ಯಕ) ನಾಣ್ಯದಿಂದ ಬಿಡಿಕಾಸಿಗೂ ಬೆಲೆ ಬರುತ್ತದೆ ಮತ್ತು ರೂಪಾಯಿಯಿಂದ ಕಾಸಿನ ಬೆಲೆಯನ್ನು ಅಂಗೀಕರಿಸಬಹುದು. ಇದೇ ರೀತಿ ಜನರಸಮೂಹ ಮತ್ತು ಬಿಡಿವ್ಯಕ್ತಿ ಪರಸ್ಪರ ಒಬ್ಬರೊಬ್ಬರಿಗೆ ಒಪ್ಪುವಂಥ ರಾಜ್ಯವಾಗಿರುತ್ತೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Value to a single smallest coin due to the value of the silver rupee
Even the smallest coin is honoured because of its silver
Likewise the individuals benefit the society and the society benefits the individuals
Such a country is really happy – Marula Muniya
(Translation from "Thus Sang Marula Muniya" by Sri. Narasimha Bhat) #dvg,#kagga

Tuesday, November 19, 2013

ಜನನೀತಿಯೇನತಂತ್ರದ ಮಾರ್ಗವೆನ್ನದಿರು (530)

ಜನನೀತಿಯೇನತಂತ್ರದ ಮಾರ್ಗವೆನ್ನದಿರು |
ಕನಸದನುಮಲೆಗೆಳೆಯೆ ನೆನಸು ಕುಳಿಗೆಳೆಗುಂ ||
ಅನುಸರಿಪುದಿಕ್ಕಟ್ಟಿನಲಿ ಮಧ್ಯಗತಿಯನದು |
ಕನಿಕರಿಸು ಲೋಕದಲಿ - ಮರುಳ ಮುನಿಯ || (೫೩೦)

(ಜನನೀತಿ+ಏನು+ಅತಂತ್ರದ)(ಮಾರ್ಗ+ಎನ್ನದೆ+ಇರು)(ಕನಸು+ಅದನು+ಮಲೆಗೆಳೆಯೆ)(ಕುಳಿಗೆ+ಎಳೆಗುಂ)(ಅನುಸರಿಪುದು+ಇಕ್ಕಟ್ಟಿನಲಿ)(ಮಧ್ಯಗತಿಯನ್+ಅದು)

ಲೋಕವನ್ನು ಸರಿಯಾದ ಮಾರ್ಗದಲ್ಲಿ ನಡೆಸಲು ಮಾಡಿರುವ ನ್ಯಾಯ ಮತ್ತು ಧರ್ಮಗಳ ನಿಯಮಗಳೆಲ್ಲವೂ, ಅನಿರ್ಭಂದಿತವಾದ, ಹೇಳುವವರೂ ಕೇಳುವವರೂ ಮತ್ತು ಮೇಲ್ವಿಚಾರಕರಿರದಿರುವ ದಾರಿಗಳೆಂದೆನ್ನಬೇಡ. ಕನಸು ಅವುಗಳನ್ನು ಬೆಟ್ಟದ ಶಿಖರಕ್ಕೆ ತೆಗೆದುಕೊಂಡು ಹೋದರೆ, ವಾಸ್ತವಿಕತೆಯು ಅವುಗಳನ್ನು ಗುಣಿಗೆ ಎಳೆದುಕೊಂಡು ಹೋಗುತ್ತದೆ. ಈ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಅದು ಇವೆರಡೂ ಅಲ್ಲದ ಒಂದು ನಡುಮಾರ್ಗವನ್ನು ಅನುಸರಿಸುತ್ತಿದೆ. ಈ ಪರಿಸ್ಥಿತಿಯಲ್ಲಿ ನೀನು ಲೋಕದಲ್ಲಿ ಕನಿಕರವನ್ನು ತೋರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

“The conduct of people is through a thoughtless path”, say not so
Their dreams pull them to the hills and the realities push them to the ditch
With utmost difficulty people stick to the middle path
Have compassion on the world – Marula Muniya
(Translation from "Thus Sang Marula Muniya" by Sri. Narasimha Bhat)

Monday, November 18, 2013

ಅನಿತಿನಿತು ಶಾಸ್ತ್ರಂಗಳನಿತಿನಿತು ನಿಜಯುಕ್ತಿ (529)

ಅನಿತಿನಿತು ಶಾಸ್ತ್ರಂಗಳನಿತಿನಿತು ನಿಜಯುಕ್ತಿ |
ಇನ ಶಶಿ ಪ್ರಭೆಯಿನಿತು ನೆಲದ ಹಬೆಯಿನಿತು ||
ದಿನದಿನದ ಗತಿಯಿನಿತನಂತದ ಸ್ಮೃತಿಯಿನಿತು |
ಅನುಗೂಡೆ ಬೆಳಕಿಳೆಗೆ - ಮರುಳ ಮುನಿಯ || (೫೨೯)

(ಅನಿತು+ಇನಿತು)(ಶಾಸ್ತ್ರಂಗಳ+ಅನಿತು+ಇನಿತು)(ಗತಿಯಿನಿತು+ಅನಂತದ)(ಬೆಳಕು+ಇಳೆಗೆ)

ಸ್ವಲ್ಪ ಮಟ್ಟಿಗೆ ಗ್ರಂಥಗಳಿಂದ ಸಂಪಾದಿಸಿದ ಜ್ಞಾನ, ಸ್ವಲ್ಪಮಟ್ಟಿಗೆ ತನ್ನ ಸ್ವಂತ ಸಮಯೋಚಿತ ಜ್ಞಾನ, ಸ್ವಲ್ಪಮಟ್ಟಿಗೆ ಸೂರ್ಯ(ಇನ) ಮತ್ತು ಚಂದ್ರ(ಶಶಿ)ರುಗಳು ನೀಡಿದ ಬೆಳಕು ಮತ್ತು ಕಾಂತಿ, ಸ್ವಲ್ಪಮಟ್ಟಿಗೆ ಭೂಮಿಯ ಹಬೆ, ಪ್ರತಿನಿತ್ಯದ ಚಲನೆ ಮತ್ತು ಮುಂದುವರಿಯುವಿಕೆ, ಅನಂತವಾಗಿರುವ ಧರ್ಮ ಮತ್ತು ವೇದಗ್ರಂಥಗಳ ನೆನಪು, ಇವುಗಳೆಲ್ಲವೂ ಹೊಂದಿಕೊಂಡು ಸೇರಿದರೆ ಭೂಮಿ(ಇಳೆ)ಗೆ ಬೆಳಕು ದೊರಕುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

In some measure from scriptures, in some measure from one’s own wisdom
With some light from the sun and moon, some steam from the earth
Some measure of daily forward movement and some remembrance of the Infinite
All these mingle together and light up the world – Marula Muniya
(Translation from "Thus Sang Marula Muniya" by Sri. Narasimha Bhat)

Friday, November 15, 2013

ತನ್ನ ತಾನರಿತವನು ಅನ್ಯನಾಗದೆ ನಿಂತು (528)

ತನ್ನ ತಾನರಿತವನು ಅನ್ಯನಾಗದೆ ನಿಂತು |
ತನ್ನತನದಿಂದನ್ಯರಿಂಗುಪಕರಿಪ್ಪಂ ||
ತನ್ನತಾನದು ಮುಕ್ತ ಭಿನ್ನನಾಗದವನು |
ಮಾನ್ಯನುರ್ವಿಗೆ ಧನ್ಯ - ಮರುಳ ಮುನಿಯ || (೫೨೮)

(ತಾನ್+ಅರಿತವನು)(ಅನ್ಯನ್+ಆಗದೆ)(ತನ್ನತನದಿಂದ+ಅನ್ಯರಿಂಗೆ+ಉಪಕರಿಪ್ಪಂ)(ತನ್ನ+ತಾನ್+ಅದು)(ಭಿನ್ನನ್+ಆಗದವನು)(ಮಾನ್ಯನ್+ಉರ್ವಿಗೆ)

ತನ್ನನ್ನು ತಾನೇ ಚೆನ್ನಾಗಿ ತಿಳಿದುಕೊಂಡವನು, ಬೇರೆಯವನಾಗದೆ ನಿಂತುಕೊಂಡು, ತನ್ನದೇ ಆದ ವ್ಯಕ್ತಿತ್ವದಿಂದ ಇತರರಿಗೆ ಸಹಾಯವನ್ನು ಮಾಡುತ್ತಾನೆ. ತನ್ನಿಂದ ತಾನೇ ಬಿಡುಗಡೆ ಹೊಂದಿದವನು ಮತ್ತು ಒಡೆದು ಬೇರೆಯಾಗದವನು, ಪ್ರಪಂಚ(ಉರ್ವಿ)ದಿಂದ ಗೌರವಿಸಲ್ಪಡುವ ವ್ಯಕ್ತಿ ಮತ್ತು ಪುಣ್ಯಶಾಲಿಯಾಗುತ್ತಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

One who has realized his self becomes one with others
And helps others with all his self
The one whose self id free and one with all the world
Has fulfilled his life mission and is honoured by the world – Marula Muniya
(Translation from "Thus Sang Marula Muniya" by Sri. Narasimha Bhat)

Thursday, November 14, 2013

ಕೊಡಬೇಕು ಕೊಡಬೇಕು ಕೊಡಬೇಕು ನಲುಮೆಯಲಿ (527)

ಕೊಡಬೇಕು ಕೊಡಬೇಕು ಕೊಡಬೇಕು ನಲುಮೆಯಲಿ |
ಮೃಡನಿತ್ತನಿತ ಮುಡಿಪವಂಗೆಂದು ನಿನ್ನಾ ||
ಕೊಡುಗೆಗಳು ಪರಮೇಶನೊಡಲ ಮೂಳೆಗಳಾಗಿ |
ಪೊಡವಿಯನು ಧರಿಸುವುವೊ - ಮರುಳ ಮುನಿಯ || (೫೨೭)

(ಮೃಡನು+ಇತ್ತ+ಅನಿತ)(ಮುಡಿಪು+ಅವಂಗೆ+ಎಂದು)(ಪರಮೇಶನ+ಒಡಲ)(ಮೂಳೆಗಳು+ಆಗಿ)

ಈಶ್ವರ(ಮೃಡ)ನು ನಿನಗೆ ಕೊಟ್ಟಿರುವ ಸಂಪತ್ತನ್ನು ಸ್ವಲ್ಪಮಟ್ಟಿಗೆ ಮೀಸಲಾಗಿಟ್ಟು (ಮುಡಿಪು) ಅವುಗಳನ್ನು ಪ್ರೀತಿಯಿಂದ ಇತರರಿಗೆ ಕೊಡು. ನೀನು ಈ ರೀತಿಯಾಗಿ ಕೊಟ್ಟ ಕೊಡುಗೆಗಳು ಈಶ್ವರನ ದೇಹದ (ಒಡಲ) ಅಸ್ಥಿಗಳಾಗಿ ಭೂಮಿ(ಪೊಡಮಿ)ಯನ್ನು ತೊಡುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Give, give and give with all love and affection
Give all that God has given as the token of your dedication
Let your offerings become the very bones of God’s own body
And support this world – Marula Muniya
(Translation from "Thus Sang Marula Muniya" by Sri. Narasimha Bhat)

Wednesday, November 13, 2013

ತನುವಿನಂಗೀಕಾರ ದಾಂಪತ್ಯದರ್ಧಗುಣ (526)

ತನುವಿನಂಗೀಕಾರ ದಾಂಪತ್ಯದರ್ಧಗುಣ |
ಮನಸಿನಂಗೀಕಾರವಿನ್ನರ್ಧವವರೊಳ್ ||
ಜನುಮದುದ್ಧಾರವಿರ‍್ವರಿಗಮನ್ಯೋನ್ಯ ಬಲ |
ವಿನಿಮಯ ಸಹಾಯದಿಂ - ಮರುಳ ಮುನಿಯ || (೫೨೬)

(ತನುವಿನ+ಅಂಗೀಕಾರ)(ದಾಂಪತ್ಯದ+ಅರ್ಧಗುಣ)(ಮನಸಿನ+ಅಂಗೀಕಾರ)(ಇನ್ನರ್ಧ+ಅವರೊಳ್)(ಜನುಮದ+ಉದ್ಧಾರ+ಇರ‍್ವರಿಗಂ+ಅನ್ಯೋನ್ಯ)

ಒಬ್ಬರೊಬ್ಬರ ದೇಹ ಸೌಂದರ್ಯವನ್ನು ಒಪ್ಪಿಕೊಳ್ಳುವುದು ದಾಂಪತ್ಯ ಜೀವನದ ಅರ್ಧ ಲಕ್ಷಣ. ಒಬ್ಬರೊಬ್ಬರು ಅರ್ಥ ಮಾಡಿಕೊಂಡು ಜೀವನವನ್ನು ನಡೆಸುವುದು ಇನ್ನರ್ಧ ಲಕ್ಷಣ. ಈ ರೀತಿಯ ಪರಸ್ಪರ ಶಕ್ತಿಗಳನ್ನು ಕೊಟ್ಟು, ತೆಗೆದುಕೊಳ್ಳುವಿಕೆಯ (ವಿನಿಮಯ) ಸಹಾಯದಿಂದ ದಂಪತಿಗಳಿಬ್ಬರ ಜನ್ಮಗಳೂ ಉದ್ಧಾರವಾಗುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Each of the married couple ought to accept the body of the other as his or her own
This would bless them with half the benefit of married life
Accepting the mind also like this would bless them with the other half
This is the path for the fulfilment of their loves, each one
Should derive strength through mutual exchange and support- Marula Muniya
(Translation from "Thus Sang Marula Muniya" by Sri. Narasimha Bhat)

Tuesday, November 12, 2013

ಪುರುಷಸಾಧ್ಯ ವಿವೇಕ ಸಿದ್ಧಿ ನಿರ್ಮಮತೆಯಿನೆ (525)

ಪುರುಷಸಾಧ್ಯ ವಿವೇಕ ಸಿದ್ಧಿ ನಿರ್ಮಮತೆಯಿನೆ |
ಪರಿಗೂಢ ಧರ್ಮಬೀಜದ ವಿಕಾಸದಿನೆ ||
ಚಿರ ಸಮಾಧಾನ ಕಲ್ಯಾಣ ಲೋಕಕ್ಕದನು |
ಪೊರೆವನೆ ಜನೋದ್ಧಾರಿ - ಮರುಳ ಮುನಿಯ ||

(ಲೋಕಕ್ಕೆ+ಅದನು)(ಜನ+ಉದ್ಧಾರಿ)

ಅಹಂಕಾರ, ಸ್ವಾರ್ಥ ಮತ್ತು ಮೋಹಗಳನ್ನು ತೊರೆಯುವುದರಿಂದ (ನಿರ್ಮಮತೆಯಿಂದ) ಮನುಷ್ಯನು ಯುಕ್ತಾಯುಕ್ತಾ ವಿವೇಚನೆಯ ಪರಿಜ್ಞಾನವನ್ನು ಹೊಂದಲು ಸಾಧ್ಯ. ಅತ್ಯಂತ ರಹಸ್ಯ(ಪರಿಗೂಢ)ವಾಗಿರುವ ಧರ್ಮದ ಬೀಜದ ಅರಳುವಿಕೆ(ವಿಕಾಸ)ಯಿಂದ ಶಾಶ್ವತವಾದ ನೆಮ್ಮದಿ ಮತ್ತು ಮಂಗಳಕರವಾದುದು ದೊರಕುತ್ತದೆ. ಇದನ್ನು ಕಾಪಾಡುವವನೇ ಜನಗಳನ್ನು ಉದ್ಧಾರ ಮಾಡುವವನೆನ್ನಿಸಿಕೊಳ್ಳುತ್ತೇನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Everlasting peace and welfare of the world can be achieved through
The maximum possible human discrimination and dispassion
And the growth and development of the mysterious dharma
He who promotes the above is the saviour of the world – Marula Muniya
(Translation from "Thus Sang Marula Muniya" by Sri. Narasimha Bhat)

Monday, November 11, 2013

ನಾಳೆಯೊಂದಿಹುದು ನಿನ್ನೆಯವೊಲೆ ಬಾಳಿನಲಿ (524)

ನಾಳೆಯೊಂದಿಹುದು ನಿನ್ನೆಯವೊಲೆ ಬಾಳಿನಲಿ |
ಬೀಳಾಯ್ತು ನಿನ್ನೆಯದೆಂದಳುವುದೇಕೆ ? ||
ಮೇಲು ಮಾಡಲ್ಕಂದು ಸಮಯವದಕಾಣೆಯೇಂ |
ಪಾಳೊಂದುಮಿಲ್ಲವೆಲೊ - ಮರುಳ ಮುನಿಯ || (೫೨೪)

(ನಾಳೆ+ಒಂದು+ಇಹುದು)(ಬೀಳ್+ಆಯ್ತು)(ನಿನ್ನೆ+ಅದು+ಎಂದು+ಅಳುವುದು+ಏಕೆ)(ಮಾಡಲ್ಕೆ+ಎಂದು)(ಸಮಯವ+ಅದುಅ+ಕಾಣೆಯೇಂ)(ಪಾಳ್+ಒಂದುಂ+ಇಲ್ಲ+ಎಲೊ)

ಆಗಿಹೋದ ನಿನ್ನೆಯಂತೆ ಜೀವನದಲ್ಲಿ ನಾಳೆ ಎನ್ನುವುದೂ ಒಂದಿದೆ ಎನ್ನುವುದನ್ನು ಮರೆಯಬೇಡ. ನಿನ್ನೆಯ ದಿನ ಏನೂ ಕೆಲಸವಾಗದೆ ಹಾಳಾಯ್ತೆಂದು ಏತಕ್ಕಾಗಿ ಅಳುತ್ತಿರುವೆ. ಬೇಕಾಗಿರುವುದನ್ನು ಪುನಃ ಮೇಲಕ್ಕೆತ್ತಲು ಅದು ತಕ್ಕ ಸಮಯಕ್ಕೆ ಕಾಯುತ್ತಿರುವುದನ್ನು ನೀನು ಕಾಣುತ್ತಿಲ್ಲವೇನು? ಪ್ರಪಂಚದಲ್ಲಿ ಹಾಳು(ಪಾಳ್) ಎನ್ನುವುದು ಯಾವುದೂ ಇಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

There’s a tomorrow in life just as there was a yesterday
Why do you grieve thinking that past yesterday became a waste?
Can’t you still find enough time to perform noble deeds?
Nothing is a waste – Marula Muniya
(Translation from "Thus Sang Marula Muniya" by Sri. Narasimha Bhat)

Friday, November 8, 2013

ದೇವನಿಂಗೆಂದು ದುಡಿ ಯಾವಾತನಿಗಮಲ್ತು (523)

ದೇವನಿಂಗೆಂದು ದುಡಿ ಯಾವಾತನಿಗಮಲ್ತು |
ಜೀವ ಶೋಧನೆಗೆ ದುಡಿ ಭೂವಿಭವಕಲ್ತು ||
ಈವನೆಲ್ಲರ್ಗಮೀಶಂ ತಕ್ಕುದವರವರ್ಗೆ |
ಆವರದಿ ತೃಪ್ತನಿರು - ಮರುಳ ಮುನಿಯ || (೫೨೩)

(ದೇವನಿಂಗೆ+ಎಂದು)(ಯಾವಾತನಿಗಂ+ಅಲ್ತು)(ಭೂವಿಭವಕೆ+ಅಲ್ತು)(ಈವನ್+ಎಲ್ಲರ್ಗಂ+ಈಶಂ)
(ತಕ್ಕುದು+ಅವರವರ್ಗೆ)(ತೃಪ್ತನ್+ಇರು)

ಪರಮಾತ್ಮನನ್ನು ಸಂತುಷ್ಟಪಡಿಸಲು ಕೆಲಸ ಮಾಡು, ಇನ್ನು ಬೇರೆ ಯಾರಿಗೋಸ್ಕರವಲ್ಲ. ಜೀವವನ್ನು ಸ್ವಚ್ಛಗೊಳಿಸಲು ಶ್ರಮಿಸು. ಭೂಮಿಯಲ್ಲಿ ನಿನಗೆ ದೊರಕುವ ವೈಭವ(ವಿಭವ)ಗಳಿಗಾಗಿ ಅಲ್ಲ. ಅವರವರಿಗೆ ಯೋಗ್ಯವಾಗಿ ದೊರಕಬೇಕಾದುದ್ದನ್ನು ಅವರವರಿಗೆ ಪರಮಾತ್ಮನು ನೀಡುತ್ತಾನೆ. ಈಶ್ವರನ ಆ ಅನುಗ್ರಹವನ್ನು ಸ್ವೀಕರಿಸಿ ತೃಪ್ತನಿರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Work for God and not for the sake of anyone else,
Work for the exploration of the soul and not for worldly wealth
God grants everybody what every one of them truly deserves
Be content with this boon – Marula Muniya
(Translation from "Thus Sang Marula Muniya" by Sri. Narasimha Bhat)

Thursday, November 7, 2013

ಲೋಕೇಶನೇಂ ನಿರಂಕುಶನವನ ರಾಜ್ಯದಲಿ (522)

ಲೋಕೇಶನೇಂ ನಿರಂಕುಶನವನ ರಾಜ್ಯದಲಿ |
ಲೋಕಸಭೆಯೊಂದಿಲ್ಲ ದೂರಿಕೊಳೆ (ಕೊಳೆಯ) ||
ಸಾಕು ನಮಗೀ ಹಳೆಯ ಸೊಟ್ಟುಸೊಟ್ಟಿನ ಸೃಷ್ಟಿ |
ಬೇಕು ಪ್ರಜಾಸೃಷ್ಟಿ - ಮರುಳ ಮುನಿಯ || (೫೨೨)

(ಲೋಕ+ಈಶನು+ಏಂ)(ನಿರಂಕುಶನು+ಅವನ)(ಲೋಕಸಭೆ+ಒಂದು+ಇಲ್ಲ)

ಪರಮಾತ್ಮನು ತನ್ನ ರಾಜ್ಯದಲ್ಲಿ ಯಾವ ವಿಧವಾದ ಅಡ್ಡಿ ಆತಂಕಗಳೂ ಇಲ್ಲದೆ ರಾಜ್ಯಭಾರವನ್ನು ನಡೆಸುತ್ತಾನೋ? ಅವನ ವಿರುದ್ಧ ನಾವುಗಳು ಏನನ್ನಾದರೂ ದೂರು ಹೇಳಬೇಕಿದ್ದಲ್ಲಿ ನಮಗೆ ನಮ್ಮದೇ ಆದ ಯಾವ ಪ್ರಜಾ ಸಭೆಗಳೂ ಇಲ್ಲ. ನಮಗಂತೂ ಈ ಹಳೆಯ, ನೆಟ್ಟಗಿಲ್ಲದಿರುವ ಮತ್ತು ಕುಂದು ಕೊರತೆಗಳಿಂದ ಕೂಡಿದ ಸಹವಾಸ ಸಾಕಾಗಿದೆ. ನಮಗೆ ಈಗ ಬೇಕಿರುವುದು ನಾವುಗಳೇ ಸಡೆಸಲು ಸಾಧ್ಯವಾದಂತಹ ಒಂದು ಪ್ರಜಾಸೃಷ್ಟಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Is the master of the universe an autocrat? In His Kingdom
There’s no parliament where we can give vent to our grievances
Enough, enough of this crooked, craggy world
We now long for a creation, for and by the people – Marula Muniya
(Translation from "Thus Sang Marula Muniya" by Sri. Narasimha Bhat)

Wednesday, November 6, 2013

ಸ್ವೈರಪ್ರಕೃತಿಯಿನಪ್ಪ ಮಮತಾ ಪ್ರಲೋಭನ (521)

ಸ್ವೈರಪ್ರಕೃತಿಯಿನಪ್ಪ ಮಮತಾ ಪ್ರಲೋಭನ |
ಪ್ರೇರಣೆಗಳಂ ನರಂ ಮೀರಿ ತನ್ನಾತ್ಮಂ ||
ಸಾರನಿಧಿ ಮಿಕ್ಕೆಲ್ಲ ಜಗದಿಮೆನ್ನುತೆ ಬಾಳ್ವ |
ವೈರಾಗ್ಯದಿನೆ ಶಾಂತಿ - ಮರುಳ ಮುನಿಯ || (೫೨೧)

(ಸ್ವೈರಪ್ರಕೃತಿಯಿನ್+ಅಪ್ಪ)(ತನ್ನ+ಆತ್ಮಂ)(ಜಗದಿಂ+ಎನ್ನುತೆ)

ಪ್ರಕೃತಿಯು ತನ್ನ ಸ್ವೇಚ್ಛ (ಸ್ವೈರ) ಭಾವದಿಂದ ಉಂಟುಮಾಡುವ ಮೋಹ, ಅಹಂಕಾರ ಮತ್ತು ಸ್ವಾರ್ಥಗಳ ಆಸೆಗಳನ್ನು ಹುಟ್ಟಿಸುವ ಪ್ರಚೋದನೆ(ಪ್ರೇರಣೆ)ಗಳನ್ನು ಮನುಷ್ಯನು ದಾಟಿಹೋಗಿ, ತನ್ನ ಆತ್ಮದಲ್ಲೇ ಸಂಪೂರ್ಣ ಸಂಪತ್ತು (ಸಾರನಿಧಿ) ಅಡಗಿದೆ, ಮಿಕ್ಕಿದ್ದುದೆಲ್ಲವೂ ಪ್ರಪಂಚಕ್ಕೆ ಸೇರಿದ್ದುದು ಎನ್ನುತ್ತ ಜೀವನವನ್ನು ನಡೆಸುವ ವಿರಕ್ತತೆಯಿಂದಲೇ ಮನುಷ್ಯನಿಗೆ ನೆಮ್ಮದಿಯು ದೊರಕುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Man must rise above myness and enticements arising from
The unbridled wayward life style and realize that
His own self is a treasure far more precious than all the rest of the world
Peace reigns in one who lives as above with dispassion – Marula Muniya
(Translation from "Thus Sang Marula Muniya" by Sri. Narasimha Bhat)

Tuesday, November 5, 2013

ಮಿತಿಯುಂಟು ಲೌಕಿಕದ ಕರ್ತವ್ಯಕೆಲ್ಲಕುಂ (520)

ಮಿತಿಯುಂಟು ಲೌಕಿಕದ ಕರ್ತವ್ಯಕೆಲ್ಲಕುಂ |
ಸತಿಸುತರ ದಾಯಕ್ಕೆ ದೇಶಕುಲಋಣಕೆ ||
ಅತಿಧನಾರ್ಜನೆಯತ್ನವಾತ್ಮವನೆ ಹಿಸುಕೀತು |
ಮಿತಿಯಿಂದ ಹಿತ ಲೋಕ - ಮರುಳ ಮುನಿಯ || (೫೨೦)

(ಮಿತಿ+ಉಂಟು)(ಕರ್ತವ್ಯಕೆ+ಎಲ್ಲಕುಂ)(ಅತಿಧನಾರ್ಜನಯತ್ನ+ಆತ್ಮವನೆ)

ನಾವು ಈ ಲೌಕಿಕ ಪ್ರಪಂಚದಲ್ಲಿ ಮಾಡಬೇಕಾದ ಕರ್ತವ್ಯಗಳೆಲ್ಲವಕ್ಕೂ, ಪತ್ನಿ ಮತ್ತು ಪುತ್ರರಿಗೆ ಕೊಡಬೇಕಾದ ಆಸ್ತಿ(ದಾಯ)ಗಳಿಗೂ, ದೇಶ ಮತ್ತು ಕುಲಕ್ಕೆ ಸಲ್ಲಿಸಬೇಕಾದ ಋಣಗಳಿಗೂ ಒಂದು ಮಿತಿ ಇದೆ. ಇದನ್ನು ಬಿಟ್ಟು ಅತಿಯಾಗಿ ಹಣವನ್ನು ಸಂಪಾದಿಸುವ ಪ್ರಯತ್ನವನ್ನು ಮಾಡಿದರೆ ಅದು ಆತ್ಮವನ್ನೇ ಹಿಸುಕಬಹುದು. ಮಿತಿಯಲ್ಲಿ ಕೆಲಸ ಮಾಡಿದರೆ ಲೋಕಕ್ಕೆ ಒಳ್ಳೆಯದಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Limits there are to all the worldly duties, limited are
The duties to wife and children, to community and country
Efforts to heap up excessive wealth may crush your soul
Welfare of the world lies only in moderate conduct – Marula Muniya
(Translation from "Thus Sang Marula Muniya" by Sri. Narasimha Bhat)

Thursday, October 31, 2013

ಭುವಿಗೆ ಸಲಲಿರ‍್ಪ ಸಲಿಸಲ್ಕಾಗದನ್ನಋಣ (519)

ಭುವಿಗೆ ಸಲಲಿರ‍್ಪ ಸಲಿಸಲ್ಕಾಗದನ್ನಋಣ |
ಜವರಾಯ ಬಿಟ್ಟಿಹ ಕಳೇಬರದ ಋಣವು |
ಜವದಿನದನಗ್ನಿಗೊ ವಸುಧಂರೆಗೊ ಸೇರ‍್ಪಸಖ |
ಶವವಾಹಕನಿಗೆ ನಮೊ - ಮರುಳ ಮುನಿಯ || (೫೧೯)

(ಸಲಲು+ಇರ‍್ಪ)(ಸಲಿಸಲ್ಕೆ+ಆಗದ+ಅನ್ನಋಣ)(ಜವದಿನ್+ಅದನ್+ಅಗ್ನಿಗೊ)

ಭೂಮಿಗೆ(ಭುವಿ)ಗೆ ಸೇರಿಸಬೇಕಾಗಿರುವ, ಆದರೆ ಅದನ್ನು ಸಂದಾಯ ಮಾಡಲು ಆಗದಂತಹ ಅನ್ನದ ಋಣ, ಯಮಧರ್ಮರಾಯನು ಬಿಟ್ಟಿರುವ ಮೃತ ಶರೀರ(ಕಳೇಬರ)ದ ಋಣ. ಯಮನಿಂದ ಶೀಘ್ರವಾಗಿ ಅದನ್ನು ಅಗ್ನಿಗೋ ಅಥವಾ ಭೂಮಿಗೋ(ವಸುಂಧರೆ)ಗೋ ಸೇರಿಸುವ, ಆ ಶವ ಹೊರುವ ಮಹಾನುಭಾವನಿಗೆ ಸಮಸ್ಕಾರ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The debt of food to mother earth can never be settled fully
The debt of dead body left by the God of Death also can’t be repaid
Salutation therefore to the bier bearers
Who consign the body to the earth or to the flames – Marula Muniya
(Translation from "Thus Sang Marula Muniya" by Sri. Narasimha Bhat)

Wednesday, October 30, 2013

ಋಣಗಳುಂಟೆನಿತೆನಿತೊ ಅನ್ನಋಣ ವಸ್ತ್ರಋಣ (518)

ಋಣಗಳುಂಟೆನಿತೆನಿತೊ ಅನ್ನಋಣ ವಸ್ತ್ರಋಣ |
ಧನಋಣಗಳವನಿನಿತು ತೀರಿಸಲ್ಕಕ್ಕುಂ ||
ಋಣವೊಂದು ಬೇರಿಹುದು ತೀರಿಸಲ್ಕಸದಳವೊ |
ಹೆಣದ ಹೊರೆಯದು ಜಗಕೆ - ಮರುಳ ಮುನಿಯ || (೫೧೮)

(ಋಣಗಳು+ಉಂಟು+ಎನಿತೊ+ಅನಿತೊ)(ಧನಋಣಗ+ಅವನ್+ಇನಿತು)(ತೀರಿಸಲ್ಕೆ+ಅಕ್ಕುಂ)(ತೀರಿಸಲ್ಕೆ+ಅಸದಳವೊ)

ಪ್ರಪಂಚದಲ್ಲಿ ನಾವು ತೀರಿಸಬೇಕಾದ ಸಾಲಗಳು ಅಷ್ಟೋ ಇಷ್ಟೋ ಇವೆ. ಅನ್ನ, ಬಟ್ಟೆ ಅಥವಾ ಹಣಕ್ಕೆ ಸಂಬಂಧಪಟ್ಟ ಸಾಲಗಳನ್ನು ಸ್ವಲ್ಪಮಟ್ಟಿಗೆ ತೀರಿಸಲು ಸಾಧ್ಯವಾಗಬಹುದು. ಆದರೆನಿವುಗಳಿಗೆ ಸಂಬಂಧಿಸದ ಬೇರೆ ಒಂದು ಸಾಲವಿದೆ. ಅದನ್ನು ತೀರಿಸಲು ಸಾಧ್ಯವಿಲ್ಲ (ಅಸದಳ). ಇದು ಜಗತ್ತಿಗೆ ಹೆಣದ ಭಾರವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Debts to be settled are many in number
Debts of food, clothing and money can be settled to some extent
But there is another debt that is important to settle
It is like the maintaining burden of a corpse to the world – Marula Muniya
(Translation from "Thus Sang Marula Muniya" by Sri. Narasimha Bhat)

Tuesday, October 29, 2013

ಸೃಷ್ಟಿ ವೃಕ್ಷಾಂಕುರಂ ಸೌಂದರ್ಯಮದರಿಂದೆ (517)

ಸೃಷ್ಟಿ ವೃಕ್ಷಾಂಕುರಂ ಸೌಂದರ್ಯಮದರಿಂದೆ |
ಪುಟ್ಟುವುವು ಜೀವನದ ಮೋಹದಾಹಗಳು ||
ಇಷ್ಟಕೃತಿಋಣಗಳಿಂ ಜನ್ಮಾಂತರದ ಸರಣಿ |
ಪುಷ್ಟಿ ಸೊಗಸಿಂ ಜಗಕೆ - ಮರುಳ ಮುನಿಯ || (೫೧೭)

(ವೃಕ್ಷ+ಅಂಕುರಂ)(ಸೌಂದರ್ಯಂ+ಅದರಿಂದೆ)

ಸೃಷ್ಟಿಯೆಂಬ ಮರದ ಮೊಳಕೆಯೇ ಆಕರ್ಷಣೆಯ ತಾಣ. ಅದರಿಂದ ಜೀವಿಗಳ ಮೋಹ ಮತ್ತು ತೃಷೆಗಳು ಹುಟ್ಟಿಕೊಳ್ಳುತ್ತವೆ. ತನಗೆ ಇಷ್ಟವಾದ ಕೆಲಸಗಳಿಂದ ಋಣಗಳು ಮತ್ತು ಅದರಿಂದ ಜನ್ಮಾಂತರದ ಸಾಲುಗಳು ಬರುತ್ತವೆ. ಈ ರೀತಿಯಾಗಿ ಬೆಳೆಯುವಿಕೆಯಿಂದ ಜಗತ್ತು ಚಂದವಾಗಿ ಕಾಣುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Beauty is the very sprout of the tree of creation
All attachments and cravings in life stern from beauty
Chain of births due to the debts of Karma motivated by desires
Nourishment to the world from beauty – Marula Muniya
(Translation from "Thus Sang Marula Muniya" by Sri. Narasimha Bhat)

Monday, October 28, 2013

ಭೂತವೋ ಸತ್ತ್ವವೋ ಶಕ್ತಿಯೋ ತೇಜಮೋ (516)

ಭೂತವೋ ಸತ್ತ್ವವೋ ಶಕ್ತಿಯೋ ತೇಜಮೋ |
ಜ್ಯೋತಿಯೋ ವ್ಯೋಮವೋ ಮನದ ಕಲ್ಪನೆಯೋ ||
ಪ್ರೀತಿಯೋ ಪ್ರಗತಿಯೋ ಮಹಿಮೆಯೋ ಕಾಂತಿಯೋ |
ನೀತಿಯೋ ಖ್ಯಾತಿಯೋ - ಮರುಳ ಮುನಿಯ || (೫೧೬)

ಅದು ಒಂದು ಭೂತವಿರಬಹುದು, ಶಕ್ತಿಯಿರಬಹುದು, ಸಾರವಿರಬಹುದು, ತೇಜಸ್ಸಿರಬಹುದು, ಬೆಳಕಿನ ಜ್ಯೋತಿಯಿರಬಹುದು, ಆಕಾಶ(ವ್ಯೋಮ)ವಾಗಿರಬಹುದು. ಮನಸ್ಸಿನ ಊಹೆಗಳಿರಬಹುದು, ಪ್ರೀತಿ, ಪ್ರೇಮಗಳಿರಬಹುದು, ಕಾಂತಿಯಿರಬಹುದು, ನೀತಿ, ನಿಯಮಗಳಿರಬಹುದು ಅಥವಾ ಕೀರ್ತಿ ಮತ್ತು ಪ್ರಸಿದ್ಧಿಗಳಿರಬಹುದು. ನಿನಗೆ ಯಾವುದು ಲಭ್ಯವೋ ಅದು ಸಿಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

It may be the basic element or an entity or an energy form or radiance
It may be a light of the infinite sky or a mere figment of imagination
It may be love or the effulgence of mind
It may be morality of fame – Marula Muniya
(Translation from "Thus Sang Marula Muniya" by Sri. Narasimha Bhat)

Friday, October 25, 2013

ಅರಾಧನೆಯ ಫಲಂ ಪ್ರಾರಬ್ಧಮೊಡವೆರೆದು (515)

ಅರಾಧನೆಯ ಫಲಂ ಪ್ರಾರಬ್ಧಮೊಡವೆರೆದು |
ಕಾರ ಸಿಹಿ ಕಹಿ ಹುಳಿಯ ಸೇರಿ ಕೂಟಕ್ಕುಂ ||
ಸ್ವಾರಸ್ಯ ಕೆಟ್ಟಿತೆಂದಾಹಾರವನು ಬಿಡಲು |
ಬೇರದೇನಿಹುದೂಟ - ಮರುಳ ಮುನಿಯ || (೫೧೫)

(ಪ್ರಾರಬ್ಧಂ+ಒಡವೆರೆದು)(ಕೂಟು+ಅಕ್ಕುಂ)(ಕೆಟ್ಟಿತು+ಎಂದು+ಆಹಾರವನು)(ಬೇರೆ+ಅದು+ಏನ್+ಇಹುದು+ಊಟ)

ನೀನು ಪರಮಾತ್ಮನನ್ನು ಅರ್ಚಿಸಿದ ಪರಿಣಾಮವು ಮತ್ತು ಪೂರ್ವಜನ್ಮದ ಕರ್ಮ ಎರಡೂ ಸೇರಿ ಕಾರ, ಸಿಹಿ, ಕಹಿ ಮತ್ತು ಹುಳಿಗಳ ರುಚಿಗಳನ್ನು ಕೂಡಿಕೊಂಡು ಮೇಲೋಗರವಾದ ಕೂಟು ಆಗುತ್ತದೆ. ಈ ತರಹದ ಮೇಲೋಗರದಲ್ಲಿ ಯಾವ ವಿಧವಾದ ರುಚಿಯೂ ಇಲ್ಲವೆಂದು ನೀನು ಊಟವನ್ನು ಮಾಡದಿದ್ದರೆ, ನಿನಗೆ ಇನ್ಯಾವ ಊಟವೂ ದೊರಕಲಾರದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The beneficial effect of worship and prayers mingled with your Karma
Become your food, sweet or hot, bitter or sour
What else do you eat if you give up the food
Saying that the food is of bad taste – Marula Muniya (515)
(Translation from "Thus Sang Marula Muniya" by Sri. Narasimha Bhat)

Thursday, October 24, 2013

ಫಲವನಾನದೆ ನಿನ್ನ ಮನದೊಳುಳಿದಾಸೆಗಳು (514)

ಫಲವನಾನದೆ ನಿನ್ನ ಮನದೊಳುಳಿದಾಸೆಗಳು |
ಕೊಳೆತ ಹೆಣದಂತೆ ನಾರುವುವು ಹೊರೆಯಾಗಿ ||
ಎಳಸಿದುದನೀಯಲಾರದ ದೈವವೆಳಸಿಕೆಯ |
ಮೊಳೆಯನಾನುಂ ಸುಡುಗೆ - ಮರುಳ ಮುನಿಯ || (೫೧೪)

(ಫಲವನ್+ಆನದೆ)(ಮನದೊಳ್+ಉಳಿದ+ಆಸೆಗಳು)(ಎಳಸಿದುದನ್+ಈಯಲಾರದ)(ದೈವ+ಎಳಸಿಕೆಯ)(ಮೊಳೆಯನ್+ಆನುಂ)

ಫಲವಾಗದೆ, ನಿನ್ನ ಮನಸ್ಸಿನೊಳಗಡೆಯೇ ಉಳಿದುಕೊಂಡಿರುವ ನಿನ್ನ ಬಯಕೆಗಳು ಕೊಳೆತುಹೋಗಿರುವ ಹೆಣದಂತೆ ನಿನಗೊಂದು ಭಾರವಾಗಿ ದುರ್ನಾತವನ್ನು ಬೀರುತ್ತದೆ. ನೀನು ಅಪೇಕ್ಷಿಸಿದ್ದುದನ್ನು (ಎಳಸಿದುದನ್) ನಿನಗೆ ಕೊಡಲಾಗದ (ಈಯಲಾರದ) ದೈವವು, ಆ ನಿನ್ನ ಬಯಕೆಗಳ(ಎಳಸಿಕೆಯ) ಮೊಳಕೆಗಳನ್ನಾದರೂ ಅವು ಬಲಿಯುವುದಕ್ಕೆ ಮೊದಲೇ ಸುಟ್ಟುಹಾಕಿದರೆ ಒಳ್ಳೆಯದಲ್ಲವೇ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The unfulfilled desires still lurking in your mind
Stink like rotten carcass and become a burden
The God who is unable to grant the desires of the devotees
Should at least burn the very roots of desires – Marula Muniya (514)
(Translation from "Thus Sang Marula Muniya" by Sri. Narasimha Bhat)

Wednesday, October 23, 2013

ಹಬ್ಬ ದಿಬ್ಬಣ ಪಥ್ಯತಿಥಿಗಳೆಂಜಲು ಸೇರೆ (513)

ಹಬ್ಬ ದಿಬ್ಬಣ ಪಥ್ಯತಿಥಿಗಳೆಂಜಲು ಸೇರೆ |
ಬೊಬ್ಬಿಟ್ಟು ಕಾದುವುವು ಹದಿನೆಂಟು ನಾಯಿ ||
ಒಬ್ಬಟ್ಟೊ ವಡೆಯೊ ತಂಗುಳೊ ಬರಿ ಹೇಸಿಗೆಯೊ |
ಲಭ್ಯವಾವುದಕೇನೊ - ಮರುಳ ಮುನಿಯ || (೫೧೩)

(ತಿಥಿಗಳ+ಎಂಜಲು)(ಲಭ್ಯ+ಆವುದು+ಅಕೇನೊ)

ಹಬ್ಬದ, ಮದುವೆಯ ಮೆರವಣಿಗೆಯ, ಪಥ್ಯದ ಅಥವಾ ತಿಥಿಗಳ ಊಟದ ನಂತರ ಮಿಕ್ಕಿರುವ ಎಂಜಲೂಟಗಳಿಗಾಗಿ, ಹಲವಾರು ನಾಯಿಗಳು ಬೊಗಳಿ, ಚೀರಾಡಿ ಜಗಳವಾಡುತ್ತವೆ. ಆ ಮಿಕ್ಕಿರುವ ಎಂಜಲೂಟದಲ್ಲಿ, ಅವುಗಳಿಗೆ, ಅವುಗಳ ಅದೃಷ್ಟವನ್ನವಲಂಬಿಸಿ ಒಬ್ಬಟ್ಟಿನ ಚೂರೋ, ಒಂದು ವಡೆಯ ತುಣುಕೋ, ಹಳಸಿದ ಪದಾರ್ಥಗಳೋ ಅಥವಾ ಕೇವಲ ಹೊಲಸೋ ದೊರಕುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Seeing discarded food of festival, marriage or regimen or mane’s day
Scores or dogs bark aloud and flight with one another to grab it
It may be obbattu or vade or stale food or dirty stools
What each dog gets is not certain – Marula Muniya (513)
(Translation from "Thus Sang Marula Muniya" by Sri. Narasimha Bhat)

Tuesday, October 15, 2013

ತ್ರಿಜಟಿಯೋ ವಿಧಿಯದನದೃಷ್ಟವೆನ್ನುವುದು ಜನ (512)

ತ್ರಿಜಟಿಯೋ ವಿಧಿಯದನದೃಷ್ಟವೆನ್ನುವುದು ಜನ |
ನಿಜಕರ್ಮ ಕಶೆಯೊಂದು ಜಗದ ಕಶೆಯೊಂದು ||
ಅಜಗೂಢಕಶೆಯೊಂದು ಮೂರಿಂತಮರೆ ನಿನ್ನ |
ವಿಜಿಗೀಷುತೆಯ ಮೆರಸೊ - ಮರುಳ ಮುನಿಯ || (೫೧೨)

(ವಿಧಿ+ಅದನ್+ಅದೃಷ್ಟ+ಎನ್ನುವುದು)(ಮೂರು+ಇಂತು+ಅಮರೆ)

ಮೂರು ಚಾವಟಿ(ತ್ರಿಜಟಿ)ಗಳಿಂದ ಹೆಡೆದ ಜಡೆಯೇ ವಿಧಿ. ಜನಗಳೇನೋ ಅದನ್ನು ಅದೃಷ್ಟ ಎಂದು ಹೆಸರಿಟ್ಟು ಕರೆಯುತ್ತಾರೆ. ತಾನು ಮಾಡಿದ ಕೆಲಸಗಳ ಚಾವಟಿ(ಕಶೆ) ಒಂದು, ಜಗತ್ತಿನ ಚಾವಟಿ ಮತ್ತೊಂದು, ಮೂರನೆಯದು ದೈವರಹಸ್ಯ (ಅಜಗೂಢ)ದಲ್ಲಿರುವ ಚಾವಟಿ. ಈ ಮೂರೂ ಚಾವಟಿಗಳು ಜಡೆಯಾಗಿ ಹೆಣೆದುಕೊಂಡು ನಿನ್ನ ಮೇಲೆ ಬೀಳಲು(ಅಮರು) ನೀನು ಹೆದರದೆ ಅವುಗಳ ಜೊತೆ ಹೋರಾಡಿ ನಿನ್ನ ಜಯದ ಇಚ್ಛೆ(ವಿಜಿಗೀಷುತೆ)ಯನ್ನು ಪ್ರಯತ್ನಿಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

A whip with three thongs, Fate holds and people call it Luck
When the lash of your own Karma, the lash of the world around
And the mysterious lash of the Creator whips you
You must display your power to emerge victorious – Marula Muniya
(Translation from "Thus Sang Marula Muniya" by Sri. Narasimha Bhat)

Friday, October 11, 2013

ಅರಿಯಾರು ಮಿತ್ರನಾರ್ ಪ್ರಕೃತಿಕರವೆರೆಡರಲಿ (511)

ಅರಿಯಾರು ಮಿತ್ರನಾರ್ ಪ್ರಕೃತಿಕರವೆರೆಡರಲಿ |
ಇರವೀವುದೊಂದಿರಲು ತೆರಪೀವುದೊಂದು ||
ಪರಿವೃತ್ತಕಂದುಕಾಕ್ರೀಡೆ ವಿಧಿಯಮರೊಳಗೆ |
ಬರಿಯ ಕಂದುಕ ನಾವು - ಮರುಳ ಮುನಿಯ || (೫೧೧)

(ಪ್ರಕೃತಿಕರ+ಎರೆಡರಲಿ)(ಇರವು+ಈವುದು+ಒಂದು+ಇರಲು)(ತೆರಪು+ಈವುದು+ಒಂದು)

ಶತ್ರು(ಅರಿ) ಯಾರು ಮತ್ತು ಸ್ನೇಹಿತನು ಯಾರು? ಇವೆರಡರಲ್ಲೂ ಪ್ರಕೃತಿಯ ಕೈವಾಡವಿದೆ. ಒಂದು ನಮಗೆ ಅಸ್ತಿತ್ವವನ್ನು ಕೊಟ್ಟಿದೆ. ಮತ್ತೊಂದು ಬಿಡುವನ್ನು ಕೊಟ್ಟಿದೆ. ವಿಧಿ ಮತ್ತು ಯಮರ ನಡುವೆ ಚೆಂಡಿ(ಕಂದುಕ)ನಾಟ ನಡೆಯುತ್ತಿದೆ. ಚೆಂಡು ಒಂದೊಂದು ಸಲ ಒಬ್ಬೊಬ್ಬರ ಬಳಿ ಇರುತ್ತದೆ. ನಾವು ಕೇವಲ ಚೆಂಡು. ಆದದ್ದರಿಂದ, ಅವರು ಎಲ್ಲಿಗೆ ಹೊಡೆಯುತ್ತಾರೋ, ಅಲ್ಲಿಗೆ ಹೋಗಿ ಬೀಳುತ್ತೇವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Who is foe and who is friend? Nature handles both.
One allows us to stay and the other forces us to quit
This life is a game of ball between Fate and the God of death
Within the marked circle and we are just the ball – Marula Muniya
(Translation from "Thus Sang Marula Muniya" by Sri. Narasimha Bhat) 

Wednesday, October 9, 2013

ಚಕ್ರದಕ್ಷಂ ಸವೆದು ನಾಭಿಬಂಧಂ ಸಡಲಿ (510)

ಚಕ್ರದಕ್ಷಂ ಸವೆದು ನಾಭಿಬಂಧಂ ಸಡಲಿ |
ವಕ್ರವಾಗದೆ ಭುವನ ಗೋಲಗಳ ಯಾನಂ ||
ಶಕ್ರಧನು ಸೂರ್ಯೋಪರಾಗ ಭೂಕಂಪಿತಗ - |
ಳಾಕ್ರೀಡೆಗೇಂ ನಿಯತಿ - ಮರುಳ ಮುನಿಯ || (೫೧೦)

(ವಕ್ರ+ಆಗದೆ)(ಸೂರ್ಯ+ಉಪರಾಗ)(ಭೂಕಂಪಿತಗಳ+ಆ+ಕ್ರೀಡೆಗೆ+ಏಂ)

ಚಕ್ರದ ಸುತ್ತು(ಅಕ್ಷ)ಗಳು ಸವೆದುಹೋಗಿ, ಅದರ ಮಧ್ಯದ ಗುಂಬ(ನಾಭಿ)ದ ಹಿಡಿತವು ಸಡಿಲವಾದಾಗ, ಭೂಮಿಯ (ಭುವನ) ಗೋಳದ ಪ್ರಯಾಣವು ಸೊಟ್ಟಾಗದಿರುವುದೇನು? ಕಾಮನಬಿಲ್ಲು (ಶಕ್ರಧನು) ಸೂರ್ಯಗ್ರಹಣ (ಉಪರಾಗ) ಮತ್ತು ಭೂಕಂಪಗಳ ಆಟಗಳಿಗೆ ನಿಯಮಗಳಾವುವು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The wheel axis may wear out and the hub may become loose
And the astral globes may deviate from their regular orbits
What are the rules governing the games like rainbows
Solar eclipse and earthquakes? – Marula Muniya
(Translation from "Thus Sang Marula Muniya" by Sri. Narasimha Bhat)

Tuesday, October 8, 2013

ಎನಿತ ಜಗಕಿತ್ತೆ ನೀಂ ಕೊಂಡೆಯೆನಿತದರಿಂದ (509)

ಎನಿತ ಜಗಕಿತ್ತೆ ನೀಂ ಕೊಂಡೆಯೆನಿತದರಿಂದ |
ಗಣಿತವದೆ ನಿನ್ನ ಯೋಗ್ಯತೆಗೆ ನೆನೆದದನು ||
ಉಣು ಬೆಮರಿ, ನಗು ನೊಂದು, ನಡೆ ಕುಂಟುತಲುಮೆಂದು |
ಹಣೆಯ ಬರಹವೊ ನಿನಗೆ - ಮರುಳ ಮುನಿಯ || (೫೦೯)

(ಜಗಕೆ+ಇತ್ತೆ)(ಕೊಂಡೆ+ಎನಿತು+ಅದರಿಂದ)(ಗಣಿತವು+ಅದೆ)(ನೆನೆದು+ಅದನು)(ಕುಂಟುತಲುಂ+ಎಂದು)

ನೀನು ಈ ಜಗತ್ತಿಗೆ ಎಷ್ಟು ಕೊಟ್ಟೆ ಮತ್ತು ಅದರಿಂದ ಎಷ್ಟು ತೆಗೆದುಕೊಂಡೆ. ನಿನ್ನ ಅರ್ಹತೆ ಮತ್ತು ಸಾಮರ್ಥ್ಯಗಳಿಗೆ ಇವುಗಳೇ ಮಾಪನಗಳು. ಇವುಗಳನ್ನು ನೆನಪಿನಲ್ಲಿಟ್ಟುಕೊಂಡು, ಬೆವರನ್ನು ಸುರಿಸು ದುಡಿದು ಅದರ ಫಲವನ್ನು ಮಾತ್ರ ಸೇವಿಸು. ನೊಂದು ನಂತರ ಸಂತೋಷಿಸು. ಕುಂಟನಂತೆ ಓಡಾಡು. ಇವುಗಳೆಲ್ಲವೂ ನಿನ್ನ ವಿಧಿಯಲ್ಲಿ ಬರೆದಂತೆ ಆಗುತ್ತಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

How much you have given to the world and how much you have taken from there
Reflect over this and calculate your real worth
Always sweat and eat, suffer and smile, limp and walk
This is the un-erasable inscription on your forehead – Marula Muniya
(Translation from "Thus Sang Marula Muniya" by Sri. Narasimha Bhat)

Monday, October 7, 2013

ಮೇಳೈಸುವವೆಲ್ಲ ವೈರ ಬ್ರಹ್ಮಾಬ್ಧಿಯಲಿ (508)

ಮೇಳೈಸುವವೆಲ್ಲ ವೈರ ಬ್ರಹ್ಮಾಬ್ಧಿಯಲಿ |
ಸಾಳೀಕ ಸತ್ಯ ಜೀವಿತ ಮೃತ್ಯುವೆರಡುಂ ||
ಕಾಲೋಚಿತ ವ್ಯಕ್ತ ಲೀನರಾಗುವರೆಲ್ಲ |
ಲೀಲೆಯೆನಲಿನ್ನೇನು - ಮರುಳ ಮುನಿಯ || (೫೦೮)

(ಮೇಳೈಸುವವು+ಎಲ್ಲ)(ಬ್ರಹ್ಮ+ಅಬ್ಧಿಯಲಿ)(ಮೃತ್ಯು+ಎರಡುಂ)(ಕಾಲ+ಉಚಿತ)(ಲೀನರಾಗುವರು+ಎಲ್ಲ)(ಲೀಲೆ+ಎನಲ್+ಇನ್ನು+ಏನು)

ಬ್ರಹ್ಮಾಂಡವೆಂಬ ಸಾಗರ(ಅಬ್ಧಿ)ದಲ್ಲಿ ಎಲ್ಲರೂ ಸೇರಿಕೊಂಡು ಹೋಗುತ್ತವೆ. ಸುಳ್ಳು (ಸಾಳೀಕ), ನಿಜ, ಜೀವನವನ್ನು ನಡೆಸುವುದು ಮತ್ತು ಸಾವು ಇವೆರಡೂ ಸಮಯ ಸಂದರ್ಭಗಳಿಗನುಸಾರವಾಗಿ ಕಾಣಿಸಿಕೊಳ್ಳುತ್ತವೆ ಮತ್ತು ಬೆರೆತುಹೋಗುತ್ತವೆ. ವಿನೋದವಾದ ಆಟವೆಂದರೆ ಇದೇ ತಾನೇ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

All contradictions mingle and become one in the ocean of Brahma
Falsehood and truth, life and death, all dualities
All appear and disappear in the due time
What else is play if this is not? – Marula Muniya
(Translation from "Thus Sang Marula Muniya" by Sri. Narasimha Bhat)

Tuesday, October 1, 2013

ಜನಿಯೆಂದು ಮೃತಿಯೆಂದು ರತಿಯೆಂದು ವ್ರತವೆಂದು (507)

ಜನಿಯೆಂದು ಮೃತಿಯೆಂದು ರತಿಯೆಂದು ವ್ರತವೆಂದು |
ದಿನದಿನಕದೊಂದೊಂದು ಕಾರಣವನಿಟ್ಟು ||
ಋಣದಾನವಿಕ್ರಯದ ವ್ಯಾಪಾರ ವ್ಯವಹಾರ |
ಬಿನದವಿದು ದೇವಂಗೆ - ಮರುಳ ಮುನಿಯ || (೫೦೭)

(ದಿನದಿನಕೆ+ಅದು+ಒಂದೊಂದು)(ಕಾರಣವಂ+ಇಟ್ಟು)(ಬಿನದ+ಇದು)

ಹುಟ್ಟು (ಜನಿ), ಸಾವು, ಸಂಭೋಗ ಮತ್ತು ನಿಯಮಗಳೆಂಬ ದಿನ ದಿನಕ್ಕೆ ಒಂದೊಂದು ಕಾರಣವನ್ನಿಟ್ಟು, ಸಾಲ, ಕೊಡುಗೆ, ಮಾರಾಟ, ಇವುಗಳ ವ್ಯಾಪಾರ ವ್ಯವಹಾರಗಳನ್ನು ನಿರಂತರವಾಗಿ ಮಾಡುತ್ತಿರುವುದು, ಪರಮಾತ್ಮನಿಗೆ ವಿನೋದಕರವಾಗಿ ಕಾಣುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Every day you are busy with work or other
It may be somebody’s birth or somebody’s death, or some religious observance
It may be some transaction, borrowing or charity or trade
All these are pastime to God – Marula Muniya
(Translation from "Thus Sang Marula Muniya" by Sri. Narasimha Bhat)

Monday, September 30, 2013

ಆವುದೋ ಒಂದಿಹುದು ವಸ್ತುವೋ ಸತ್ತ್ವವೋ (506)

ಆವುದೋ ಒಂದಿಹುದು ವಸ್ತುವೋ ಸತ್ತ್ವವೋ |
ಭಾವ ಮಹಿಮೆಯೊ ಗುಣಮೊ ತೇಜವೋ ಏನೋ ||
ಕಾವುದೆಲ್ಲವನು ತಾಂ ತೀವಿ ಮರೆಯಾಗಿಹುದು |
ದೈವವೆಂದದನು ಕರೆ - ಮರುಳ ಮುನಿಯ || (೫೦೬)

(ಕಾವುದು+ಎಲ್ಲವನು)(ಮರೆ+ಆಗಿ+ಇಹುದು)(ದೈವ+ಎಂದು+ಅದನು)

ಯಾವುದೋ ಒಂದು ಇದೆ. ಅದು ಒಂದು ಪದಾರ್ಥವಾಗಿರಬಹುದು, ಶಕ್ತಿಯಾಗಿರಬಹುದು, ಭಾವನೆಯಾಗಿರಬಹುದು, ಮಹಿಮೆಯಾಗಿರಬಹುದು, ಸ್ವಭಾವಗಳಿರಬಹುದು, ಹೊಳೆಯುವ ಕಾಂತಿಯಿರಬಹುದು ಅಥವಾ ಇನ್ನೇನಾದರೂ ಆಗಿರಬಹುದು. ಅದು ಎಲ್ಲವನ್ನೂ ಕಾಪಾಡುತ್ತಿದೆ. ಆದರೆ ತಾನು ಮಾತ್ರ ಎಲ್ಲೆಲ್ಲಿಯೂ ತುಂಬಿ, ಹರಡಿಕೊಂಡು ಬಚ್ಚಿಟ್ಟುಕೊಂಡಿದೆ. ಅದನ್ನೇ ದೇವರೆಂದು ಸಂಬೋಧಿಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Something exists, some entity, some power
It may be a great emotion, a great source of virtues, a great radiance
It protects everything, It fills every place but It remains unseen
You may call It God – Marula Muniya
(Translation from "Thus Sang Marula Muniya" by Sri. Narasimha Bhat)

Friday, September 27, 2013

ಇಷ್ಟಗಳನೊಡೆಯುವುದು ಕಷ್ಟಗಳ ನೀಡುವುದು (505)

ಇಷ್ಟಗಳನೊಡೆಯುವುದು ಕಷ್ಟಗಳ ನೀಡುವುದು |
ದುಷ್ಟಸಾಸದೆ ಶಿಷ್ಟತನವ ಪರಿಕಿಪುದು ||
ಎಷ್ಟ ನೀಂ ಸೈಸಲಹುದೆನ್ನುವುದು ವಿಧಿರಾಯ |
ಶಿಷ್ಟ ಶೋಧಕನವನು - ಮರುಳ ಮುನಿಯ || (೫೦೫)

(ಇಷ್ಟಗಳನ್+ಒಡೆಯುವುದು)(ಸೈಸಲ್+ಅಹುದು+ಎನ್ನುವುದು)(ಶೋಧಕನು+ಅವನು)

ನಿನಿಗಿಷ್ಟವಾಗಿರುವ ವಸ್ತುಗಳನ್ನು ಪುಡಿಪುಡಿ ಮಾಡಿ ನಾಶ ಮಾಡುವುದು. ನಿನಗೆ ಸಾಕಷ್ಟು ಕಷ್ಟಗಳನ್ನು ಕೊಡುವುದು. ದುಷ್ಟ ಸಾಹಸ(ಸಾಸ)ಗಳಿಂದ ನಿನ್ನ ಒಳ್ಳೆಯತನವನ್ನು ಪರೀಕ್ಷೆಗೊಳಪಡಿಸುವುದು. ಇವುಗಳನ್ನೆಲ್ಲಾ ನೀನು ಎಷ್ಟರಮಟ್ಟಿಗೆ ಸಹಿಸುವೆಯೆಂದು ವಿಧಿರಾಯನು ಕೇಳುತ್ತಾನೆ. ಪ್ರಪಂಚದಲ್ಲಿರುವ ಸಜ್ಜನ(ಶಿಷ್ಟ)ರನ್ನು ಹುಡುಕುವುದಕ್ಕೆಂದು ಅವನು ಮಾಡುವ ಕಾರ್ಯಗಳಿವು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

He shatters your fond dreams and subjects you to many sufferings
With many wicked ventures He tests your goodness
“Let me see how much you can patiently endure”, remarks Lord Fate
He explores the intrinsic good in you – Marula Muniya (505)
(Translation from "Thus Sang Marula Muniya" by Sri. Narasimha Bhat)

Thursday, September 26, 2013

ಬದುಕೆಂಬ ಹೆಸರಿನಲಿ ನೀಂ ಜಗವ ಜಗ ನಿನ್ನ (504)

ಬದುಕೆಂಬ ಹೆಸರಿನಲಿ ನೀಂ ಜಗವ ಜಗ ನಿನ್ನ |
ಕುದಿಸುತ್ತ ಕೆದಕುತ್ತ ಕುಲುಕುತಿರುವಂದು ||
ಬದಲಾಗದೆಂತು ನೀಮಿರ‍್ಪುದೀ ನಿಮ್ಮಾಟ |
ವಿಧಿಯ ನಿತ್ಯವಿಲಾಸ - ಮರುಳ ಮುನಿಯ || (೫೦೪)

(ಕುಲುಕುತಿರುವ+ಅಂದು)(ಬದಲಾಗದು+ಎಂತು)(ನೀಂ+ಇರ‍್ಪುದು+ಈ)

ಜೀವನವೆನ್ನುವ ಹೆಸರಿನಲ್ಲಿ ಪ್ರಪಂಚವು ನಿನ್ನನ್ನು ಮತ್ತು ನೀನು ಪ್ರಪಂಚವನ್ನು ಕುದಿಸುತ್ತ ಕೆದಕುತ್ತ ಮತ್ತು ಅಲುಗಾಡಿಸುತ್ತಿರುವಾಗ, ನಿಮ್ಮಿಬ್ಬರ ಈ ಆಟವು ಬದಲಾಗದಿರಲು ಹೇಗೆ ಸಾಧ್ಯ? ಇದು ವಿಧಿಯ ಪ್ರತಿದಿನದ ಕ್ರೀಡೆ ಮತ್ತು ವಿಹಾರ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Living in this world, you and the world interact with each other
You boil, dig and shake each other ceaselessly
How then can you remain unchanged? All your interplay
Is really the regular play of Destiny – Marula Muniya
(Translation from "Thus Sang Marula Muniya" by Sri. Narasimha Bhat)

Wednesday, September 25, 2013

ಲ್ಯುಕ್ರೀಷಿಯಸ್ಸಿನಾ ಪ್ರಕೃತಿಪ್ರಲಯವಾದ (503)

ಲ್ಯುಕ್ರೀಷಿಯಸ್ಸಿನಾ ಪ್ರಕೃತಿಪ್ರಲಯವಾದ |
ನ್ಯಕ್ಕೃತಾಕ್ಷಿಯವಾದ ವಿಸ್ಮೃತಾತ್ಮನದು ||
ಸ್ವೀಕೃತಾಮರ್ತ್ಯಾತ್ಮಪಾರಮ್ಯ ದೃಗ್ವಾದ |
ಸಾಕ್ರೆಟೀಸನವಾದ - ಮರುಳ ಮುನಿಯ || (೫೦3)

(ವಿಸ್ಮೃತ+ಆತ್ಮನದು)(ಸ್ವೀಕೃತ+ಅಮರ್ತ್ಯ+ಅತ್ಮ)

ಲ್ಯುಕ್ರೀಷಿಯಸ್ ಎಂಬಾತನು ಸುಮಾರು ಕ್ರಿ.ಪೂ. ೯೬-೫೫ರಲ್ಲಿ ಇದ್ದ ಲ್ಯಾಟಿನ ಕವಿ. ಎಪಿಕ್ಯೂರಸ್ ತತ್ತ್ವಜ್ಞನ ಪಂಥಕ್ಕೆ ಸೇರಿದವನು. ಆ ಪಂಥದ ವಿಚಾರಧಾರೆಯನ್ನು ತಿಳಿಸುವುದು ಇವನ De Return Natura ವಸ್ತು ಸ್ವಭಾವ ಅಥವಾ ಜಗತ್ಸ್ವಭಾವ ಎಂಬ ಪದ್ಯ ಕಾವ್ಯ.

"ಈ ಜಗತ್ತು ಕೇವಲ ಪರಮಾಣುಗಳ ಸಂಯೋಗ-ವಿಯೋಗಾದಿ ನಾನಾ ವಿಕಾರ ಪರಿಣಾಮಗಳಿಂದ ಉಂಟಾದದ್ದು. ಇದಕ್ಕೆ ಬೇರೆ ನಿಯಾಮಕನು ಯಾರೂ ಇರುವಂತಿಲ್ಲ. ಮನುಷ್ಯನು ಸಾಧಿಸಬಹುದಾದದ್ದು ಬಹು ಸ್ವಲ್ಪ. ಅವನ ಬುದ್ಧಿವಂತಿಕೆಯೇನಿದ್ದರೂ ಬಂದದ್ದನ್ನು ಸಹಿಸಿಕೊಂಡು ಶಾಂತಚಿತ್ತನಾಗಿರುವುದರಲ್ಲಿ. ಭೋಗವನ್ನು ಜೀವನದ ಪರಮಾರ್ಥವನ್ನಾಗಿ ಮಾಡಿಕೊಳ್ಳತಕ್ಕದ್ದಲ್ಲ. ನಾವು ಹುಡುಕಬೇಕಾದದ್ದು ಭೋಗವನ್ನಲ್ಲ; ಸಮಾಧಾನವನ್ನು. ಇದಕ್ಕಾಗಿ ಅತ್ಯಾಶೆಗಳನ್ನು ಅದುಮಬೇಕು. ರಾಗಾವೇಶಗಳನ್ನು ತಡೆಯಬೇಕು. ಕ್ಷುದ್ರದೈವಗಳ ಭೀತಿಯನ್ನು ನೀಗಬೇಕು. ಇಂದ್ರಿಯ ಸಂಯಮ, ಲಬ್ಧ ಸಂತೃಪ್ತಿ, ವಿರಕ್ತಭಾವ ಇದರಿಂದಲೇ ನಿಜವಾದ ಸುಖ"- ಇದು ಲ್ಯುಕ್ರೀಷಿಯಸ್‍ನ ಬೋಧೆ.

ನ್ಯಕ್ಕೃತಾಕ್ಷಿಯವಾದ: ನೃಕ್ಕೃತ ಕೆಳಗೆ (ಪಾದದಲ್ಲಿ) ಇರುವ ಕಣ್ಣು ಯಾರಿಗೋ ಅವನು ನ್ಯಕ್ಕೃತಾಕ್ಷಿ. ಅಕ್ಷಪಾದನೆಂಬ ಅಭಿಪ್ರಾಯ. ಈತನು ನ್ಯಾಯಶಾಸ್ತ್ರವನ್ನು ರಚಿಸಿದ ಗೌತಮಮಹರ್ಷಿ. ಲ್ಯುಕ್ರೀಷಿಯಸ್‍ನ ಸಿದ್ಧಾಂತದಂತೆ ನ್ಯಾಯಶಾಸ್ತ್ರವು ಪರಮಾಣುವಾದವನ್ನು ಮುಂದಿಡುತ್ತದೆ. ಆದರೆ ಜೀವಾತ್ಮ ಪರಮಾತ್ಮರನ್ನು ನ್ಯಾಯಶಾಸ್ತ್ರ ಅಂಗೀಕರಿಸುತ್ತದೆ. ಈ ಆಸ್ತೀತ್ವವನ್ನು ತೆಗೆದು ಹಾಕಿದರೆ ಅದು ಲ್ಯುಕ್ರೀಷಿಯಸ್‍ನ ವಾದವೇ ಆಗುತ್ತದೆ. ಸಾಕ್ರೆಟಿಸ್ ಎಂಬ ಗ್ರೀಕ ತತ್ತ್ವಜ್ಞಾನಿ ಅಮರನಾದ ಆತ್ಮನನ್ನು ಅಂಗೀಕರಿಸುತ್ತಾನೆ.

ಲ್ಯುಕ್ರೀಷಿಯಸ್‍ನ, ಪ್ರಕೃತಿ ಪ್ರಲಯಗಳು ಮಾತ್ರ ನಿಜ, ಪ್ರಪಂಚವೆಲ್ಲವೂ ಪರಮಾಣುಗಳ ಸಂಯೋಗ ಮತ್ತು ವಿಯೋಗದಿಂದಾದ್ದು, ಇದಕ್ಕೆ ಬೇರೆ ಯಾವ ನಿಯಾಮಕನೂ ಇರುವಂತಿಲ್ಲವೆನ್ನುವ ಒಂದು ಚರ್ಚೆ. ಪರಮಾಣುವಾದವನ್ನು ಮುಂದಿಟ್ಟರೂ ಜೀವಾತ್ಮ ಮತ್ತು ಪರಮಾತ್ಮನನ್ನು ಅಂಗೀಕರಿಸುವ ನ್ಯಾಯಶಾಸ್ತ್ರವನ್ನು ರಚಿಸಿದ ಗೌತಮ ಮಹರ್ಷಿಯ ವಾದ ಇನ್ನೊಂದು. ಅಮರನಾದ ಆತ್ಮವನ್ನು ಅಂಗೀಕರಿಸುವ ಸಾಕ್ರೆಟಿಸನ ಮತ್ತೊಂದು ತರ್ಕ. ಸೃಷ್ಟಿಯ ಮತ್ತು ಪ್ರಪಂಚದ ಬಗ್ಗೆ ಈ ಮೂರು ವಿಧವಾದ ಅಭಿಪ್ರಾಯಗಳಿವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Automatic creation and dissolution by atoms was the philosophy of Lucretiues
Nyakrutakshi advocated the existence of soul forgotten by Lucretiues
Immortality and supremacy of the soul
Was the philosophy of Socrates – Marula Muniya
(Translation from "Thus Sang Marula Muniya" by Sri. Narasimha Bhat)

Friday, September 20, 2013

ನರಲೋಕವೇನಸುರವೆನಿಪ ಜಗದಿಂ ಘೋರ (502)

ನರಲೋಕವೇನಸುರವೆನಿಪ ಜಗದಿಂ ಘೋರ |
ಮರಣವೇಂ ಜನದಿಂದ ಜನಕೆ ಉಪಕಾರ ||
ಪರಮಾತ್ಮಚಿಂತೆಯೆತ್ತಲಾತ್ಮಸಂಯಮವೆತ್ತ |
ನರಕಮಾರ್ಗಿಯೊ ಲೋಕ - ಮರುಳ ಮುನಿಯ || (೫೦೨)

(ನರಲೋಕವೇನ್+ಅಸುರ+ಎನಿಪ)(ಪರಮಾತ್ಮಚಿಂತೆ+ಎತ್ತಲ್+ಆತ್ಮಸಂಯಮ+ಎತ್ತ)

ಮನುಷ್ಯನು ವಾಸಿಸುವ ಈ ಪ್ರಪಂಚವು ರಾಕ್ಷಸರ ಜಗತ್ತಿಗಿಂತಲೂ ಭಯಂಕರವಾದದು. ಸಾವೆನ್ನುವುದು ಒಬ್ಬರಿಂದ ಇನ್ನೊಬ್ಬರಿಗೆ ಯೋಗ್ಯವಾಗಿ ಸಂದ ಸಹಾಯ. ಪರಮಾತ್ಮನ ಬಗ್ಗೆ ಚಿಂತಿಸುವಾಗ ಆತ್ಮ ಸಂಯಮವು ಎಲ್ಲಿ ಹೋಗುತ್ತದೆ? ಪ್ರಪಂಚವು ನರಕಕ್ಕೆ ದಾರಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

This world of human beings seems to be more terrible than the world of demons
Death seems to be more helpful to mankind than birth
Where’s the thought of God and where’s the idea of self-control?
This world is moving hellward – Marula Muniya
(Translation from "Thus Sang Marula Muniya" by Sri. Narasimha Bhat)

Thursday, September 19, 2013

ಶರಣು ಶರಣಿರುವುದಕೆ ಸತ್ಯಕ್ಕೆ ತತ್ತ್ವಕ್ಕೆ (501)

ಶರಣು ಶರಣಿರುವುದಕೆ ಸತ್ಯಕ್ಕೆ ತತ್ತ್ವಕ್ಕೆ |
ಹರಡಿಹುದದೆತ್ತಲೆತ್ತಲುಮೆಂದದೆಂದೂ ||
ಇರದುದರ ಮಾತೇಕೆ ಸುಳ್ಳು ಶೂನ್ಯಕೆ ಬುರುಡೆ |
ಇರುವುದೇ ಮೊದಲಿಳಿಗೆ - ಮರುಳ ಮುನಿಯ || (೫೦೧)

(ಶರಣು+ಇರುವುದಕೆ)(ಹರಡಿಹುದು+ಅದು+ಎತ್ತಲೆತ್ತಲುಂ+ಎಂದು+ಅದು+ಎಂದೂ)(ಮೊದಲು+ಇಳಿಗೆ)

ಸತ್ಯದ ಅಸ್ತಿತ್ವಕ್ಕೆ ತತ್ತ್ವದ ಸ್ವರೂಪಕ್ಕೆ ನಮಿಸುತ್ತಿದ್ದೇನೆ. ಅದು ಸದಾ ಕಾಲವೂ ಎಲ್ಲೆಲ್ಲಿಯೂ ವ್ಯಾಪಿಸಿಕೊಂಡಿದೆ. ಇಲ್ಲದಿರುವುದರ ಬಗ್ಗೆ ಮಾತನಾಡಿ ಏನು ಉಪಯೋಗ? ಸುಳ್ಳೆನ್ನುವುದು ಶೂನ್ಯಕ್ಕೆ ಬುರುಡೆ. ಪ್ರಪಂಚದಲ್ಲಿ ಮೊದಲು ಇರುವುದೇ ಅದೇ ಒಂದು ಸದ್ವಸ್ತು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Surrender to the Truth, the Divine Reality worthy of surrender
It pervades every place and it exists in all times
Why talk about which exists not? It is untruth and a bulb of void
That which exists is of top priority on the earth – Marula Muniya
(Translation from "Thus Sang Marula Muniya" by Sri. Narasimha Bhat)

Wednesday, September 18, 2013

ಹುಲ್ಲು ಬಯಲೊಳು ನೀನು ಹೂವುಗಳ ಹುಡುಕುತ್ತ (500)

ಹುಲ್ಲು ಬಯಲೊಳು ನೀನು ಹೂವುಗಳ ಹುಡುಕುತ್ತ |
ಕಲ್ಲುಗಳ ನಡುವೆ ನೀಂ ರನ್ನಗಳನರಸುತ್ತ ||
ತಲ್ಲಣದ ನಡುವೆ ನೀಂ ತಾಳ್ಮೆದಾಳುತ್ತ |
ಬೆಲ್ಲವಿರು ಕಹಿಗಳೊಳು - ಮರುಳ ಮುನಿಯ || (೫೦೦)

(ರನ್ನಗಳನು+ಅರಸುತ್ತ)(ಕಹಿಗಯ+ಒಳು)

ಹುಲ್ಲುಗಾವಲಿನಲ್ಲಿ ಹೂವುಗಳನ್ನು ಅರಸುತ್ತಾ, ಕಲ್ಲುಗಳ ಮಧ್ಯದಲ್ಲಿ ರತ್ನ(ರನ್ನ)ಗಳನ್ನು ಹುಡುಕುತ್ತಾ, ಹೆದರಿಕೆ ಮತ್ತು ತಳಮಳಗಳ ಮಧ್ಯೆ ಸಹನೆಯನ್ನು ತಂದುಕೊಳ್ಳುತ್ತಾ ಜೀವನದ ಕಹಿಗಳಲ್ಲಿ ಸಿಹಿಯಾದ ಬೆಲ್ಲದಂತಿರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Searching flowers in grassland
Seeking gems in the large mass of stones
Remaining patient in the midst of anxieties,
Remain sweet in the midst of bitterness – Marula Muniya
(Translation from "Thus Sang Marula Muniya" by Sri. Narasimha Bhat)

Tuesday, September 17, 2013

ನೀರು ಮೂರ್ ಬಾನಿಂದ ಮಳೆ ನೆಲದಿನೂಟೆ ಇವು (499)

ನೀರು ಮೂರ್ ಬಾನಿಂದ ಮಳೆ ನೆಲದಿನೂಟೆ ಇವು |
ಸೇರಿ ಕೆರೆ ಹಳೆಯುಳಿಕೆ ಊರಿಗುಪಯೋಗ ||
ಮೂರುಣಿಸು ನಿನಗಂ ನಿಜಾರ್ಜಿತಂ ಸೃಷ್ಟ್ಯಂಶ |
ಪ್ರಾರಬ್ಧವೀ ತ್ರಿತಯ - ಮರುಳ ಮುನಿಯ ||(೪೯೯)

(ಬಾನ್+ಇಂದ)(ನೆಲದಿಂ+ಊಟೆ)(ಊರಿಗೆ+ಉಪಯೋಗ)(ಮೂರ್+ಉಣಿಸು)(ನಿಜ+ಆರ್ಜಿತಂ)(ಸೃಷ್ಟಿ+ಅಂಶ)

ಪ್ರಪಂಚದಲ್ಲಿ ನೀರು ನಮಗೆ ಮುರು ವಿಧಗಳಲ್ಲಿ ಸಿಗುತ್ತದೆ. ಆಕಾಶದಿಂದ ಬರುವ ಮಳೆಯಿಂದ ಮತ್ತು ಭೂಮಿಯಲ್ಲಿ ಉಕ್ಕುವ ಚಿಲುಮೆಯಿಂದ. ಹಾಗೆಯೇ ಇವುಗಳು ಸೇರಿ ಒಂದು ಕೆರೆಯಾಗಿ ಹಳೆಯ ನೀರನ್ನು ಕೂಡಿಕೊಂಡು ಊರಿನ ಉಪಯೋಗಕ್ಕಾಗುತ್ತದೆ. ನಿನಗೂ ಸಹ ಇದೇ ರೀತಿ ಮೂರು ವಿಧವಾದ ಊಟಗಳಿವೆ. ನೀನು ಸ್ವತಃ ಸಂಪಾದಿಸಿದ ಐಶ್ವರ್ಯ, ನಿಶ್ಚಿತವಾಗಿರುವ ಪಾಲುಗಳು ಮತ್ತು ವಿಧಿ ನಿನಗೆ ಕೊಡುವ ಉಡುಗೊರೆಗಳು. ಅದೃಷ್ಟವು ಈ ಮೂರು ಬಗೆಗಳಲ್ಲಿ ಬರುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Sources of water to the people are three
The rain, the bubbling spring and the stored water in tanks and wells
Your past karma, your present earnings and the gifts of nature
These three meals you eat – Marula Muniya
(Translation from "Thus Sang Marula Muniya" by Sri. Narasimha Bhat)

Thursday, September 12, 2013

ಅನ್ನ ಕೋಶಕ್ಕೆ ನೆರೆ ಮಲಕೋಶ ದೇಹದಲಿ (498)

ಅನ್ನ ಕೋಶಕ್ಕೆ ನೆರೆ ಮಲಕೋಶ ದೇಹದಲಿ |
ಪುಣ್ಯಗಂಧಕೆ ಪಾಪಗಂಧ ನೆರೆ ಮನದಿ ||
ಮಣ್ಣುಮುಂಡುಗೋಲ ಪುಡಿಯುಂ ಬೆರೆತು ನರರಚನೆ |
ನಿನ್ನೆಚ್ಚರದೆ ಶುದ್ಧಿ - ಮರುಳ ಮುನಿಯ ||(೪೯೮)

(ಮಣ್ಣು+ಉಂಡುಗೋಲ)(ನಿನ್ನ+ಎಚ್ಚರದೆ)

ಮನುಷ್ಯನ ದೇಹದಲ್ಲಿ ಅನ್ನ ಇರುವ ಸಂಚಿ(ಕೋಶ)ಯ ಪಕ್ಕದಲ್ಲೇ ಮಲವಿರುವ ಸಂಚಿಯೂ ಇದೆ. ಮನುಷ್ಯನ ಮನಸ್ಸಿನಲ್ಲಿ ಪುಣ್ಯದ ಸುಗಂಧದ ಪಕ್ಕದಲ್ಲಿಯೇ ಪಾಪದ ದುರ್ನಾತವೂ ಹೊಡೆಯುತ್ತಿದೆ. ಮಣ್ಣು ಮತ್ತು ಆಕಾಶದಲ್ಲಿರುವ ನಕ್ಷತ್ರಲೋಕದ(ಉಡುಗೋಲ) ಪುಡಿಗಳೂ ಕೂಡಿಕೊಂಡು ಮನುಷ್ಯನ ದೇಹದ ರಚನೆಯಾಗಿದೆ. ನೀನು ನಿನ್ನ ಜಾಗ್ರತೆಯಲ್ಲಿದ್ದರೆ ಮಾತ್ರ ಚೊಕ್ಕಟವಾಗಿರಲು ಸಾಧ್ಯ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The sack of excreta lies close to stomach in human body
The stink of sins is adjacent to the scent of virtues in the mind
Human body is formed with the dust of earth and dust of stars
You can remain pure only if you are vigilant – Marula Muniya
(Translation from "Thus Sang Marula Muniya" by Sri. Narasimha Bhat)

Wednesday, September 11, 2013

ಮರ್ತ್ಯಾಂಗರೂಪದೊಳಮರ್ತ್ಯಾಂಶದವತಾರ (497)

ಮರ್ತ್ಯಾಂಗರೂಪದೊಳಮರ್ತ್ಯಾಂಶದವತಾರ |
ದೈತ್ಯ ವಾಸನೆಗಳೊಡನಮರ ಸುಮಸುರಭಿ ||
ವ್ಯತ್ಯಯಾಭಾಸಂಗಳುದರದೊಳು ಪರಸತ್ಯ |
ಮಿಥ್ಯೆ ಸತ್ಯದ ಹೊದಕೆ - ಮರುಳ ಮುನಿಯ || (೪೯೭)

(ಮರ್ತ್ಯ+ಅಂಗರೂಪದೊಳ್+ಅಮರ್ತ್ಯಾಂಶದ+ಅವತಾರ)(ವಾಸನೆಗಳೊಡನೆ+ಅಮರ)(ವ್ಯತ್ಯಯಾಭಾಸಂಗಳ+ಉದರದೊಳು)

ಒಂದು ದಿನ ಮರಣಿಸುವ ಮನುಷ್ಯನ ಆಕಾರದೊಳಗೆ ಮರಣವಿಲ್ಲದಿರುವ ದೇವ(ಅಮರ್ತ್ಯ)ತ್ವದ ಅಂಶಗಳು ಇಳಿದುಬಂದಿದೆ. ರಾಕ್ಷಸ(ದೈತ್ಯ) ವಾಸನೆಗಳ ಜೊತೆ, ಪಾರಿಜಾತ(ಅಮರಸುಮ)ದ ಸುವಾಸನೆಗಳಿವೆ. ಈ ರೀತಿಯ ವಿರೋಧಾಭಾಸಗಳ (ವ್ಯತ್ಯಯಾಭಾಸಂಗಳ) ಹೊಟ್ಟೆ(ಉದರ)ಯಲ್ಲಿ ಶ್ರೇಷ್ಠವಾದ ಪರಮ ಸತ್ಯವನ್ನು ನಾವು ಕಾಣುತ್ತೇವೆ. ಏಕೆಂದರೆ ಸತ್ಯಕ್ಕೆ ಸುಳ್ಳಿ(ಮಿಥ್ಯೆ)ನ ಹೊದಿಕೆ ಇದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Immortal soul incarnates in the mortal human body
The scent of Heavenly flower with demonic stench
Divine Truth in the bosom of apparent contradictions
The Real is behind the mask of the unreal – Marula Muniya
(Translation from "Thus Sang Marula Muniya" by Sri. Narasimha Bhat)

Tuesday, September 10, 2013

ಗುಡಿಯ ಕಟ್ಟುವನಿತ್ತು ಭಕ್ತಿಯಿರದೊಡೆ ಬೇಡ (496)

ಗುಡಿಯ ಕಟ್ಟುವನಿತ್ತು ಭಕ್ತಿಯಿರದೊಡೆ ಬೇಡ |
ಗುಡಿಯನೊಡೆಯುವನಿತ್ತು ಸತ್ಯಾಸ್ಥೆಯಿಹುದೇಂ? ||
ದೃಢ ನಿಶ್ಚಯವನರಸದಿರ್ಪುದಾಸೀನತೆಯ- |
ನುಡುಗಿ ನಶಿಸುವುದಾತ್ಮ - ಮರುಳ ಮುನಿಯ || (೪೯೬)

(ಕಟ್ಟುವ+ಅನಿತ್ತು)(ಭಕ್ತಿಯಿರದ+ಒಡೆ)(ಗುಡಿಯನ್+ಒಡೆಯುವ+ಅನಿತ್ತು)(ಸತ್ಯ+ಆಸ್ಥೆ+ಇಹುದೇಂ)(ನಿಶ್ಚಯವನ್+ಅರಸದೆ+ಇರ್ಪ+ಉದಾಸೀನತೆಯನ್+ಉಡುಗಿ)(ನಶಿಸುವುದು+ಆತ್ಮ)

ದೇವಸ್ಥಾನವನ್ನು ಕಟ್ಟುವಷ್ಟಾದರೂ ದೈವಭಕ್ತಿ ಇರದಿದ್ದರೆ ಬೇಡ, ಆ ದೇವಸ್ಥಾನವನ್ನು ಒಡೆಯುವುದರಲ್ಲಾದರೂ ತಾನು ಮಾಡುತ್ತಿರುವುದು ಸರಿಯಾದ ಕೆಲಸವೆಂಬ ನಂಬಿಕೆ ಇದೆಯೊ? ಅದೂ ಇಲ್ಲ, ಇದೂ ಇಲ್ಲ. ಒಂದು ಗಟ್ಟಿಯಾದ ನಿರ್ಣಯವನ್ನು ಹುಡುಕಿಕೊಳ್ಳದಿರುವ ಆಲಕ್ಷ್ಯತೆಯಿಂದ ಆತ್ಮವು ತಗ್ಗಿ ಸಂಪೂರ್ಣವಾಗಿ ನಾಶವಾಗಿ ಹೋಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Leave if you do not have the devotion to build a shrine
Do you have real interest to demolish it?
The self withers and dies due to half-heartedness
In the absence of the resolute will – Marula Muniya
(Translation from "Thus Sang Marula Muniya" by Sri. Narasimha Bhat)

Friday, September 6, 2013

ಲೋಕವನು ತಿದ್ದಲಿಕೆ ಹೊರಟು ಗೆದ್ದವರಾರು? (495)

ಲೋಕವನು ತಿದ್ದಲಿಕೆ ಹೊರಟು ಗೆದ್ದವರಾರು? |
ಕಾಕುತ್ಸ್ಠನೇ ಕೃಷ್ಣನೇ ಬುದ್ಧ ಜಿನರೆ ||
ಸಾಕ್ರಟೀಸ್ ಏಸರೇ ಮೋಸಸ್ ಮಹಮ್ಮದರೆ |
ಸ್ವೀಕರಿಸಿತಾರನದು - ಮರುಳ ಮುನಿಯ || (೪೯೫)

(ಗೆದ್ದವರು+ಆರು)(ಸ್ವೀಕರಿಸಿತು+ಆರನ್+ಅದು)

ಪ್ರಪಂಚದಲ್ಲಿ ಸೊಟ್ಟಾಗಿರುವುದನ್ನು ತಿದ್ದಿ ಅದನ್ನು ಒಂದು ಸುಂದರವಾದ ತಾಣವನ್ನಾಗಿ ಮಾದಲು ಪ್ರಯತ್ನಿಸಿ ಗೆದ್ದವರು ಯಾರಿದ್ದಾರೆ? ರಾಮನೇ (ಕಾಕುತ್ಸ್ಠ), ಕೃಷ್ಣನೇ?, ಗೌತಮ ಬುದ್ಧನೇ, ಜೈನ ಪಂಥದ ಮಹಾವೀರರೇ, ಗ್ರೀಕ್ ದೇಶದ ತತ್ತ್ವಜ್ಞಾನಿಯಾದ ಸಾಕ್ರಟೀಸ್‍ನೇ, ಕ್ರಿಸ್ತ ಧರ್ಮವನ್ನು ಸ್ಥಾಪಿಸಿದ ಏಸುಕ್ರಿಸ್ತ, ಯಹೂದಿಯರ ಮೋಸಸ್ ಅಥವಾ ಇಸ್ಲಾಂ ಧರ್ಮದ ಸಂಸ್ಥಾಪಕನಾದ ಪ್ರವಾದಿ ಮಹಮ್ಮದರೆ? ಇವರನ್ನಾರನ್ನಾದರೂ ಜಗತ್ತು ಒಪ್ಪಿಕೊಂಡಿತೇನು? ಅವರವರ ಕಾಲದಲ್ಲಿ ಅವರೆಲ್ಲರನ್ನೂ ಜಗತ್ತು ಅವಹೇಳನ ಮಾಡಿ ತಿರಸ್ಕರಿಸಿತ್ತು ಎಂಬುದನ್ನು ನಾವು ಮರೆಯಬಾರದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Has anyone ever succeeded in reforming this world?
Is it Rama or Krishna? Is it Buddha or Jina?
Is it Socrates or Jesus? Is it Moses or Mohammad?
Whom has the world accepted? – Marula Muniya
(Translation from "Thus Sang Marula Muniya" by Sri. Narasimha Bhat)

Thursday, September 5, 2013

ವಾನರನ ಲಾಂಗೂಲವೆರಡಾದೊಡದರಿನವ (494)

ವಾನರನ ಲಾಂಗೂಲವೆರಡಾದೊಡದರಿನವ - |
ನಾನನದ ಚೇಷ್ಟೆಯೇನರೆಯೊ ಇಮ್ಮಡಿಯೊ ||
ಮಾನವನೊಳಾತ್ಮ ಬಲಿಯದೆ ಬಾಹ್ಯವೈಭವಗ |
ಳೇನಾದೊಡೇಂ ಲಾಭ - ಮರುಳ ಮುನಿಯ || (೪೯೪)

(ಲಾಂಗೂಲ+ಎರಡು+ಆದೊಡೆ+ಅದರಿನ್+ಅವನ+ಆನನದ)(ಚೇಷ್ಟೆ+ಏನ್+ಅರೆಯೊ)(ಮಾನವನೊಳ್+ಆತ್ಮ)(ಬಾಹ್ಯವೈಭವಗಳ್+ಏನ್+ಆದೊಡೆ+ಏಂ)

ಕಪಿಯ ಬಾಲಗಳು (ಲಾಂಗೂಲ) ಎರಡಾದರೂ ಅದರಿಂದ ಅದರ ಮುಖದ (ಆನನದ) ಚೇಷ್ಟೆಗಳು ಅರ್ಧವಾಗುತ್ತದೆಯೋ ಅಥವಾ ಅದೂ ಎರಡರಷ್ಟಾಗುತ್ತದೆಯೋ? ಇದೇ ರೀತಿ ಮನುಷ್ಯನೊಳಗಡೆಯ ಆತ್ಮವು ಬಲಿಷ್ಠವಾಗದೆ ಹೊರಗಡೆಗೆ ಕಾಣಿಸುವಂತಹ ಆಡಂಬರಗಳು ಹೇಗಿದ್ದರೇನಂತೆ? ಅವುಗಳಿಂದ ಆತ್ಮಕ್ಕೆ ಯಾವ ವಿಧವಾದ ಲಾಭವೂ ಆಗುವುದಿಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

If a monkey is blessed with two tails instead of one
Dies his facial expressions become doubled or halved?
What’s the benefit from any outward exhibition of grandeur
Unless one is well established in self – Marula Muniya
(Translation from "Thus Sang Marula Muniya" by Sri. Narasimha Bhat)

Wednesday, September 4, 2013

ಸಂಗ ನಿಸ್ಸಂಗಾದಿ ನಿಯಮ ವ್ರತಾಚಾರ (493)

ಸಂಗ ನಿಸ್ಸಂಗಾದಿ ನಿಯಮ ವ್ರತಾಚಾರ |
ಅಂಗಾರ ತಿರುನಾಮ (ಕಾಷಾಯ) ಬೂದಿ ||
ಅಂಗಾಂಗ ಭಾವರಸ ಚಿಹ್ನೆ ಚೇಷ್ಟೆಗಳೆಲ್ಲ |
ಮಂಗಾಟವೀಶಂಗೆ - ಮರುಳ ಮುನಿಯ || (೪೯೩)

(ನಿಸ್ಸಂಗ+ಆದಿ)(ವ್ರತ+ಆಚಾರ)(ಚೇಷ್ಟೆಗಳ್+ಎಲ್ಲ)

ಆಸಕ್ತಿ ಮತ್ತು ಅನಾಸಕ್ತಿ, ಕಟ್ಟಳೆಗಳು, ವ್ರತ, ಆಚಾರಗಳನ್ನು ಪಾಲಿಸುವುದು, ಅಂಗಾರ, ತಿರುನಾಮ ಮತ್ತು ವಿಭೂತಿಗಳನ್ನು ಧರಿಸುವುದು; ಈ ತರಹದ ಶಾರೀರಿಕ ಭಾವನೆ, ಸತ್ತ್ವ ಪ್ರತೀಕಗಳು ಮತ್ತು ಆಟಗಳೆಲ್ಲವೂ ಕಪಿಚೇಷ್ಟೆಗಳಂತೆ ಶಿವನಿಗೆ ಭಾಸವಾಗುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Attachment and detachment, religious observances rites and rituals
Sacred marks of carbon, sandal and ash on body parts
Variety of body movements, signs and expressions of emotions
All these are just monkeyish pranks to the Lord – Marula Muniya
(Translation from "Thus Sang Marula Muniya" by Sri. Narasimha Bhat)

Friday, August 30, 2013

ಮೊಟ್ಟೆಗಳನಿಟ್ಟದನು ತಾನೆ ನುಂಗುವುದಹಿಯು (491)

ಮೊಟ್ಟೆಗಳನಿಟ್ಟದನು ತಾನೆ ನುಂಗುವುದಹಿಯು |
ಸೃಷ್ಟಿತಾಯಿಗಮುಣಿಸು ತಾಂಪೆತ್ತ ಮಗುವು ||
ಪೆಟ್ಟಿನಿಂ ಬೆನ್ಮುರಿವವೊಲು ನಿನ್ನ ಮೈದಡವಿ |
ತಟ್ಟಿಯುಂ ಸವೆಯಿಪಳು - ಮರುಳ ಮುನಿಯ || (೪೯೧)

(ಮೊಟ್ಟೆಗಳನಿಟ್ಟು+ಅದನು)(ನುಂಗುವುದು+ಅಹಿಯು)(ಸೃಷ್ಟಿತಾಯಿಗಂ+ಉಣಿಸು)(ಬೆನ್+ಮುರಿವವೊಲು)

ಹಿಂದೆ ಹೇಳಿದಂತೆ ಹಾವು ತನ್ನ ಮೊಟ್ಟೆಗಳನ್ನು ಒಂದು ಸಾಲಿನಲ್ಲಿಟ್ಟು ಪುನಃ ಅದೇ ಸಾಲಿನಲ್ಲಿ ಬರುತ್ತಾ ತಾನೇ ಇಟ್ಟ ಮೊಟ್ಟೆಗಳನ್ನು ನುಂಗಿಬಿಡುತ್ತದೆ. ಅಲ್ಲಲ್ಲಿ ಸರಿದುಹೋದ ಮೊಟ್ಟೆಗಳು ಮಾತ್ರ ಹಾವುಗಳಾಗುತ್ತವೆ. ಅದೇ ರೀತಿ ಸೃಷ್ಟಿಯ ತಾಯಿಗೆ ತಾನು ಹೆತ್ತ (ಪೆತ್ತ) ಶಿಶುವೇ ಆಹಾರವಾಗುತ್ತದೆ. ನಿನ್ನ ಬೆನ್ನು ಮುರಿಯುವಂತೆ ಏಟುಗಳನ್ನು ಹಾಕಿ ನಂತರ ನಿನ್ನ ಮೈಯನ್ನು ತಟ್ಟಿ, ನೇವರಿಸಿ, ನಿನ್ನನ್ನು ಸವೆಯಿಸುತ್ತಾಳೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The serpent swallows the very eggs it had laid
Likewise Her own children become food to Mother Nature
She pats your back to the breaking point
She rubs and rubs until you wear out – Marula Muniya
(Translation from "Thus Sang Marula Muniya" by Sri. Narasimha Bhat)

Thursday, August 29, 2013

ದೈವಪ್ರಸಾದವಾಕಸ್ಮಿಕದ ಬಾಗಿನವೆ? (490)

ದೈವಪ್ರಸಾದವಾಕಸ್ಮಿಕದ ಬಾಗಿನವೆ? |
ಧೀವಿಕಲನರುಳುಮರುಳಿನ ಕೈಯ ವರವೆ? ||
ಜೀವಕರಣಂಗಳೈಕಾಗ್ರ್ಯದ ತಪೋರೂಪ |
ಭಾವಕೃಷಿಗದು ಫಲಿತ - ಮರುಳ ಮುನಿಯ || (೪೯೦)

(ದೈವಪ್ರಸಾದವು+ಆಕಸ್ಮಿಕದ)(ಧೀವಿಕಲನ+ಅರುಳು)(ಜೀವ+ಕರಣಂಗಳ್+ಐಕಾಗ್ರ್ಯದ)

ಪರಮಾತ್ಮನ ಕೃಪೆಯನ್ನುವುದು ಅನಿರೀಕ್ಷಿತ(ಆಕಸ್ಮಿಕ)ವಾಗಿ ದೊರಕುವ ಉಡುಗುರೆ ಮತ್ತು ಕಾಣಿಕೆ(ಬಾಗಿನ)ಗಳೇನು? ಅಥವಾ ಬುದ್ಧಿಹೀನ(ಧೀವಿಕಲ)ನಾಗಿರುವವನು ಅರಳು ಮರುಳಿನ ಸಮಯದಲ್ಲಿ ಅನುಗ್ರಹಿಸಿದ ಪ್ರಸಾದವೋ? ಜೀವ ಮತ್ತು ಇಂದ್ರಿಯಗಳು ಒಂದೇ ಮನಸ್ಸು ಮತ್ತು ಗುರಿಯಿರುವ (ಏಕಾಗ್ರ್ಯ) ತಪಸ್ಸಿನ ಸ್ವರೂಪವಾಗಿವೆ. ಆಲೋಚನೆ ಮತ್ತು ಕೆಲಸಗಳಿಗೆ ಅವು ಫಲವನ್ನು ಕೊಡುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Is Divine grace an unexpected gift?
Is it a boon granted by a nitwit with a crippled mind?
It is the final fruit of the cultivation of emotions
Achieved through severe penance involving concentration of soul and senses – Marula Muniya
(Translation from "Thus Sang Marula Muniya" by Sri. Narasimha Bhat)

Monday, August 26, 2013

ಕಾಂತಿಗಳ ಬೀಸಿ ಸಂಭ್ರಾಂತಿಗಳನಾಗಿಸುತ (489)

ಕಾಂತಿಗಳ ಬೀಸಿ ಸಂಭ್ರಾಂತಿಗಳನಾಗಿಸುತ |
ಅಂತರಂಗದೆ ಶಾಂತಿಗಂತಕಳು ಮಾಯೆ ||
ಸ್ವಂತಲಾಭದ ಚಿಂತೆಯಿಲ್ಲದೆಡೆಯವಳಾಟ |
ಕಂತಿಮವೊ ನಿರ್ಮಾಯ - ಮರುಳ ಮುನಿಯ || (೪೮೯)

(ಸಂಭ್ರಾಂತಿಗಳನ್+ಆಗಿಸುತ)(ಶಾಂತಿಗೆ+ಅಂತಕಳು)(ಚಿಂತೆಯಿಲ್ಲದ+ಎಡೆ+ಅವಳ+ಆಟಕೆ+ಅಂತಿಮವೊ)

ವಿಧವಿಧವಾದ ಹೊಳಪು(ಕಾಂತಿ)ಗಳನ್ನು ತೋರಿಸಿ, ದಿಗ್ಭ್ರಮೆ(ಸಂಭ್ರಾಂತಿ)ಗಳನ್ನುಂಟು ಮಾಡುತ್ತಾ ಮನುಷ್ಯನ ಹೃದಯದೊಳಗಡೆಯ ನೆಮ್ಮದಿಯನ್ನು ನಾಶಪಡಿಸಲು (ಅಂತಕಳು) ಮಾಯೆಯು ಕಾರಣಕರ್ತಳಾಗುತ್ತಾಳೆ. ಆದರೆ ಸ್ವಂತಲಾಭದ ಯೋಚನೆಗೆ ಆಸ್ಪದವಿಲ್ಲದಿರುವ ಜಾಗದಲ್ಲಿ ಅವಳ ಆಟವು ಮಾಯೆಯಿಲ್ಲದಿರುವುದರಲ್ಲಿ ಕೊನೆಗಾಣುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Maya, exudes her enchanting radiance and deludes us
She, then smashes our peace of mind and makes us uneasy
But where there is no thought of personal profit
There ends her play and Maya disappears – Marula Muniya
(Translation from "Thus Sang Marula Muniya" by Sri. Narasimha Bhat)

Friday, August 23, 2013

ಮೃತ್ಯುಂಜಯನುಮುಮೆಯುಮೀ ವಿಶ್ವರಂಗದಲಿ (488)

ಮೃತ್ಯುಂಜಯನುಮುಮೆಯುಮೀ ವಿಶ್ವರಂಗದಲಿ |
ಸತ್ಯಸೌಂದರ್ಯಂಗಳಾಗಿ ರಾಜಿಸುತೆ ||
ನೃತ್ಯವಾಡುವರು ಜೀವಾತ್ಮ ಮಾಯೆಗಳಾಗಿ |
ನಿತ್ಯದ ವಿಲಾಸವದು - ಮರುಳ ಮುನಿಯ || (೪೮೮)

(ಮೃತ್ಯುಂಜಯನುಂ+ಉಮೆಯುಂ+ಈ)(ಸತ್ಯಸೌಂದರ್ಯಂಗಳ್+ಆಗಿ)(ಮಾಯೆಗಳ್+ಆಗಿ)(ವಿಲಾಸ+ಅದು)

ಶಿವ ಮತ್ತು ಪಾರ್ವತಿಯರು ಈ ಪ್ರಪಂಚವೆಂಬ ನಾಟಕ ರಂಗಸ್ಥಳದಲ್ಲಿ ಸತ್ಯ ಮತ್ತು ಸೌಂದರ್ಯಗಳಾಗಿ ಪ್ರಕಾಶಿಸಿ ಹೊಳೆಯುತ್ತಾ, ಜೀವಾತ್ಮ ಮತ್ತು ಮಾಯೆಗಳಾಗಿ ನಾಟ್ಯವನ್ನಾಡುತ್ತಾರೆ. ಇದು ಪ್ರತಿದಿನವೂ ನಡೆಯುತ್ತಿರುವ ಕ್ರೀಡೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Mruthyunjaya, the Vanquisher of Death and Uma, his consort
Shine in all glory as Truth and Beauty
They dance as Soul and Maya on the world stage
Eternal is this blissful play – Marula Muniya
(Translation from "Thus Sang Marula Muniya" by Sri. Narasimha Bhat)

Thursday, August 22, 2013

ನಟರಾಜನಂಗಾಂಗವಲುಗಿ ಬಳಕಲು ವಿಶ್ವ (487)

ನಟರಾಜನಂಗಾಂಗವಲುಗಿ ಬಳಕಲು ವಿಶ್ವ - |
ಘಟದಿ ರಸ ಕುಲುಕುವುದು ಜೀವ ಚಲಿಸುವುದು ||
ಚಟುಲ ತಾಂಡವ ತಾಳಲಯವೆ ಸೃಷ್ಟಿಪ್ರಳಯ |
ನಟಿಯಿಚ್ಛೆ ನಾಟ್ಯವಿಧಿ - ಮರುಳ ಮುನಿಯ || (೪೮೭)

(ನಟರಾಜನ್+ಅಂಗಾಂಗ+ಅಲುಗಿ)

ಶಿವನು ನಾಟ್ಯವಾಡುತ್ತಿರುವಾಗ ಅವನ ಅಂಗಾಂಗಗಳು ಅಲುಗಾಡಿ, ಬಳುಕಲು, ಪ್ರಪಂಚವೆಂಬ ಮಣ್ಣಿನ ಮಡಕೆ(ಘಟಿ)ಯಲ್ಲಿರುವ ರಸವೂ ಸಹ ಕುಲುಕಾಡುತ್ತದೆ ಮತ್ತು ಜೀವಿಗಳು ಚಲಿಸುತ್ತವೆ. ಈ ರೀತಿಯ ಚುರುಕಾದ (ಚಟುಲ) ನೃತ್ಯಗತಿ, ತಾಳ ಮತ್ತು ಲಯಗಳೇ ಸೃಷ್ಟಿಯ ಪ್ರಳಯ. ನಾಟ್ಯದ ಕ್ರಮವು ನಟಿಯ ಇಚ್ಛೆಯಂತೆ ಸಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When Nataraja, the cosmic dancer shakes and bends his body
The juice in the world vessel shakes and like becomes vibrant
Creation and dissolution depends of the quick and tandava beat and rhythms
Dance depends on the Dancer’s mood – Marula Muniya
(Translation from "Thus Sang Marula Muniya" by Sri. Narasimha Bhat)

Wednesday, August 21, 2013

ಬೇವು ಬೆಲ್ಲಗಳುಂಡೆ ದಿನದಿನದ ನಮ್ಮೂಟ (486)

ಬೇವು ಬೆಲ್ಲಗಳುಂಡೆ ದಿನದಿನದ ನಮ್ಮೂಟ |
ಪೂರ್ವಕರ್ಮದ ಫಲಿತಶೇಷದಿಂದ ಕಹಿ ||
ದೈವ ಪ್ರಸಾದದಿಂದ ಸಿಹಿಯೀ ದ್ವಂದ್ವದಲಿ |
ಆವೇಶವೇತಕೋ - ಮರುಳ ಮುನಿಯ || (೪೮೬)

(ಬೆಲ್ಲಗಳ+ಉಂಡೆ)(ನಮ್ಮ+ಊಟ)(ಆವೇಶ+ಏತಕೋ)

ಪ್ರತಿದಿನವೂ ನಾವು ಸೇವಿಸುವ ಊಟದಲ್ಲಿ ಬೇವು ಮತ್ತು ಬೆಲ್ಲ, ಎಂದರೆ ಸಿಹಿ ಮತ್ತು ಕಹಿಗಳು ಬೆರೆತಿರುತ್ತವೆ. ನಮ್ಮ ಪೂರ್ವಜನ್ಮಗಳ ಕರ್ಮಗಳ ಫಲವಾಗಿ ನಾವು ಕಹಿಯನ್ನುಣ್ಣಬೇಕಾಗುತ್ತದೆ. ಪರಮಾತ್ಮನ ಕೃಪೆಯಿಂದ ನಮಗೆ ಸಿಹಿಯೂಟವು ದೊರೆಯುತ್ತದೆ. ಈ ರೀತಿಯ ಪರಸ್ಪರ ವಿರುದ್ಧ ಫಲಗಳನ್ನು ಅನುಭವಿಸಲೇ ಬೇಕಿದ್ದಾಗ, ಆಗ್ರಹಗೊಳ್ಳುವ ಪ್ರಶ್ನೆಯೆಲ್ಲಿಂದ ಬಂತು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Our everyday day food is a well mixed dish of neem and jaggery
It’s bitter due to the residual effect of past Karma
It’s sweet due to the grace of God and why do you over react
To sweetness and bitterness? – Marula Muniya
(Translation from "Thus Sang Marula Muniya" by Sri. Narasimha Bhat)

Tuesday, August 20, 2013

ಸ್ಮರಣೆಗೊದಗುವ ಪೂರ್ವಪರಿಚಿತಿಯ ಚಿಹ್ನಮಂ (485)

ಸ್ಮರಣೆಗೊದಗುವ ಪೂರ್ವಪರಿಚಿತಿಯ ಚಿಹ್ನಮಂ |
ಬೆರಗುಗೊಳಿಸುವ ನವ್ಯಭಾವ ವರ್ಣಗಳುಂ ||
ಬೆರತೇಕವಾಗಿ ಮಾನವ ಪಿಡಿಯೆ ಸೌಂದರ್ಯ |
ಪರಿಮಾಣಯುಕ್ತಿಯದು - ಮರುಳ ಮುನಿಯ || (೪೮೫)

(ಸ್ಮರಣೆಗೆ+ಒದಗುವ)(ಬೆರತು+ಏಕವಾಗಿ)

ತನ್ನ ಜ್ಞಾಪಕ(ಸ್ಮರಣೆ)ಕ್ಕೆ ಬರುವ ಹಿಂದಿನ (ಪೂರ್ವ) ಪರಿಚಯವುಳ್ಳ ಗುರುತು(ಚಿಹ್ನ)ಗಳು ಮತ್ತು ಆಶ್ಚರ್ಯ(ಬೆರಗು)ಗೊಳಿಸುವ ಹೊಸ ಭಾವನೆ ಮತ್ತು ಬಣ್ಣಗಳು ಸೇರಿಕೊಂಡು ಒಂದಾಗುವಂತೆ ಮಾಡಿ ಮಾನವನು ಅದನ್ನು ಅರ್ಥ ಮಾಡಿಕೊಂಡಾಗ ಸೌಂದರ್ಯವು ದೊರಕುತ್ತದೆ. ಹಿಡಿತಕ್ಕೆ ಸಿಗುವಂತಹ ಸಮಯೋಚಿತ ಜ್ಞಾನ ಇದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

It is a thing of beauty when man sees the all too familiar sign
That he remembers and the new wonderful emotions and hues as one
That fascinates him as one world of art
Beauty is a matter of right proportions – Marula Muniya
(Translation from "Thus Sang Marula Muniya" by Sri. Narasimha Bhat)

Tuesday, August 13, 2013

ಏಕದೊಳನೇಕವನ್ ಅನೇಕದೊಳಗೇಕವನ್ (484)

ಏಕದೊಳನೇಕವನ್ ಅನೇಕದೊಳಗೇಕವನ್ |
ಸ್ವೀಕರಿಸಿ ತಾನದರೊಳೊಂದೊಂದುವೆರೆದು ||
ಸಾಕಲ್ಯದಿಂದೆಲ್ಲ ನೋಡುವಾತ್ಮಜ್ಞಂಗೆ |
ಶೋಕ ವೈರಗಳೆಲ್ಲಿ ?- ಮರುಳ ಮುನಿಯ || (೪೮೪)

(ಏಕದೊಳ್+ಅನೇಕವನ್)(ಅನೇಕದೊಳಗೆ+ಏಕವನ್)(ತಾನ್+ಅದರೊಳ್+ಒಂದೊಂದುವೆರೆದು)(ನೋಡುವ+ಆತ್ಮಜ್ಞಂಗೆ)(ಸಾಕಲ್ಯದಿಂದ+ಎಲ್ಲ)(ವೈರಗಳು+ಎಲ್ಲಿ)

ಒಂದರಲ್ಲಿ ಬಹುವಾಗಿರುವುದನ್ನೂ ಮತ್ತು ಬಹುವಾಗಿರುವುದರಲ್ಲಿ ಒಂದನ್ನೂ ಅಂಗೀಕರಿಸಿ, ತಾನು ಅದರೊಂದೊಂದರಲ್ಲೂ ಸೇರಿಕೊಂಡು, ಪರಿಪೂರ್ಣತೆಯ ದೃಷ್ಟಿಯಿಂದ ಎಲ್ಲವನ್ನೂ ಕಾಣುವ ಆತ್ಮಜ್ಞಾನಿಗೆ ದುಃಖ ಮತ್ತು ದ್ವೇಷಗಳೆಲ್ಲಿರುತ್ತವೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The self-realized one sees all souls in his one soul
And his soul in all the souls and feels one with each one of them
He, with universal vision sees all beings and things as one
Has no sorrow and enmity in him – Marula Muniya
(Translation from "Thus Sang Marula Muniya" by Sri. Narasimha Bhat)

Monday, August 12, 2013

ಹಳೆಯ ತೋಟದಲಿ ಹೊಸ ಚಿಗುರೊಡೆಯೆ ಸೌಂದರ್ಯ (483)

ಹಳೆಯ ತೋಟದಲಿ ಹೊಸ ಚಿಗುರೊಡೆಯೆ ಸೌಂದರ್ಯ |
ಬಳಕೆ ಮೊಗದಲಿ ತೋರ‍್ಪ ಹೊಸ ನಗುವೆ ಸೊಗಸು ||
ತಿಳಿದುದರ ನಡುವೆ ಹೊಸ ಮೆರುಗೊಂದೆಸೆಯೆ ಕುತುಕ |
ಹಳತು ಹೊಸತೊಂದು ರುಚಿ - ಮರುಳ ಮುನಿಯ || (೪೮೩)

(ಚಿಗುರು+ಒಡೆಯೆ)(ಮೆರುಗು+ಒಂದು+ಎಸೆಯೆ)(ಹೊಸತು+ಒಂದು)

ತೋಟವು ಹಳೆಯದಾದರೂ ಆ ತೋಟದ ಒಂದು ಗಿಡದಲ್ಲಿ ಒಂದು ಹೊಸ ಚಿಗುರು ಕಾಣಿಸಿಕೊಂಡರೆ ಅದು ಸುಂದರ ಮತ್ತು ಮನೋಹರವಾಗಿ ಕಾಣುತ್ತದೆ. ಪ್ರತಿನಿತ್ಯವೂ ನೋಡಿ ಅಭ್ಯಾಸವಾಗಿರುವ ಮುಖದಲ್ಲಿ ಕಾಣಿಸುವ ಒಂದು ಹೊಸ ನಗುವು, ಚೆಲುವು ಮತ್ತು ಶೋಭಾಯಮಾನವಾಗಿ ಕಾಣುತ್ತದೆ. ನಮಗೆ ತಿಳಿದಿರುವುದರ ಮಧ್ಯದಲ್ಲಿ ಒಂದು ಹೊಸ ಹೊಳಪು(ಮೆರಗು) ಹುಟ್ಟಿ(ಎಸೆ)ಕೊಂಡರೆ ನಮಗೆ ಕುತೂಹಲ ಮತ್ತು ಆಶ್ಚರ್ಯವುಂಟಾಗುತ್ತದೆ. ಈ ರೀತಿಯಾಗಿ ಹಳೆಯದು ಮತ್ತು ಹೊಸದು ಎರಡೂ ಬೆರೆತರೆ ಒಳ್ಳೆಯ ರುಚಿ ದೊರಕುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

It is beautiful when new springs in old garden
It is graceful when a fresh smile lights up a familiar face
It arouses curiosity when a fresh glow brightens a thing well known
It will be a new taste when the old and new mingle – Marula Muniya
(Translation from "Thus Sang Marula Muniya" by Sri. Narasimha Bhat)

Friday, August 9, 2013

ಸಾಕೂತಮರಸಿ ಜಾನಿಸುತಿರ‍್ಪವಂ ಭಕ್ತ (482)

ಸಾಕೂತಮರಸಿ ಜಾನಿಸುತಿರ‍್ಪವಂ ಭಕ್ತ |
ಮೂಕನಂತಿಹನಾಂತು ತೃಪ್ತಿಯಿಂ ಜ್ಞಾನಿ ||
ಬೇಕೆನ್ನುವಂ ದ್ವೈತಿ ಬಂತೆನುವನದ್ವೈತಿ |
ಏಕವಿರ‍್ವರ ಲಕ್ಷ್ಯ - ಮರುಳ ಮುನಿಯ || (೪೮೨)

(ಸಾಕೂತಂ+ಅರಸಿ)(ಜಾನಿಸುತ+ಇರ‍್ಪವಂ)(ಮೂಕನಂತ್+ಇಹನ್+ಆಂತು)(ಬೇಕು+ಎನ್ನುವಂ)(ಬಂತು+ಎನುವನ್+ಅದ್ವೈತಿ)(ಏಕ+ಇರ‍್ವರ)

ಭಕ್ತನು ಅಭಿಪ್ರಾಯ ಸಹಿತವಾಗಿರುವುದನ್ನು (ಸಾಕೂತಂ) ಹುಡುಕಿಕೊಂಡು ಸದಾಕೂಲವೂ ಧ್ಯಾನಿಸು(ಜಾನಿಸು)ತ್ತಿರುತ್ತಾನೆ. ಎಲ್ಲವನ್ನೂ ತಿಳಿದುಕೊಂದಿರುವ ಜ್ಞಾನಿಯಾದರೋ ತೃಪ್ತಿ ಮತ್ತು ಸಮಾಧಾನಚಿತ್ತದಿಂದ ಮೂಕನಂತೆ ಮೌನವಾಗಿರುತ್ತಾನೆ. ಬೇಕು ಎನ್ನುವವನು ದ್ವೈತಿ, ಸಿಕ್ಕಿದೆ ಎನ್ನುವವನು ಅದ್ವೈತಿ. ಇಬ್ಬರ ಗುರಿಯೂ ಒಂದೇ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

He who with resolute purpose strives to find out and mediates is a devotee
He who with total contentment remains dumb is the realized soul
He who still desires to get is a dualist and he who fully feels that
He has received the desired is a monist but the target of both is same – Marula Muniya
(Translation from "Thus Sang Marula Muniya" by Sri. Narasimha Bhat)

Thursday, August 8, 2013

ಏಕವೇ ಸದ್ವಸ್ತುವಾಯೇಕದಾ ಪ್ರಭೆಯೆ (481)

ಏಕವೇ ಸದ್ವಸ್ತುವಾಯೇಕದಾ ಪ್ರಭೆಯೆ |
ಲೋಕಮಾಯಾಚಿತ್ರವದೆ ಜೀವಮೂಲ ||
ಸಾಕಲ್ಯದೃಷ್ಟಿಯಿಂ ನಾನಾತ್ತ್ವದ ಭ್ರಮೆಯ |
ನೂಕಲರಿತವನೆ ಕೃತಿ - ಮರುಳ ಮುನಿಯ || (೪೮೧)

(ಸದ್ವಸ್ತು+ಆ+ಏಕದಾ)(ನೂಕಲು+ಅರಿತವನೆ)

ಪರಮಾತ್ಮನೆಂಬ ಶ್ರೇಷ್ಠವಾದ ವಸ್ತು ಒಂದೇ ಒಂದು. ಅದರ ಕಾಂತಿ(ಪ್ರಭೆ)ಯೇ ಈ ಪ್ರಪಂಚದ ಮಾಯೆಯಿಂದ ಕೂಡಿದ ಚಿತ್ರ. ಇದೇ ಜೀವಿಗಳ ಮೂಲ. ಪರಿಪೂರ್ಣ ದೃಷ್ಟಿಯಿಂದ ಈ ವಿಧವಿಧವಾದ ಆಕಾರಗಳ ತಪ್ಪುಗ್ರಹಿಕೆಯನ್ನು ಹೋಗಲಾಡಿಸಿಕೊಂಡು ಮೂಲವಸ್ತುವನ್ನು ಏಕವಾಗಿ ನೋಡಲು ತಿಳಿದುಕೊಂಡವನೇ ಚತುರ ಮತ್ತು ಪಂಡಿತ(ಕೃತಿ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The Divine substance is one and all this illusory world picture
Is the effulgence of the One and That alone is the source of all life
He who drives off the illusion of diversity with universal vision
Alone is the true achiever- Marula Muniya (481)
(Translation from "Thus Sang Marula Muniya" by Sri. Narasimha Bhat)

Wednesday, August 7, 2013

ಪ್ರಾಪಂಚಿಕ ಪ್ರಗತಿ ಭೇಕಪ್ಲುತ ಪ್ರತತಿ (480)

ಪ್ರಾಪಂಚಿಕ ಪ್ರಗತಿ ಭೇಕಪ್ಲುತ ಪ್ರತತಿ |
ಪಾಪಮೋಚನೆಕೆಂದು ತಪಿಸಿ ಮೇನಕೆಯಾ - ||
ರೂಪಕ್ಕೆ ಸೆರೆಬಿದ್ದ ಕೌಶಿಕನ ಚರಿತೆಯದು |
ಶಾಪವದು ಮಧುಲೇಪ - ಮರುಳ ಮುನಿಯ || (೪೮೦)

(ಪಾಪಮೋಚನೆಕೆ+ಎಂದು)(ಚರಿತೆ+ಅದು)(ಶಾಪ+ಅದು)

ಪ್ರಪಂಚಕ್ಕೆ ಸಂಬಂಧಿಸಿದ ಮುನ್ನಡೆ ಮತ್ತು ಏಳಿಗೆಗಳು ಕಪ್ಪೆ(ಭೇಕ)ಗಳು ನಿಧಾನವಾಗಿ ಕುಪ್ಪಳಿಸಿ(ಪ್ಲುತ)ಕೊಂಡು ಹೋಗುವಂತಹ ಸಮೂಹ(ಪ್ರತತಿ)ಗಳು. ತನ್ನ ಕೆಟ್ಟ ಕೆಲಸಗಳ ಫಲಗಳಿಂದ ಬಿಡುಗಡೆಗಾಗಿ ತಪಸ್ಸನ್ನು ಆಚರಿಸಿ, ನಂತರ ಅದನ್ನು ಭಂಗಗೊಳಿಸಲು ಬಂದ ಮೇನಕೆಯ ಸೌಂದರ್ಯಕ್ಕೆ ಸಿಕ್ಕಿಹಾಕಿಕೊಂಡ ವಿಶ್ವಾಮಿತ್ರ ಋಷಿಯ ಕಥೆಯಂತೆ, ಈ ಜೇನಿ(ಮಧು)ನ ಸವರಿಕೆಯೂ ಒಂದು ಶಾಪವೇ ಸರಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Worldly progress is akin to frog’s hopping movement,
It is the old tale of Kaushika who conducted penance to free himself from sins
But who became a captive in the fascinating beauty of Menaka
The curse was a coat of honey – Marula Muniya
(Translation from "Thus Sang Marula Muniya" by Sri. Narasimha Bhat)

Tuesday, August 6, 2013

ಪರತತ್ತ್ವ ಸಿಂಧುವೊಳು ಚರಜೀವ ಬಿಂದುವನು- (479)

ಪರತತ್ತ್ವ ಸಿಂಧುವೊಳು ಚರಜೀವ ಬಿಂದುವನು- |
ಮೆರಡು ಬೇರೆನಿಪವೊಲು ಮಾಡಿಹಳು ಮಾಯೆ ||
ಸರಸದಾಟವೊ ಮಾಯೆ ಪರಸತ್ತ್ವಕದು ಲೀಲೆ |
ಪರಿಪರಿಯ ವೇಷವದು - ಮರುಳ ಮುನಿಯ || (೪೭೯)

(ಬಿಂದುವನು+ಎರಡು)(ಬೇರೆ+ಎನಿಪವೊಲು)(ಸರಸದ+ಆಟವೊ)(ಪರಸತ್ತ್ವಕೆ+ಅದು)

ಪರಮಾತ್ಮನೆಂಬ ಶ್ರೇಷ್ಠವಾದ ಸಾಗರದಲ್ಲಿ, ಚಲಿಸುವ ಜೀವವೆಂಬ ಹನಿ(ಬಿಂದು)ಯನ್ನು ಅವುಗಳೆರಡೂ ಬೇರೆ ಎಂದು ಕಾಣುವಂತೆ ಮಾಯೆಯು ಮಾಡಿದ್ದಾಳೆ. ಮಾಯೆಯೆನ್ನುವುದು ಒಂದು ವಿನೋದವಾದ ಆಟ. ಪರಮಾತ್ಮನಿಗೆ ಅದು ಒಂದು ಕ್ರೀಡೆ. ಅದು ವಿಧವಿಧವಾದ ಪಾತ್ರ ಮತ್ತು ವೇಷಗಳಷ್ಟೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The moving soul is a drop in the ocean of Divine Reality
Maya’s influence makes the two appear entirely different
It is a merriment to Maya and a divine play to the Divine Substance
It appears in many guises – Marula Muniya
(Translation from "Thus Sang Marula Muniya" by Sri. Narasimha Bhat)

Monday, August 5, 2013

ಮಂಕುತಿಮ್ಮನದಾರು? ಅವನಲ್ಲದವನಾರು?

ಮಂಕುತಿಮ್ಮನದಾರು? ಅವನಲ್ಲದವನಾರು? |
ಡೊಂಕುಬಾಲವೆ ಕುಲಧ್ವಜವಲ್ತೆ ನಮಗೆ? ||
ಮಂಗಮನ ಮಂಜುಕಣ್ ನನಗೆ ನಿನಗೆಲ್ಲರಿಗೆ |
ಸಂಕೋಚ ನಮಗೇಕೋ?- ಮರುಳ ಮುನಿಯ || (೪೭೮)

(ಮಂಕುತಿಮ್ಮನು+ಅದು+ಆರು)(ಅವನ್+ಅಲ್ಲದವನ್+ಆರು)(ಕುಲಧ್ವಜ+ಅಲ್ತೆ)(ನಿನಗೆ+ಎಲ್ಲರಿಗೆ)(ನಮಗೆ+ಏಕೋ)

ಪ್ರಪಂಚದಲ್ಲಿ ವಾಸಿಸುತ್ತಿರುವ ಜನಗಳಲ್ಲಿ ಯಾರು ಮಂಕುತಿಮ್ಮ ಅಥವಾ ಮಂಕುತಿಮ್ಮನಲ್ಲದಿರುವನು ಯಾರು? ಕೋತಿಗಿರುವ ಡೊಂಕುಬಾಲವೇ ನಮ್ಮ ಕಾಲದ ಬಾವುಟವಲ್ಲವೇನು? ನನಗೂ, ನಿನಗೂ ಮತ್ತೆ ಎಲ್ಲರಿಗೂ ಕೋತಿಯ ಮನಸ್ಸು ಮತ್ತು ಮಬ್ಬು ದೃಷ್ಟಿಗಳಿರುವುದು ತಾನೆ? ಇವನ್ನು ಹೇಳಿಕೊಳ್ಳಬೇಕಾದ್ದರಲ್ಲಿ ಸಂಕೋಚ ಮತ್ತು ದಾಕ್ಷಿಣ್ಯವೇಕೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Who is Mankutimma? Is there anyone who is not he?
Is not the twisted tail the banner of our race?
Monkey mind and misty eyes to you and me and to all
Why hesitate then to own the truth – Marula Muniya
(Translation from "Thus Sang Marula Muniya" by Sri. Narasimha Bhat)

Friday, August 2, 2013

ಮೇಯಪ್ರಪಂಚದೊಳಮೇಯ ಶಕ್ತಿಗಳಾಟ (477)

ಮೇಯಪ್ರಪಂಚದೊಳಮೇಯ ಶಕ್ತಿಗಳಾಟ |
ಜ್ಞೇಯಗಳ ನಡುನಡುವೆ ದುರ್ಜ್ಞೇಯ ಗೂಢ ||
ಕಾಯದಳತೆಯ ಕೋಲು ಮನವನೆಂತಳೆದೀತು ? |
ಮಾಯೆಯಾಟ ಜಗತ್ತು - ಮರುಳ ಮುನಿಯ || (೪೭೭)

(ಮೇಯಪ್ರಪಂಚದೊಳ್+ಅಮೇಯ)(ಕಾಯದ+ಅಳತೆಯ)(ಮನವನ್+ಎಂತು+ಅಳೆದೀತು)

ನಮ್ಮ ಅಳತೆಗೆ ಸಿಕ್ಕುವಂತಹ (ಮೇಯ) ಪ್ರಪಂಚದಲ್ಲಿ ನಮ್ಮ ಅಳತೆಗೆ ಸಿಗದಿರುವಂತಹ (ಅಮೇಯ) ಶಕ್ತಿಗಳ ಆಟಗಳಿವೆ. ತಿಳಿದಿರುವುದರ ನಡುವೆ ತಿಳುವಳಿಕೆಗೆ ಸಿಗದಿರುವಂತಹವು ಬಚ್ಚಿಟ್ಟುಕೊಂಡಿವೆ. ದೇಹ(ಕಾಯ)ವನ್ನು ಅಳೆಯಲುಪಯೋಗಿಸುವ ಮಾನದಂಡದಿಂದ ಮನಸ್ಸನ್ನಳೆಯಲು ಸಾಧ್ಯವೇನು? ಈ ಪ್ರಪಂಚವು ನಿಜಕ್ಕೂ ಮಾಯೆಯ ಕ್ರೀಡೆಯೇ ಸರಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Unknown forces are at play in the known world
Unknown mystery here and there amidst the known things
Can the meter-scale that measures the body measure the mind?
This world is nothing but a play of Maya – Marula Muniya (477)
(Translation from "Thus Sang Marula Muniya" by Sri. Narasimha Bhat)

Wednesday, July 31, 2013

ಮಾಯೆ ಮಾಯೆಯಿದೆಂದು ಹಳಿದೊಡಾಗುವುದೇನು (476)

ಮಾಯೆ ಮಾಯೆಯಿದೆಂದು ಹಳಿದೊಡಾಗುವುದೇನು ? |
ಕಾಯವಿರುವನಕ ಸಂಸಾರಬಿಡದಿಹುದು ||
ಲಾಯದೊಳಗಿರುವಂದು ಬಯಲ ಮರೆಯದ ಕುದುರೆ- |
ಗಾಯಾಸ ಭಯ ಹಗುರ - ಮರುಳ ಮುನಿಯ || (೪೭೬)

(ಮಾಯೆಯು+ಇದು+ಎಂದು)(ಹಳಿದೊಡೆ+ಆಗುವುದು+ಏನು)(ಕಾಯ+ಇರುವನಕ)(ಸಂಸಾರಬಿಡದೆ+ಇಹುದು)(ಲಾಯದೊಳಗೆ+ಇರುವಂದು)(ಕುದುರೆಗೆ+ಆಯಾಸ)

ನಾನಿರುವುದು ಈ ಮಾಯಾಪ್ರಪಂಚದಲ್ಲಿ, ಆದರೆ ಬ್ರಹ್ಮನೇ ಸತ್ಯ ಮಿಕ್ಕಿದ್ದುದೆಲ್ಲ ಮಿಥ್ಯವೆಂದು ನಿಂದಿಸಿದರೇನು ಉಪಯೋಗ? ನಾವು ಈ ದೇಹವನ್ನು ಧರಿಸಿರುವತನಕ ಸಂಸಾರ ನಮಗೆ ಅಂಟಿದ್ದೇ. ಒಂದು ಕುದುರೆಯನ್ನು ಅದರ ಲಾಯದಲ್ಲಿ ಕಟ್ಟಿಹಾಕಿದಾಗ ಅದು ತಾನು ಬಯಲಲ್ಲಿ ಹಾಯಾಗಿರುವುದನ್ನು ಮರೆಯದಿದ್ದರೆ, ಅದಕ್ಕೆ ಕಷ್ಟ ಮತ್ತು ಹೆದರಿಕೆಗಳನ್ನು ಸಹಿಸಲು ಸಾಧ್ಯವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

There is no gain if you decry the world as Maya
The worldly bonds will never let you go as long as your body lasts,
Less intense will be the fear of weariness to the horse in the stable
If it continues to remember the open plains – Marula Muniya
(Translation from "Thus Sang Marula Muniya" by Sri. Narasimha Bhat)

Tuesday, July 30, 2013

ಯುವತಿ ನವ ಹಾವಭಾವಗಳಿಂದನುಕ್ಷಣಮ್ (475)

ಯುವತಿ ನವ ಹಾವಭಾವಗಳಿಂದನುಕ್ಷಣಮ್ |
ನವತೆಯಾನುತಿರೆ ಯುವಕಂ ಬೆರಗುಪಡುವವೊಲ್ ||
ವಿವಿಧವೇಷದಿ ನವ್ಯತೆಯನಾನುತಿರೆ ಮಾಯೆ |
ಶಿವನು ಸುಖತನ್ಮಯನೊ - ಮರುಳ ಮುನಿಯ || (೪೭೫)

(ಹಾವಭಾವಗಳಿಂದ+ಅನುಕ್ಷಣಮ್)(ನವತೆ+ಆನುತ+ಇರೆ)(ನವ್ಯತೆಯನ್+ಆನುತ+ಇರೆ)

ಒಬ್ಬ ಸುಂದರವಾದ ಯುವತಿ ತನ್ನ ಹೊಸ ಹೊಸ ಬೆಡಗು ಮತ್ತು ಬಿನ್ನಾಣಗಳಿಂದ, ಪ್ರತಿಕ್ಷಣವೂ ಹೊಸತನವನ್ನು ಹೊಂದುತ್ತಿರಲು, ಅದನ್ನು ನೋಡಿ ಆಶ್ಚರ್ಯ(ಬೆಡಗು)ಪಡುತ್ತಿರುವ ಯುವಕನಂತೆ, ವಿಧವಿಧವಾದ ಪಾತ್ರಗಳನ್ನು ಧರಿಸಿ ಮಾಯೆಯೂ ಸಹ ಹೊಸತನವನ್ನು ತಳೆಯುತ್ತಿರಲು, ಪರಮಾತ್ಮನು ಅದರಲ್ಲಿ ಸುಖ ಸಂತೋಷದಿಂದ ತಲ್ಲೀನನಾಗಿರುತ್ತಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When a young maiden appears new every moment with new graceful
Amorous airs and arts, a youth becomes fascinated and wonder-struck
Likewise when Maya appears new with new graceful guises every moment
Shiva becomes immersed in joy – Marula Muniya (475)
(Translation from "Thus Sang Marula Muniya" by Sri. Narasimha Bhat)

Monday, July 29, 2013

ಆರನುಂ ಬಿಡದ ಧರ್ಮಂ ಜಗದ್ರಥಸೇವೆ (474)

ಆರನುಂ ಬಿಡದ ಧರ್ಮಂ ಜಗದ್ರಥಸೇವೆ |
ಧೀರನೆಳೆವಂ ಬ್ರಹ್ಮಲೀಲೆಯೆಂದದನು ||
ತೇರು ನಿಜ ಭೋಗ್ಯ ಸಂಸಾರವೆಂಬ ಭ್ರಮೆಗೆ |
ಮಾರುವೋದಂ ಮೂಢ - ಮರುಳ ಮುನಿಯ || (೪೭೪)


(ಜಗತ್+ರಥಸೇವೆ)(ಧೀರನ್+ಎಳೆವಂ)(ಬ್ರಹ್ಮಲೀಲೆ+ಎಂದು+ಅದನು)(ಸಂಸಾರ+ಎಂಬ)

ಪ್ರಪಂಚವೆಂಬ ರಥದ ಸೇವೆಯನ್ನು ಮಾಡುವುದು ಯಾರನ್ನೂ ಬಿಡದಿರುವ ಕರ್ತವ್ಯ. ಶೂರನಾದವನು ಅದನ್ನು ಪರಬ್ರಹ್ಮನ ಕ್ರೀಡೆಯೆಂದು ಅರಿತು ಎಳೆಯುತ್ತಾನೆ. ತೇರು ತಾನು ಅನುಭವಿಸುವ ಸಂಸಾರ ಸುಖವೆಂಬ ತಪ್ಪುಗ್ರಹಿಕೆಗೆ ಮರುಳಾಗುವವನು(ಮಾರುವೋದಂ) ಒಬ್ಬ ಮೂರ್ಖನೇ ಸರಿ.
(
ಕೃಪೆ: ಶ್ರೀ. ಶ್ರೀಕಾಂತ್ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Pulling this world chariot is the bounden duty of every person.
The self-realized brave pulls it knowing it to be the play of God
But, one, who under illusion mistakes it to be his own family affair
For his own family enjoyment is a fool – Marula Muniya (474)
(Translation from "Thus Sang Marula Muniya" by Sri. Narasimha Bhat)